ಸೈಕಲ್’ಗೆ ಬೈಕ್ ಗುದ್ದಿದರೆ ಬೈಕ್’ನದ್ದೆ ತಪ್ಪು, ಬೈಕಿಗೆ ಆಟೋ ಗುದ್ದಿದರೆ ಆಟೋದೇ ತಪ್ಪು, ಆಟೋಗೆ ಕಾರು ಗುದ್ದಿದರೆ ಕಾರಿನದ್ದೆ ತಪ್ಪು, ಕಾರಿಗೆ ಲಾರಿ ಗುದ್ದಿದರೆ ಲಾರಿಯದ್ದೆ ತಪ್ಪು… ವಿಚಾರ ಹೀಗಿದ್ದರೂ ಒಂದು ಹಳೆಯ ಆಟೋಗೆ ಹೈವೇನಲ್ಲಿ ವೇಗವಾಗಿ ಹೋಗುವ ಲಾರಿ ಗುದ್ದಿದರೆ ಆ ಆಟೋ ಸ್ಥಿತಿಯನ್ನು ನೀವೇ ಊಹಿಸಿಕೊಳ್ಳಿ… ಅಂತಹ ಗುಜರಿ ಸ್ಥಿತಿಗೆ ಪಾಪಿ ಪಾಕಿಸ್ಥಾನಕ್ಕೆ ಬರಲಿದೆ. ಇಂತಹ ಪರಿಸ್ಥಿತಿಗೆ ತರಲು ಭಾರತ ಅಖಾಡಕ್ಕೆ ಇಳಿಯದೇ, ಸೇಡು ತೀರಿಸಿಕೊಳ್ಳಲು ಪ್ರಮುಖ ರಾಷ್ಟ್ರಗಳ ಹಿಂದೆಯೇ ಘನತೆಯಿಂದ ಇರುತ್ತದೆ ಎನ್ನುವುದು ವಾಸ್ತವ…
ಯುದ್ಧ ನಿಶ್ಚಿತವೇ? ಅಸಂಭವ. ಯಾಕೆಂದರೆ ಪಾಕಿಸ್ಥಾನಕ್ಕೆ ಭಯ. ಭಾರತಕ್ಕೆ ಮಾನವೀಯತೆಯ ನೆಲೆಗಟ್ಟು. ಇಷ್ಟು ಹೆಸರುವಾಸಿಯಾದ ಭಾರತವು ಅಧಿಕ ಪ್ರಸಂಗ ಮಾಡಿದರೆ ವಿಶ್ವವು ಇದನ್ನು ಒಪ್ಪಬಹುದೇ? ಖಂಡಿತವಾಗಿಯೂ ಭಾರತ ಪಾಕಿಸ್ಥಾನದ ಮೇಲೆ ದಾಳಿ ನಡೆಸಿದಲ್ಲಿ ಇಡೀ ವಿಶ್ವವೇ ಖಂಡಿಸಬಹುದು. ಯಾಕೆಂದರೆ ಮೇಲ್ನೋಟಕ್ಕೆ ಪಾಕಿಸ್ಥಾನವು ಭಯೋತ್ಪಾದನೆಯಲ್ಲಿ ಭಾಗಿಯಾಗಿಲ್ಲ. ಅಧಿಕೃತವಾಗಿ ಪಾಕಿಸ್ಥಾನವು ಭಯೋತ್ಪಾದಕರಿಗೆ ಬೆಂಬಲ ನೀಡಿತ್ತಿರುವುದಕ್ಕೆ ಪುರಾವೆ ಸಿಗುತ್ತಿಲ್ಲ. ವಿಶ್ವ ಸಂಸ್ಥೆಯು ಇದನ್ನೇ ಪರಿಗಣಿಸುವುದು. ಹಾಗಾಗಿ ಅಧಿಕೃತ ಪುರಾವೆಗಳಿಲ್ಲದೆ ಭಾರತವು ಪಾಕಿಸ್ಥಾನವನ್ನು ಧಮನಿಸಲು ದಾಳಿ ಮಾಡಿದರೆ ಅದು ಶುದ್ಧ ತಪ್ಪೇ ಆಗುತ್ತದೆ.
ಇಡೀ ದೇಶದ ಉತ್ಸಾಹಿ ದೇಶಭಕ್ತರು, ಮೋದಿಯವರ ಪ್ರೇಮಿಗಳು, ಭಾರತೀಯ ಸೈನಿಕರಿಗೆ ಆದಂತಹ ತೊಂದರೆಗಳ ಆಧಾರದಲ್ಲಿ ಒಂದು ಕ್ಷಣದ ಉದ್ವೇಗದಿಂದ ಯುದ್ಧವೇ ಸಿದ್ಧ ಎಂದು ಹೇಳಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧಕ್ಕೇ ಪ್ರಾಧಾನ್ಯತೆ ಕಾಣುತ್ತದೆ. ಅದಕ್ಕೆ ಸರಿಯಾಗಿ ದೇಶದೊಳಗಿನ ಕೆಲ ಮತಾಂಧರುಗಳು ಪಾಕಿಸ್ಥಾನದ ಪರ ಮೊರೆಯುತ್ತಿರುವುದೂ ರಣೋತ್ಸಾಹಕ್ಕೆ ಪೂರಕವಾಗುತ್ತದೆ.
ಹಾಗೆಂದು ಭಾರತವು ಕೈ ಕಟ್ಟಿ ಕುಳಿತುಕೊಂಡರೆ ಈ ಭಯೋತ್ಪಾದಕರ ಹುಚ್ಚಾಟ ಇನ್ನೂ ಹೆಚ್ಚಾಗುತ್ತದೆ. ಭಾರತದೊಳಗಿನ ಕೆಲ ರಾಜಕಾರಣಿಗಳು, ಕೆಲವು ಪಾಕ್ ಪರ ಇರುವ ದುರ್ಬುದ್ಧಿ ಪ್ರಗತಿ ಪರರ ಹೇಳಿಕೆಗಳೂ ಈ ಮತಾಂಧರ ದುಷ್ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗುತ್ತದೆ. ಇಷ್ಟೆಲ್ಲ ವಿದ್ಯಾಮಾನಗಳಿದ್ಧರೂ ಭಾರತದ ಪ್ರಧಾನಿ ಯಾಕೆ ಯುದ್ಧ ಘೋಷಣೆ ಮಾಡುತ್ತಿಲ್ಲ, ಪ್ರತಿದಾಳಿ ಮಾಡಬಹುದಿತ್ತಲ್ಲ ಎಂದು ಕೋಟ್ಯಾಂತರ ಪ್ರಜೆಗಳ ಮನಸ್ಸಿನಲ್ಲಿ ಕಾಡುವ ಪ್ರಶ್ನೆಯಾಗಿದೆ.
ಮುಂದೇನು?
ವಾಸ್ಥವ ಹೀಗಿರಬಹುದು. ಪಾಕಿಗೆ ಚೈನಾ ದೇಶವು ಅನಧಿಕೃತ ಬೆಂಬಲ ನೀಡುತ್ತದೆ. ಯಾಕೆಂದರೆ ಅವರಲ್ಲಿ ಉತ್ಪಾದಿಸಲಾಗುವ ಯುದ್ಧ ಸಾಮಗ್ರಿಗಳಿಗೆ ಗಿರಾಕಿ ಬೇಕು. ಹಿಂದೆ ಅಮೆರಿಕಾ ಈ ಕೆಲಸ ಮಾಡುತ್ತಿತ್ತು. ಈಗ ಚೈನಾ. ಆದರೆ ಅಧಿಕೃತವಾಗಿ ಪಾಕಿಗೆ ಭಾರತದತ್ತ ಮುನ್ನುಗ್ಗಿ ಎಂದು ಒಂದು ಜವಾಬ್ದಾರಿಯುತ ರಾಷ್ಟ್ರವಾಗಿ ಚೈನಾ ಹೇಳುವ ಹಾಗಿಲ್ಲ. ಇನ್ನೊಂದೆಡೆ ಭಯೋತ್ಪಾದಕರನ್ನು ಸಾಕುವ ಸಲಹುವ ದೇಶ ಎಂದರೆ ಪಾಕ್ ಮಾತ್ರ ಎಂಬುದು ಜನ ಜನಿತ. ಇಲ್ಲಿಯ ಬೌಗೋಳಿಕ ಮತ್ತು ಆಡಳಿತಾತ್ಮಕ ವಾತಾವರಣವು ಅದಕ್ಕೆ ತಕ್ಕಂತಿದೆ. ಈಗಿರುವ ಪ್ರಧಾನಿ ಇಮ್ರಾನ್ ಖಾನನ ಜುಟ್ಟು ಬಹುಜನ ಮತಾಂಧರ ಕೈಯಲ್ಲಿದೆ. ಹಾಗೆ ನೋಡಲು ಹೋದರೆ, ಪಾಕಿಸ್ಥಾನದ ಮಿಲಿಟರಿಯು ಸರಕಾರವನ್ನು ನಡೆಸುವಂತಿದೆ. ಅಂದರೆ ಇದೊಂದು ಭಯೋತ್ಪಾದಕರ Training Camp ಎಂದರೂ ಹೆಚ್ಚಾಗದು. ಹಾಗಾಗಿ ಇಮ್ರಾನ್ ಖಾನನಲ್ಲಿ ಇರುವುದು ಕೇವಲ ಕುರ್ಚಿ ಮಾತ್ರ ಎಂದು ಹೇಳಬಹುದು.
ಒಂದು ವೇಳೆ ಇಮ್ರಾನ್ ಖಾನ್ ಭಾರತದೊಡನೆ ಸೌಜನ್ಯದಿಂದ ಪುಲ್ವಾಮಾ ದುರಂತ ವ್ಯಕ್ತ ಪಡಿಸುತ್ತಿದ್ದರೆ ಇದನ್ನು ಮತಾಂಧರು ಪ್ರಶ್ನಿಸುತ್ತಿದ್ದರು ಮತ್ತು ಕುರ್ಚಿಗೆ ಅಪಾಯವೂ ಆಗುತ್ತಿತ್ತು. ಇಡೀ ವಿಶ್ವದೊಡನೆ,’ ಭಯೋತ್ಪಾಧನೆ ಧಮನಕ್ಕೆ ನಾನೂ ಬದ್ಧ. ಮತಾಂಧ ಭಯೋತ್ಪಾದಕರ ನಿಗ್ರಹಕ್ಕೆ ನಿಮ್ಮ ಸಹಾಯ ನಮಗೆ ಕೊಡಿ(ಸೊಮಾಲಿಯಾ, ಶ್ರೀಲಂಕಾದಲ್ಲಿ ಶಾಂತಿಪಡೆ ಕಾರ್ಯ ನಿರ್ವಹಿಸಿದಂತೆ), ನಮ್ಮ ಪೂರ್ಣ ಸಹಕಾರ ನಿಮಗಿದೆ’ ಎಂದು ಹೇಳುತ್ತಿದ್ದರೆ ಇಮ್ರಾನ್ ಖಾನನ ವರ್ಚಸ್ಸನ್ನು ಜಗತ್ತು ಪ್ರಶಂಸಿಸಬಹುದು. ಆದರೆ ಹಾಗೆ ಹೇಳುವುದಕ್ಕೆ ಇಮ್ರಾನನು ಮತಾಂಧರ ಮುಲಾಜಿನಲ್ಲಿ ಇದ್ದಾನೆ. ಹಾಗಾಗಿ ಈ ಸಾತ್ವಿಕ ವ್ಯವಹಾರಕ್ಕೆ ಹೋಗುವ ಹಾಗಿಲ್ಲ.
ಜಗತ್ತಿನ ದೃಷ್ಟಿಯಲ್ಲಿ ಪಾಕಿಸ್ಥಾನ ಒಂದು ಮತಾಂಧ ಭಯೋತ್ಪಾದಕರ ಉದ್ಧಿಮೆಯ ರಾಷ್ಟ್ರ ಎಂಬುದು ವಿಶ್ವವಿಖ್ಯಾತ. ಅಮೆರಿಕಾದ World Trade ಕಟ್ಟಡದ ನಿರ್ನಾಮವು ಇದೇ ಪಾಕಿನ ಪರಿಸರದಲ್ಲೇ ಇದ್ದಂತಹ ಒಸಾಮ ಬಿನ್ ಲಾಡೆನ್ ಕೈವಾಡ ಎಂಬುದು ಸಾಬೀತಾದ ವಿಚಾರ. ಇಡೀ ಜಗತ್ತಿಗೆ ಈ ಮತಾಂಧ ಪೋಷಕ ಪಾಕ್ ಒಂದು ನುಂಗಲಾರದ ತುತ್ತಾಗಿದೆ. ದಾಳಿ ಮಾಡೋಣ ಅಂದರೆ ಪಾಕ್ ಭಯೋತ್ಪಾದಕ ರಾಷ್ಟ್ರ ಎಂಬುದಕ್ಕೆ ಪುರಾವೆ ಸಾಲದು. ಇತ್ತೀಚೆಗಿನ ಪೊಲ್ವಾಮ, ಇರಾನಿನ ಯೋಧರ ಹತ್ಯೆಗಳೆಲ್ಲವೂ ಪಾಕ್ ಪ್ರೇರಿತವೇ ಎಂದಾದರೂ, ಇದರ ಹೊಣೆ ಸ್ವತಂತ್ರ ಸಂಘಟನೆಯಾದ ಜೈಷ್ ಇ ಮೊಹಮದ್ ಎಂಬ ಹೆಸರಲ್ಲಿದೆ.
ಭಾರತದೊಳಗೆ ಕಾಶ್ಮೀರದ ಪ್ರಜೆಗಳಾಗಿ ಹುರಿಯತ್ ಕಾನ್ಫರೆನ್ಸ್, PFI ಇತ್ಯಾದಿ ಮುಸ್ಲಿಂ ಸಂಘಟನೆಗಳು ಇಂತಹ ಮಾನವ ಕುಲಕ್ಕೆ ಅಂಧ ಮತಾಂಧ ಇಸ್ಲಾಂ ಧರ್ಮಾಧರಿತವಾಗಿ ನಡೆಸುವ ಹತ್ಯೆಗಳ ರುವಾರಿ ISIS , Jaish E Mohammed ಇತ್ಯಾದಿ ಮತಾಂಧರ ನಂಟು ಇರುವುದೂ ಜನಜನಿತ. ಇದನ್ನು ಹೀಗೇ ಬಿಟ್ಟಲ್ಲಿ ಪಾಕಿಸ್ಥಾನದಂತೆ ಭಾರತದ ಹೆಸರೂ ಹಾಳಾಗುವುದರಲ್ಲಿ ಸಂಶಯವಿಲ್ಲ. ಹಿಂದಿನ ಕಾಂಗ್ರೆಸ್ ಸರಕಾರಗಳು, ಪಶ್ಚಿಮ ಬಂಗಾಳದ ಮಮತಾ ಸರಕಾರ, ಕೇರಳದ ಕಮ್ಯುನಿಸ್ಟ್ ಸರಕಾರಗಳು ಇದರ ಬೆಳವಣಿಗೆಗೆ ಸಹಕರಿಸುತ್ತಿವೆ. ಕಾರಣ Vote Bank. ಸಾತ್ವಿಕ ಜೀವನ ನಡೆಸುವ ಮುಸ್ಲಿಮರಿಗೂ ಇದು ಕಂಟಕವೇ ಆಗಿದೆ. ಅಲ್ಲದೆ ಇರಾನ್, ಇರಾಕ್, ಗಲ್ಫ್ ರಾಷ್ಟಗಳ ಇಸ್ಲಾಮ್ ಧರ್ಮದ ಜನರೂ ಇದನ್ನು ಧಿಕ್ಕರಿಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಮೋದಿ ಸರಕಾರವು ಸಮರ್ಥವಾಗಿದೆ ಎಂಬುದು ಈ ಕಾಂಗ್ರೆಸಿಗರಿಗೆ ಮನದಟ್ಟಾಗಲು ಶುರುವಾದಾಗಲೇ ಮೋದಿಯವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಎಲ್ಲಾದರೂ ಈ ಭಯೋತ್ಪಾದಕರ ಅಂತ್ಯವು ಮೋದಿಯವರ ಕೈಯಲ್ಲಾಗಿಬಿಟ್ಟರೆ, ಮುಸ್ಲಿಮರ ಮತಗಳು ನಮಗೆ ದಕ್ಕಲಾರದು ಎಂಬ ಭಯದಿಂದ, ದರಿದ್ರ ಪ್ರಗತಿಪರರ ಮೂಲಕ ಒಂದೆಡೆ, ಕಾಂಗ್ರೆಸ್ ನಾಯಕರುಗಳು ಇನ್ನೊಂದೆಡೆ ಮೋದಿಯವರ ನಡೆಯನ್ನು ಟೀಕಿಸುತ್ತವೆ. ಇದು ಮತಾಂಧ ಭಯೋತ್ಪಾದಕರಿಗೆ ಗ್ಲೂಕೋಸ್ ನೀಡಿದಂತಾಗುತ್ತದೆ.
ಹಾಗಾದರೆ ಪಾಕಿನ ಮುಂದಿನ ಗತಿ?
ಅಮೆರಿಕಾಕ್ಕೆ ಪಾಕಿನ ಅಣ್ವಸ್ತ್ರದ ನಾಶ ಬೇಕು ಮತ್ತು ಮತಾಂಧರಿಗೆ ಆಶ್ರಯ ನೀಡುವ ಕ್ಷೇತ್ರ ನಾಶವಾಗಬೇಕು. ಆದರೆ ಅಮೆರಿಕಾವಾಗಲೀ, ಭಾರತವಾಗಲೀ ಪಾಕಿಗೆ ದಾಳಿ ಮಾಡುವ ಹಾಗಿಲ್ಲ. ಈಗ ಉಳಿದ ಇರಾನನ್ನು ಬಡಿದೆಬ್ಬಿಸಿ ಪಾಕನ್ನು ನಿರ್ನಾಮ ಮಾಡುವುದೇ ಒಂದು ದಾರಿ. ಇದು ನಡೆಯುವುದೂ ಖಚಿತ.
ಜ್ಯೋತಿಷ್ಯಿಕ ಲಕ್ಷಣ. ಅಗ್ನಿ ತತ್ವ ಧನುರಾಶಿಯಲ್ಲಿ ಶನಿ, ಧನುರಾಶಿಗೆ ಪ್ರವೇಶಿಸುವ ಕೇತು ದುರ್ಘಟನೆಗೆ ಕಾರಣವಾಗುತ್ತದೆ. ಇದು ಯುದ್ಧವಲ್ಲ, ಅಣುದುರಂತ. ಇದರ ಮೂಲಕವೇ ಪಾಕಿನ ನಾಶ. ಮತಾಂಧರ ಮಂದ ಬುದ್ಧಿಗೆ ಪಾಠ. ಅಲ್ಲದೆ ದೇಶದೊಳಗಿನ ಮತಾಂಧರ ಸೊಲ್ಲಡಗುತ್ತದೆ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post