ನವದೆಹಲಿ: ಭಾರತದ ಸಾಂಪ್ರದಾಯಿಕ ಶತ್ರುರಾಷ್ಟ್ರ ಪಾಕಿಸ್ಥಾನ ಭಾರತದ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು 600 ಯುದ್ದ ಟ್ಯಾಂಕರ್ ಗಳನ್ನು ಸಂಗ್ರಹ ಮಾಡಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಪಿಟಿಐ ವರದಿ ಮಾಡಿದ್ದು, ಪಾಕ್ ಸಂಗ್ರಹಿಸುತ್ತಿರುವ ಟ್ಯಾಂಕ್‌ಗಳು ಮೂರರಿಂದ ನಾಲ್ಕು ಕಿ.ಮೀ ದೂರದವರೆಗೆ ಗುರಿ ತಲುಪ ಬಲ್ಲ ಸಾಮರ್ಥ್ಯ ಉಳ್ಳವು ಎಂದು ವರದಿ ಮಾಡಿದೆ.
ಪಾಕಿಸ್ಥಾನ ರಷ್ಯಾದಿಂದ ಟಿ-90ಯುದ್ಧ ಟ್ಯಾಂಕ್‌ಗಳನ್ನು ಖರೀದಿಸಲು ಮುಂದಾಗಿದ್ದು, ಮಾಸ್ಕೋದೊಂದಿಗೆ ಆಳವಾದ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿದ್ದು, 2025 ರ ವೇಳೆಗೆ ಶಸಸ್ತ್ರ ಪಡೆಗಳನ್ನು ಬಲಪಡಿಸಲು ಹೆಜ್ಜೆ ಇರಿಸಿರುವ ಪಾಕ್ ಮಿತ್ರ ರಾಷ್ಟ್ರ ಚೀನಾದಿಂದಲೂ 220 ಟ್ಯಾಂಕ್‌ಗಳನ್ನು ತರಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.
Discussion about this post