ಇಸ್ಲಾಮಾಬಾದ್: ಭಾರತದ ಮೇಲೆ ಪಾಕ್ ಪ್ರಣೀತ ಉಗ್ರರ ದಾಳಿ ನಡೆದಾಗಲೆಲ್ಲಾ ಸಾಕ್ಷಿ ನೀಡಿ ಎಂದು ನಾಟಕವಾಡುವ ಪಾಪಿ ಪಾಕಿಸ್ಥಾನ ಈಗಲೂ ಸಹ ಅದೇ ಚಾಳಿಯನ್ನು ಆರಂಭಿಸಿದೆ.
ಪುಲ್ವಾಮಾ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡವಿರುವ ಆರೋಪಗಳ ಹಿನ್ನೆಲೆಯಲ್ಲಿ ಅಲ್ಲಿನ ಮಾಧ್ಯಮಕ್ಕೆ ಮಾತನಾಡಿರುವ ಪಾಕ್ ಹಣಕಾಸು ಸಚಿವ ಮೊಹಮದ್ ಇಶಾಕ್ ದರ್, ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನ ಕೈವಾಡ ಇದೆ ಎಂಬುದನ್ನು ಸಾಬೀತು ಮಾಡಲು ನಿಮ್ಮ ಬಳಿ ಸಾಕ್ಷಿಯಿದ್ದರೆ ನೀಡಿ ಎಂದು ಭಾರತವನ್ನು ಕೇಳಿದ್ದಾರೆ.
ಪುಲ್ವಾಮಾದಲ್ಲಿ ನಡೆದ ದಾಳಿಗೂ, ಪಾಕಿಸ್ಥಾನಕ್ಕೂ ಸಂಬಂಧವಿಲ್ಲ ಎಂದವರು ಹೇಳಿಕೆ ನೀಡಿದ್ದಾರೆ.
ಹಿಂದೆ ಮುಂಬೈ ದಾಳಿ ನಡೆದ ವೇಳೆಯೂ ಪಾಕ್ ಸಾಕ್ಷಿ ಕೇಳಿತ್ತು. ಆದರೆ, ಭಾರತ ಸಾಕಷ್ಟು ಸಾಕ್ಷಿ ಒದಗಿಸಿದರೂ ಅದನ್ನೆಲ್ಲಾ ತಳ್ಳಿ ಹಾಕಿತ್ತು ಶತ್ರು ರಾಷ್ಟç.
Discussion about this post