ನವದೆಹಲಿ: ರಾಜ್ಯದ ಹಲವೆಡೆ ಉಂಟಾಗಿರುವ ನೆರೆ ಹಾವಳಿಯಿಂದ ಉಂಟಾದ ತೊಂದರೆ ಸರಿಪಡಿಸಲು 1 ಸಾವಿರ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಈ ಕುರಿತಂತೆ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿದ್ದ ಉನ್ನತ ಮಟ್ಟದ ಸಮಿತಿ ಕೇಂದ್ರದಿಂದ ಹೆಚ್ಚುವರಿ ನೆರವು ಬಿಡುಗಡೆಗೆ ಇಂದು ಒಪ್ಪಿಗೆ ಸೂಚಿಸಿದ್ದು, ಇದರಂತೆ ರಾಜ್ಯಕ್ಕೆ 1029.39 ಕೋಟಿ ರೂ. ಅನುದಾನ ಶೀಘ್ರದಲ್ಲೇ ಬರಲಿದೆ.
ಕರ್ನಾಟಕ ಸೇರಿದಂತೆ ಒಡಿಶಾ ಹಾಗೂ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಗಳಿಂದ ಉಂಟಾದ ಅನಾಹುಗಳ ನಿರ್ವಹಣೆಗಾಗಿ ಮೂರು ರಾಜ್ಯಗಳಿಗೆ ಸೇರಿ ಒಟ್ಟು 4432.10 ಕೋಟಿ ರೂ. ನೆರವನ್ನು ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ವರದಿಗಳನ್ನು ಆಧರಿಸಿ, ಮತ್ತಷ್ಟು ಅನುದಾನ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
Discussion about this post