“ಜೈನಕಾಶಿ” ಎಂದೇ ಪ್ರಸಿದ್ಧವಾಗಿರುವ ಮೂಡುಬಿದಿರೆಯಲ್ಲಿ ಒಟ್ಟು 18 ದೇವಾಲಯಗಳು, 18 ಜೈನ ಬಸದಿಗಳು ಹಾಗೂ 18 ಕೆರೆಗಳಿರುವುದು ಬಲು ವಿಶೇಷವೆನಿಸಿದೆ. ಇಲ್ಲಿನ ಬಸದಿಗಳಲ್ಲಿ ಸಾವಿರ ಕಂಬಗಳ ಬಸದಿಯು ಅತ್ಯಂತ ಪ್ರಸಿದ್ಧಿ ಪಡೆದಿದೆ. ಗುರು ಬಸದಿಯು ಜೈನರ ಪವಿತ್ರ ಗ್ರಂಥಗಳಾದ ಶ್ರೀಧವಳ ಮತ್ತು ಮಹಾಧವಳಗಳ ಹಸ್ತಪ್ರತಿಗಳು ಇಲ್ಲಿದ್ದು ಆ ಕಾರಣದಿಂದಾಗಿಯೇ ಇದನ್ನು ಸಿದ್ಧಾಂತ ಬಸದಿ ಎಂತಲೂ ಸಹ ಕರೆಯುತ್ತಾರೆ. ಹಾಗೆಯೆ ನಾಡಿಗೆ ಕಲಾ ಸಾಧಕರನ್ನು ಕೊಡುಗೆ ರೂಪದಲ್ಲಿ ಕೊಟ್ಟ ಕೀರ್ತಿ ಇದಕ್ಕಿದೆ.
ಜೀವನ ಅಂದರೆ ಒಂದು ಸಮುದ್ರವಿದ್ದಂತೆ ಅದನ್ನು ಈಜುವುದು ಬಹಳ ಕಷ್ಟ. ಈಜಿ ದಡ ಸೇರಿದರೆ ಅದುವೆ ಜೀವನ. ಜೀವನದಲ್ಲಿ ಜೀವಿಸುವದು ಮುಖ್ಯವಲ್ಲ ಯಾವ ರೀತಿ ಜೀವಿಸುತ್ತೇವೆ ಅನ್ನುವದೇ ಮುಖ್ಯ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸಮಯ ಬಹಳ ಮುಖ್ಯ.
ಬಡತನವಿದ್ದರೂ ಮಗಳ ಕಲಾಸಾಧನೆಗೆ ತೊಂದರೆಯಾಗದಂತೆ ನೋಡಿಕೊಂಡ ತನ್ನ ಹೆತ್ತ ತಂದೆ ತಾಯಿನ ಮರೆಯದೆ ಸನ್ಮಾನಗಳಲ್ಲಿ ಬಂದ ಹಣವನ್ನು ನಯಾ ಪೈಸೆ ಹಾಳು ಮಾಡದೆ ಅವರ ನೋವು ನಲಿವಿನಲ್ಲಿ ಭಾಗಿಯಾಗುತ್ತಿರುವ ಪಂಚಮಿ ಮಾರೂರುಳ ಕಲಾಸಾಧನೆಯ ಬಗೆ ಪರಿಚಯ ಮಾಡಿಕೊಡಲಿದ್ದೇನೆ.
ಕರಾವಳಿ ಕರ್ನಾಟಕ ಪ್ರಾಕೃತಿಕ ರೂಪದಲ್ಲಿ ಎಷ್ಟು ಸುಂದರವಾಗಿದೆಯೊ ಅಷ್ಟೇ ಸುಂದರ ಇಲ್ಲಿನ ಸಾಹಿತ್ಯ ಸಾಂಸ್ಕೃತಿಕ ಲೋಕವಾಗಿದೆ. ನಾಡಿಗೆ ಇತಿಹಾಸ ಕಾಲದಿಂದ ಹಿಡಿದು ಇಂದಿನ ತನಕ ಅದೆಷ್ಟೋ ದೊಡ್ಡ ದೊಡ್ಡ ಸಾಧಕರನ್ನು ಕೊಡುಗೆಯಾಗಿ ಕೊಟ್ಟ ಪುಣ್ಯ ನೆಲವಿದು. ಶ್ರೀಮಾನ್ ಪಾರ್ಶ್ವನಾಥ ಮತ್ತು ಶ್ರೀಮತಿ ದೀಪಶ್ರೀ ಇವರ ಮಗಳಾಗಿ ಜನಿಸಿದ ಪಂಚಮಿ ಮೂಡಬಿದ್ರೆಯ ಮಾರೂರು ಗ್ರಾಮದವಳು.
ಪ್ರಸ್ತುತ ಇಲ್ಲಿಯೇ ಜೈನ ಕಾಲೇಜಿನಲ್ಲಿ ಮೊದಲ ಪಿಯುಸಿ ಕಲಿಯುತ್ತಿದ್ದಾರೆ. ಇವರ ಪ್ರತಿಭೆ ಕೇವಲ ಒಂದು ರಂಗಕ್ಕೆ ಸೀಮಿತವಾಗಿಲ್ಲ. ಓದಿನಿಂದ ಹಿಡಿದು ಕ್ರೀಡೆ ನೃತ್ಯ ಸಂಗೀತ ಯಕ್ಷಗಾನ ಹೀಗೆ ಒಟ್ಟಾರೆ ಐದು ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವಳಿಗೆ ಪಂಚ ಕ್ಷೇತ್ರದ ಸಾಧಕಿಯೆಂಬ ಅಭಿನಾಮದಿಂದಲೂ ಕರೆಯಲಾಗುತ್ತಿದೆ.
ಇದುವರೆಗೆ 300 ಕ್ಕೂ ಅಧಿಕ ಯಕ್ಷಗಾನ ಕಾರ್ಯಕ್ರಮ ನೀಡಿದ್ದೂ ಅಲ್ಲದೆ ನೃತ್ಯ ವೈಭವ ಮೊದಲಾದ ಕಾರ್ಯಕ್ರಮಗಳಲ್ಲಿ ನೃತ್ಯಗಾಯನ ಸೇರಿದಂತೆ 1200ಕ್ಕೂ ಹೆಚ್ಚಿನ ಪ್ರದರ್ಶನ ನೀಡಿದ ಕೀರ್ತಿ ಇವಳದು. ಇದರೊಂದಿಗೆ ಕ್ರೀಡಾ ಲೋಕದೊಳಗೆ ಕೂಡಾ ಹೆಸರು ಮಾಡುತ್ತಿರುವ ಪಂಚಮಿ ಮಾರೂರು ವಾಲಿಬಾಲ್ ಶಾರ್ಟಪುಟ್ ಹಾಕಿ ಕ್ರೀಡೆಗಳಲ್ಲಿ ಕೂಡಾ ಶಾಲೆಯನ್ನು ಪ್ರತಿನಿಧಿಸಿದ್ದಾಳೆ.
ಕ್ರೀಡೆಯಲ್ಲಿ ಮುಂದಿರುವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದಿರುತ್ತಾರೆ ಎಂಬ ಸಾಮಾನ್ಯವಾದ ಮಾತಿದೆ. ಅದನ್ನು ಸಹ ತಲೆಕೆಳಗೆ ಮಾಡಿರುವ ಈಕೆ ಏಳನೆಯ ತರಗತಿಯಲ್ಲಿ ಶೇ.99 ಪಡೆದ ಈ ಬಾಲೆ ಹತ್ತನೆಯ ತರಗತಿಯಲ್ಲಿ ಶೇ.92 ಗಳಿಸಿದ್ದಾಳೆ.
ಇನ್ನೂ ಟಿವಿ ಶೋಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ತೋರಿಸಿದ್ದಾಳೆ. ಝೀ ಕನ್ನಡದ ಕುಣಿಯೋಣು ಬಾರಾ ಇದರಲ್ಲಿ ಪಾಲ್ಗೊಂಡು ಬೆಸ್ಟ್ ಎಕ್ಸ್ಪ್ಲೆಷನ್ ಅವಾರ್ಡ್ ಸುವರ್ಣ ಚಾನೆಲ್’ನ ಪುಟಾಣಿ ಪಂಟ್ರು ಇದರಲ್ಲಿ ಪಾಲ್ಗೊಂಡು ಮುದ್ದಿನ ಪುಟಾಣಿ ಎಂಬ ಅವಾರ್ಡ್ ಪಡೆದಿದ್ದಾಳೆ. ಇದಲ್ಲದೆ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಸಹ ಪಾಲ್ಗೊಂಡು ಜನರ ಮೆಚ್ಚುಗೆ ಪಡೆದಿದ್ದಾಳೆ.
ಅಲ್ಲದೆ ಇಲ್ಲಿ ತನಕ 150 ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಇವರನ್ನು ಸನ್ಮಾನ ಮಾಡಿವೆ. ರಾಜ್ಯ & ರಾಷ್ಟ್ರ ಪ್ರಶಸ್ತಿ ಎನ್’ಸಿಸಿ ಕೆಡೆಟ್(2017) ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾಳೆ.
ತನ್ನ ಹುಟ್ಟುರೂನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಪಂಚಮಿ ಮಾರೂರುಳ ಕೀರ್ತಿ ದಶದಿಕ್ಕುಗಳಲ್ಲಿ ಕರಾವಳಿಯ ಸಾಂಸ್ಕೃತಿಕ ಕಲೆಯ ಶ್ರೀಮಂತಿಕೆ ವೈಭವದಿಂದ ಮೆರೆಯಲಿ, ಸಾಧನೆಯ ಪರ್ವ ಹೀಗೆ ಸಾಗಲಿ, ಇನ್ನಷ್ಟು ಯಶಸ್ಸು ಇವರಿಗೆ ಸಿಗಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಕೆ ಹೆಸರು ಮಾಡಲಿಯೆಂಬ ಆಶಯೊಂದಿಗೆ ಪ್ರತಿಭೆಗಳನ್ನು ಪರಿಚಯಿಸುತ್ತಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವೆಬ್‌ಸೈಟ್‌ನ ಮಾಲೀಕರು ಮತ್ತು ಸರ್ವ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ.
ಲೇಖನ ಮತ್ತು ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸಹಕಾರ: ಯುವ ಬರಹಗಾರ ರೋಹನ್ ಪಿಂಟೋ ಗೇರುಸೊಪ್ಪ
Discussion about this post