ಪಕ್ಕದ ಪಾಕಿಸ್ಥಾನದ ಬಗ್ಗೆ ನಮಗೇನೂ ದ್ವೇಷವಿಲ್ಲ. ಅದು ಕೂಡಾ ವಿಶ್ವದಲ್ಲಿ ಕೀರ್ತಿಗಳಿಸಿ, ಶಾಶ್ವತ ಮಿತ್ರತ್ವದಲ್ಲಿ ಇರಬೇಕೆಂಬುದೇ ನಮ್ಮ ಬಯಕೆ. ಇದಕ್ಕೊಂದು ಸಣ್ಣ ಮಹಾಭಾರತದಲ್ಲಿ ಶ್ರೀಕೃಷ್ಣನು ಶಾಂತಿ ಸಂಧಾನಕ್ಕೆ ಹೋದಾಗ ದೃತರಾಷ್ಟ್ರನೊಡನೆ ಹೇಳಿದ ಮಾತು ನೆನಪಾಗುತ್ತದೆ. ಹೇಗೆ ವಕೀಲರುಗಳ Argument ಇತ್ತೋ ಹಾಗೆ.
‘ಹೇ ರಾಜನ್, ಪಾಂಡವರಿಗೆ ಸಲ್ಲುವ ಹಿಶೆಯನ್ನು ಕೊಟ್ಟುಬಿಡಿ. ಕೌರವ ಪಾಂಡವರು ಏಕ ರಥದಲ್ಲಿದ್ದರೆ ಈ ಭಾರತ ಭೂಮಿಗೆ ವಿಶೇಷ ರಕ್ಷಣೆ ಬೇಕೇ? ಪಾಂಡವರ ಮೇಲಿನ ಮತ್ಸರ, ದ್ವೇಶ, ಭಯದಿಂದ ತುಂಬಿದ ದುರ್ಯೋಧನನು ವಿದೇಶೀ ಬಾಡಿಗೆ(ಈಗಿನ ಮತಾಂಧ ಭಯೋತ್ಪಾದಕರು) ಯೋಧರನ್ನು ಕರೆಸಿ ಧರ್ಮವನ್ನು ಹಾಳುಗೈಯುವಂತಹ ದುಷ್ಕೃತ್ಯಗಳು ಬೇಕೇ ಎಂದು ಯೋಚಿಸಿ ನಿರ್ಧಾರಕ್ಕೆ ಬನ್ನಿ ಮಹಾರಾಜಾ’ ಎಂದಿದ್ದ ಪುರಾಣ ಪುರುಷೋತ್ತಮ. ಆದರೆ ದೃತರಾಷ್ಟ್ರನ ವಿಪರೀತ ಪುತ್ರ ವ್ಯಾಮೋಹವು ಇಡೀ ವಂಶವನ್ನೇ ಬಲಿತೆಗೆದುಕೊಂಡಿತು’.
ಇದೇ ರೀತಿ ಪಾಕಿಸ್ಥಾನ ಭಾರತದ ಪ್ರೀತಿಗೆ ಪಾತ್ರವಾಗದಂತಹ ಕಾರ್ಯಕ್ಕಿಳಿದು, ಮತಾಂಧರಿಗೆ ಮಣೆ ಹಾಕಿ ಸರ್ವ ನಾಶದತ್ತ ಸಾಗುತ್ತಿದೆ. ಇನ್ನೂ ಕಾಲ ಮಿಂಚಿಲ್ಲ. ಭಾರತದೊಂದಿಗೆ ಕೈಜೋಡಿಸಿ, ಇಡೀ ವಿಶ್ವ ಸಮುದಾಯದ ಅಭ್ಯುದಯಕ್ಕಾಗಿ ಮತಾಂಧರ ನಿರ್ಮೂಲನೆಗೆ ಹೊರಡಲಿ. ಪಾಕಿನ ಅಮಾಯಕ ಪ್ರಜೆಗಳು ಎಷ್ಟು ಬಡತನದಲ್ಲಿ ಇದ್ದಾರೆ ಎಂಬುದು ತಿಳಿದಿದೆ. ಅವರ ಅಭ್ಯುದಯಕ್ಕಾಗಿ ದೊಡ್ಡ ತ್ಯಾಗ ಮಾಡಲಿ. ಮತಾಂಧ ಭಯೋತ್ಪಾದಕರ ನಾಶವಾದರೆ ಅತ್ತ ಪಾಕಿಸ್ಥಾನವೂ ಭಾರತದ ಸಹಾಯ ಹಸ್ತದಿಂದ ಕ್ಷೇಮವಾಗುತ್ತದೆ. ಇತ್ತ ಭಾರತವೂ ಭಯೋತ್ಪಾದಕರ ಕಿರಿ ಕಿರಿಯಿಂದ ಮುಕ್ತವಾಗಿ, ರಕ್ಷಣಾ ವೆಚ್ಚವೂ ಕಡಿಮೆಯಾಗುತ್ತದೆ. ಪಾಕಿಸ್ಥಾನ ರಕ್ಷಣೆಗೆ ಇಡುವ ಅರ್ಧ ಹಣ ಉಳಿದು, ಉಳಿದದ್ದು ಪ್ರಜಾಭಿವೃದ್ಧಿಗೆ ಮೀಸಲಾಗಲಿ.
ಆದರೆ ಇದು ಮರ ಕುಟುಕನಿಗೆ ಬುದ್ಧಿ ಹೇಳಿದಂತಾಗುತ್ತದೆ. ಹಗಲಿಡೀ ಮರ ಕುಟುಕಿ, ರಾತ್ರಿ ತಲೆನೋವಿನಿಂದ ನರಳುವಾಗ,’ ನಾಳೆಯಿಂದ ಈ ಕೆಲಸ ಬಂದ್’ ಎಂದು ಸುಖನಿದ್ರೆಗೆ ಹೋಗುತ್ತದೆ. ಆದರೆ ಮರುದಿನ ಯಥಾಸ್ಥಿತಿಗೇ ಬರುತ್ತದೆ’. ಅದೇ ರೀತಿ ಪಾಕಿಸ್ಥಾನದ ಮತಾಂಧತೆಯೇ ದುರಂತಕ್ಕೆ ಕಾರಣ. ಇದೇ ಮತಾಂಧತೆಯ ದುರ್ಲಾಭವನ್ನು ಅಲ್ಲಿಯೂ ಅಲ್ಲಿಯ ನಾಯಕರು ಪಡೆಯುತ್ತಾರೆ, ಇಲ್ಲಿಯೂ ಮಾಡಬಾರದ್ದನ್ನು ಮಾಡುತ್ತಾ, ಮತಾಂಧರಿಗೆ ಬೆಂಬಲ ನೀಡಿ ಇಡೀ ದೇಶಕ್ಕೇ ಮಾರಕವಾಗುತ್ತಾರೆ.
ಒಂದು ಸಲ ಕುಳಿತು ಯೋಚಿಸಿ. ಅಟಲ್ ಜೀ ಆಗಲೀ, ಮೋದಿಯವರರಾಗಲೀ, ಸಂಘ ಪರಿವಾರವೇ ಆಗಲೀ ಈ ದೇಶದ ಅಲ್ಪಸಂಖ್ಯಾತರನ್ನು ಓಡಿಸಲು ಪ್ರಯತ್ನಿಸುವುದಾಗಲೀ, ಮತಾಂತರಗೊಳಿಸುವುದಾಗಲೀ ಮಾಡಿದ್ದಿದೆಯೇ? ಮಾಡಿದ್ದಿದ್ದರೆ ಪುರಾವೆ ಸಹಿತ ತೋರಿಸಲಿ. ಕೇವಲ ಭಾರತೀಯತೆಯ ವಿಚಾರದಲ್ಲಿ ಮಾತ್ರ ನಮ್ಮ ಶ್ರದ್ದೆ ಇರುವುದೇ ಹೊರತು, ಅನ್ಯಮತೀಯರ ಧಮನದಲ್ಲಿಲ್ಲ. ಮಾನವತಾ ವಾದವೇ ಈ ಭಾರತೀಯ ಪರಂಪರೆ.
ನಾವು ಪ್ರಗತಿಪರರೆಂದು ಹೇಳಿಕೊಳ್ಳುವ ಕೆಲ ಮೂರ್ಖ ನಟರು, ಸಾಹಿತಿಗಳು, ಸಮಾಜೋದ್ಧಾರಕರು, ಈ ದೇಶದ ಮಣಿಶಂಕರ್ ಅಯ್ಯರಂತಹ ಮೂರ್ಖ ನಾಯಕರು, ಅಧಿಕಾರದಾಹಿ ಪಕ್ಷಗಳು ವಿರೋಧಿಸುತ್ತಿವೆ.
ಈ ದೇಶದ ಪರಂಪರಾಗತ ಶಾಸ್ತ್ರಗಳೆಲ್ಲವೂ ಮಾನವತಾವಾದವನ್ನು ಬಣ್ಣಿಸಿದೆ. ಆದರೆ ಮೂರ್ಖ ಮನುಷ್ಯರು ಭಗವದ್ಗೀತೆಯನ್ನಾಗಲೀ, ಮನುಸ್ಮೃತಿಯನ್ನಾಗಲೀ ತಪ್ಪಾಗಿ ಅರ್ಥೈಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಮೂರ್ಖ ಮನುಷ್ಯರೇ ಪಾಕಿಸ್ಥಾನ ಸ್ವರ್ಗ, ಮತಾಂಧರು ಧರ್ಮ ಪ್ರಿಯರು, ಮತಾಂಧರನ್ನು ಕೊಂದರೆ ಅವರ ಪತ್ನಿಯರು ವಿಧವೆಯಾಗುತ್ತಾರೆ ಎಂಬಿತ್ಯಾಗಿ ಹೇಳುತ್ತಾ, ಪಾಕಿಸ್ಥಾನದ ಪಥವನ್ನು ದುರ್ಮಾರ್ಗದತ್ತ ಕೊಂಡೊಯ್ಯುತ್ತಾರೆ. (ಧರ್ಮ ಎಂದರೆ ಏನು ಎಂದು ತಿಳಿಯದ ರಮ್ಯಾಳಂತಹ ನಟಿ, ರಾಜಕೀಯ ನಾಯಕರು, ಪ್ರಕಾಶ ರಾಜನಂತಹ ನಾಸ್ತಿರು, ಭಗವಾನನಂತಹ ಮೂರ್ಖ ಸಾಹಿತಿಗಳು, ಕೆಲವು ರಾಜಕೀಯ ನಾಯಕರು) ಇವರುಗಳ ಸ್ಥಾನ ನಾಶ ಆಗಬೇಕಾದರೆ ಇವರಿಗೆ ಗಂಜಿ ಸಿಗಬಾರದು. ಗಂಜಿ ಸಿಗದೆ ಇರಬೇಕಾದರೆ ಪಾಕಿಸ್ಥಾನವು ಭಾರತೀಯರ ಸ್ನೇಹ ಸಂಪಾದಿಸಿ ಪ್ರಶಂಸೆ ಪಡೆಯಬೇಕು.
ಆದರೆ ಇಷ್ಟು ಹೇಳಿದರೂ ಪ್ರಯೋಜನವಿಲ್ಲ ಬಿಡಿ. ಒಂದು ಸಲ ಹೊಲಸಿಗಿಳಿದರೆ ಅವರಿಗೆ ಅದೇ ಸ್ವರ್ಗ ಎಂಬಂತೆ ಪಾಕಿಸ್ಥಾನವು ಅದರ ಹಠದಲ್ಲೇ ನಾಶವಾಗುವುದು ಖಂಡಿತ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post