ಇಸ್ಲಾಮಾಬಾದ್: ಒಂದೆಡೆ ಪಾಕಿಸ್ಥಾನ ಮೂಲದ ಉಗ್ರರು ಭಾರತದ ಮೇಲೆ ದಾಳಿಗೆ ಸಂಚು ರೂಪಿಸುತ್ತಾ, ಪುಲ್ವಾಮಾದಲ್ಲಿ 42 ಯೋಧರನ್ನು ಬಲಿ ಪಡೆದದ್ದು ಒಂದೆಡೆಯಾದರೆ, ಇನ್ನೊಂದೆಡೆ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ ಮೂಲಕ ಪಾಕಿಸ್ಥಾನ ಧರ್ಮ ಭಯೋತ್ಪಾದನೆ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿ ಇನ್ನೊಂದು ಘಟನೆ ನಡೆದಿದೆ.
ಕರಾಚಿಯ ಗೋಲಿಮಾರ್ ಪ್ರದೇಶದಿಂದ ಅಪಹರಣಕ್ಕೆ ಒಳಗಾಗಿದ್ದ ಕೋಮಲ್ ಮೇಘ್ವಾರ್ ಎಂಬ 14 ವರ್ಷದ ಹಿಂದೂ ಬಾಲಕಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿರುವ ಆಘಾತಕಾರಿ ವಿಚಾರ ಹೊರಬಿದ್ದಿದೆ.
ಟ್ಯಾಂಡೋ ಅಲ್ಲಾರ್ ಮೂಲದ ಹಿಂದೂ ಕುಟುಂಬಕ್ಕೆ ಈ ಬಾಲಕಿ ಸೇರಿದ್ದಾಳೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಾಜಧಾನಿಯಾಗಿರುವ ಕರಾಚಿ ಮತ್ತು ಗರಿಷ್ಠ ಹಿಂದುಗಳು ವಾಸಿಸುವ ಈ ಪ್ರದೇಶವಾಗಿದೆ.
ಫೆ.13ರಂದು ಕೋಮಲ್ ಮೇಘ್ವಾರ್’ಳನ್ನು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ ಎನ್ನಲಾಗಿದೆ. ಆದರೆ ಮತಾಂತರವನ್ನು ಸಮರ್ಥನೆ ಮಾಡಿಕೊಂಡಿರುವ ಸ್ಥಳೀಯ ಮುಸ್ಲಿಂ ಸಮುದಾಯವು, ಅವಳು ವಯಸ್ಕ(20 ವರ್ಷ) ವಯಸ್ಸಿನವಳಾಗಿರುವುದರಿಂದ ತಾನು ಅದನ್ನು ತಾನೇ ಮಾಡಿದ್ದಾಗಿ ಹೇಳಿಕೊಂಡಿದೆ.
ಆದರೆ, ಪಾಕಿಸ್ಥಾನ ಸರ್ಕಾರದ ಅಧಿಕೃತ ನ್ಯಾಶನಲ್ ಡೇಟಾಬೇಸ್ ರಿಜಿಸ್ಟ್ರೇಶನ್ ಅಥಾರಿಟಿಯ ದಾಖಲೆಗಳ ಅನ್ವಯ ಕೋಮಲ್ ಇನ್ನೂ 14 ವರ್ಷದ ಬಾಲಕಿಯಾಗಿದ್ದಾಳೆ. ಇಲ್ಲಿ ಉಲ್ಲೇಖಿಸಿರುವ ದಾಖಲೆಗಳ ಅನ್ವಯ ಆಕೆಯ ಜನ್ಮ ದಿನಾಂಕ 2004ರ ಮಾರ್ಚ್ 20 ಆಗಿದೆ.
ಇನ್ನು ಈ ವಿಚಾರದಲ್ಲಿ ಸ್ಥಳೀಯ ಪೊಲೀಸರು ಮಾತನಾಡಿದ್ದು, ಪ್ರಸ್ತುತ ಈಕೆಯ ಮತಾಂತರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಪೊಲೀಸ್ ವರದಿಯ ಮತ್ತೊಂದು ಮಾಹಿತಿಯ ಪ್ರಕಾರ ಇಲ್ಲಿ ಸಾಮೂಹಿಕವಾಗಿ ಹಿಂದೂಗಳ ಮತಾಂತರವಾಗುತ್ತಿದೆ ಎಂದಿದ್ದಾರೆ.
ಅತ್ಯಂತ ಘೋರವಾದ ವಿಚಾರವೆಂದರೆ, ಇಲ್ಲಿ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಹುಡುಗಿಯರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಇನ್ನು ಈ ಕುರಿತಂತೆ ಪತ್ರಕರ್ತೆಯೂ ಆಗಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್, ಮತಾಂತರ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನವರಿಯಲ್ಲಿ ನಡೆದ ಘಟನೆ ಈಗ ಮತ್ತೆ ಮರುಕಳಿಸಿದ್ದು, ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರ ಮಾಡಿರುವುದನ್ನು ಖಂಡಿಸಿದ್ದಾರೆ.
ಬಡತನ ಮತ್ತು ಸಾಕಷ್ಟು ಶಿಕ್ಷಣದ ಕೊರತೆಯಿಂದಾಗಿ, ಸ್ಥಳೀಯ ಹಿಂದೂಗಳು ತಮ್ಮ ಮೇಲಾಗುತ್ತಿರುವ ಮತಾಂತರ ದಾಳಿಯನ್ನು ವರದಿ ಮಾಡಲು ವಿಫಲರಾಗುತ್ತಾರೆ ಅಥವಾ ಕಾನೂನುಬದ್ಧ ಅಥವಾ ಮಾನವೀಯ ನೆರವಿಗೆ ತೆಗೆದುಕೊಳ್ಳುತ್ತಾರೆ.
ಇನ್ನು ಬಲವಂತದ ಮತಾಂತರದ ವಿಚಾರವನ್ನು ವರದಿ ಮಾಡುವಲ್ಲಿ ಪಾಕಿಸ್ಥಾನ ಮಾಧ್ಯಮಗಳೂ ಸಹ ನಿರಾಸಕ್ತಿಯನ್ನು ಹೊಂದಿದ್ದು, ಸದ್ಯ ಈ ವಿಚಾರಗಳು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿವೆ. ಆದರೆ, ಈ ವಿಚಾರವನ್ನು ಪ್ರಚಾರಪಡಿಸಿ, ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿರುವ ಇಂತಹ ಕೃತ್ಯಗಳನ್ನು ತಡೆಯುವಲ್ಲಿ ಸಾಮಾಜಿಕ ಜಾಲತಾಣಗಳೂ ಹಾಗೂ ಅಲ್ಲಿನ ಅಧಿಕಾರಿಗಳೂ ಸಹ ಹಿಂದೇಟು ಹಾಕುತ್ತಿದ್ದಾರೆ.
ಅಲ್ಲದೇ, ಇಲ್ಲಿ ಮತಾಂತರ ಪ್ರಕ್ರಿಯೆ ಅತ್ಯಂತ ಘೋರವಾಗಿ ನಡೆಯುತ್ತಿದ್ದು, ಮತಾಂತರಕ್ಕೆ ಒಪ್ಪದೇ ಇದ್ದರೆ ಅದರ ಕ್ರೂರ ಪರಿಣಾಮ ಅಲ್ಲಿನ ಹಿಂದೂಗಳ ಮೇಲೆ ಆಗುತ್ತಿದೆ. ಹೀಗಾಗಿ, ಮತಾಂತರಕ್ಕೆ ಒಪ್ಪದ ಸಾವಿರಾರು ಹಿಂದೂಗಳು ಭಾರತಕ್ಕೆ ವಲಸೆ ಬರಲು ಆರಂಭಿಸುತ್ತಿದ್ದಾರೆ.
ಒಂದೆಡೆ ಪಾಕಿಸ್ಥಾನದ ಮತಾಂಧ ಉಗ್ರರು ಭಾರತದ ಮೇಲೆ ದಾಳಿ ನಡೆಸುವ ತಮ್ಮ ಕೃತ್ಯದ ಭಾಗವಾಗಿ ಗಡಿಯಲ್ಲಿ ಯೋಧರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪಾಕಿಸ್ಥಾನದಲ್ಲಿ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವ ಮೂಲಕ ಧರ್ಮ ಭಯೋತ್ಪಾದನೆ ಮಾಡುತ್ತಿದೆ. ಇನ್ನಾದರೂ ಕೇಂದ್ರ ಸರ್ಕಾರ ಇತ್ತ ಗಮನ ಹರಿಸಿ, ಪಾಕಿಸ್ಥಾನದಲ್ಲಿರುವ ಹಿಂದೂಗಳನ್ನು ಪಾಪಿಗಳಿಂದ ಕಾಪಾಡಲು ಕ್ರಮ ಕೈಗೊಳ್ಳಬೇಕಿದೆ.
Discussion about this post