ಟ್ಯಾನ್ ತರಣ್: ಪಂಜಾಬ್’ನಲ್ಲಿರುವ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತದೊಳಗೆ ಪ್ರವೇಶಿಸಿದ ಪಾಕಿಸ್ಥಾನದ ಡ್ರೋಣನ್ನು ಪುಡಿಗಟ್ಟಿರುವ ಭಾರತೀಯ ಸೇನೆ, ಇಡಿಯ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿದೆ.
ಪಂಜಾಬ್’ನ ಟ್ಯಾನ್ ತರಣ್ ಜಿಲ್ಲೆಯ ಖೇಮ್ ಕರಣ್ ಸೆಕ್ಟರ್’ನಲ್ಲಿ ಇಂದು ಮುಂಜಾನೆ ಘಟನೆ ನಡೆದಿದ್ದು, ಪಾಕ್ ಡ್ರೋಣ್ ಭಾರತದ ಗಡಿ ಪ್ರವೇಶಿಸಿದಾಕ್ಷಣ ಅಲಾರಾಂ ಶಬ್ದ ಮಾಡಿದ್ದು, ತತಕ್ಷಣವೇ ಯೋಧರು ಎಚ್ಚೆತ್ತು ಡ್ರೋಣನ್ನು ಗುಂಡು ಹಾರಿಸಿ ಧ್ವಂಸ ಮಾಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಇಡಿಯ ಪ್ರದೇಶದಲ್ಲಿ ಇಂಟರ್’ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಹೈ ಅಲರ್ಟ್ ಘೋಷಿಸಿದೆ.
Discussion about this post