ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣ ರೇಖೆ(ಎಲ್’ಒಸಿ) ಬಳಿಯಿರುವ ಕೃಷ್ಣ ಘಾಟಿ ಸೆಕ್ಟರ್’ನಲ್ಲಿ ಪಾಕಿಸ್ಥಾನ ಸೇನೆ ನಡೆಸಿದ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆಯ ಯೋಧರೋರ್ವರು ವೀರಸ್ವರ್ಗ ಸೇರಿದ್ದಾರೆ.
ಪೂಂಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ಯೋಧ ನಾಯ್ಕ್ ರವಿ ರಂಜನ್ ಕುಮಾರ್ ಸಿಂಗ್(36) ಅವರು ವೀರಸ್ವರ್ಗ ಸೇರಿದ್ದಾರೆ.
ಇಂದು ಮುಂಜಾನೆ 11 ಗಂಟೆ ವೇಳೆಗೆ ಪಾಕ್ ಸೈನಿಕರು ಈ ಪ್ರದೇಶದಲ್ಲಿ ಮಾರ್ಟರ್ ಶೆಲ್ ದಾಳಿ ಹಾಗೂ ಗುಂಡಿನ ದಾಳಿ ನಡೆಸಿದ್ದು, ಪರಿಣಾಮವಾಗಿ ಭಾರತೀಯ ಸೇನೆಯ ನಾಲ್ವರು ಯೋಧರು ಗಾಯಗೊಂಡಿದ್ದಾರೆ.
ಶತ್ರುಗಳ ದಾಳಿ ದಿಟ್ಟ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು, ಪಾಕ್ ಸೇನೆಗೆ ಸೇರಿದ ಪೋಸ್ಟ್’ಗಳನ್ನು ಧ್ವಂಸ ಮಾಡಿದ್ದಾರೆ. ಸಿಟ್ಟಿಗೆದ್ದ ಭಾರತೀಯ ಯೋಧರು ಪಾಕ್ ಯೋಧರ ಮೇಲೆ ಭಾರೀ ದಾಳಿ ನಡೆಸಿದ್ದು, ಆ ಕಡೆಯಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.
Discussion about this post