ಕಲ್ಪ ಮೀಡಿಯಾ ಹೌಸ್ | ಪ್ಯಾರಿಸ್ |
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಈಗಾಗಲೇ ಎರಡು ಪದಕ ಪಡೆದಿದ್ದ ಭಾರತದ ಮನು ಭಾಕರ್ ಅವರಿಗೆ ಮೂರನೇ ಪದಕ ಸ್ವಲ್ಪದಲ್ಲಿ ತಪ್ಪಿದ್ದು, ಹ್ಯಾಟ್ರಿಕ್ ಕನಸು ಭಗ್ನಗೊಂಡಿದೆ.
ಹೌದು… ಒಂದೇ ಒಲಿಂಪಿಕ್ಸ್’ನಲ್ಲಿ ಎರಡು ಪದಕ ಗೆದ್ದು ದಾಖಲೆ ಬರೆದಿದ್ದು, ಮನು ಭಾಕರ್, ಮೂರನೇ ಪದಕಕ್ಕೆ ಗುರಿ ಇಟ್ಟಿದ್ದರು. ಆದರೆ ಕೂದಲೆಳೆ ಅಂತರದಲ್ಲಿ ಪದಕ ಮಿಸ್ ಮಾಡಿಕೊಂಡಿದ್ದಾರೆ.
ಪದಕ ಸುತ್ತಿನಲ್ಲಿ ಮನು ಭಾಕರ್ 28 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 31 ಅಂಕ ಪಡೆದ ಹಂಗೇರಿಯಾದ ವಿ ಮೇಜರ್ ಕಂಚಿನ ಪದಕ ಸಾಧನೆ ಮಾಡಿದ್ದಾರೆ.
25 ಮೀ ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದ ಫೈನಲ್’ನಲ್ಲಿ 8 ಸ್ಪರ್ಧಿಗಳಿದ್ದರು. ಉತ್ತಮ ಪ್ರದರ್ಶನ ನೀಡಿದ ಮನು ಭಾಕರ್ ಅಂತಿಮವಾಗಿ 4ನೇ ಸ್ಥಾನ ಪಡೆದರು.
ಜಂಟಿಯಾಗಿ 28 ಅಂಕ ಪಡೆದರೂ ಹಂಗೇರಿ ಸ್ಪರ್ಧಿ ಈ ಹಿಂದಿನ ಸುತ್ತಿನಲ್ಲಿ ಮುನ್ನಡೆಯಲ್ಲಿದ್ದ ಕಾರಣ ಮನು ಭಾರ್ಕ ಅವರ ಮೂರನೇ ಪದಕ ಗೆಲ್ಲುವ ಕನಸು ಭಗ್ನಗೊಂಡಿತು
22 ವರ್ಷದ ಮನು ಭಾಕರ್ ಈ ಒಲಿಂಪಿಕ್ಸ್’ನಲ್ಲಿ ಮನು 10 ಮೀ ಏರ್ ಪಿಸ್ತೂಲ್ ಮತ್ತು 10 ಮೀ ಏರ್ ಪಿಸ್ತೂಲ್ ಮಿಶ್ರ (ಸರಬ್ ಜೋತ್ಸಿಂಗ್ ಜೊತೆಗೂಡಿ) ತಂಡ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದರು.
ಒಂದೇ ಒಲಿಂಪಿಕ್ಸ್ ಕೂಟದಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟುವೆಂಬ ಹೆಗ್ಗಳಿಕೆಗೆ ಮನು ಭಾಕರ್ ಈಗಾಗಲೇ ಪಾತ್ರರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post