ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ #BharatJodoYatra ನಡೆಸಿದ್ದು ಕಾಂಗ್ರೆಸ್ #Congress ಇದೀಗ ಇದರ 2ನೆಯ ಭಾಗಕ್ಕೆ ಸಿದ್ದವಾಗಿದ್ದು, `ಭಾರತ್ ನ್ಯಾಯ ಯಾತ್ರೆ’ #BharatNyayaYatra ನಡೆಸುವುದಾಗಿ ಘೋಷಿಸಿದೆ.
ಈ ಕುರಿತಂತೆ ಮಾತನಾಡಿರುವ ಎಐಸಿಸಿ #AICC ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಜನವರಿ 14ರಿಂದ 20ರವರೆಗೂ ಮಣಿಪುರದಿಂದ #Manipur ಮುಂಬೈವರೆಗೂ #Mumbai ಈ ಯಾತ್ರೆ ನಡೆಯಲಿದ್ದು, ಪ್ರಮುಖ ನಾಯಕರು ಪಾಲ್ಗೊಳ್ಳಿದ್ದಾರೆ. ಹೊಸ ಯಾತ್ರೆಯು 6,200 ಕಿ.ಮೀ. ದೂರ ಕ್ರಮಿಸಲಿದೆ ಎಂದಿದ್ದಾರೆ.
ಯಾತ್ರೆಯ ಉದ್ದೇಶವೇನು?
ಮಣಿಪುರದಲ್ಲಿ ನಡೆದ ಸಂಘರ್ಷ ಹಾಗೂ ಪ್ರಾಣಹಾನಿಯ ಕುರಿತಾಗಿ ಜನರಿಗೆ ಮನವರಿಕೆ ಮಾಡಿಕೊಡಬೇಕಿದ್ದು, ಇದನ್ನು ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ #MallikarjunaKharge ಅವರು ಜನವರಿ 14ರಂದು ಮಣಿಪುರದಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಸ್ ಮೂಲಕ ಈ ಯಾತ್ರೆ ನಡೆಯಲಿದೆ ಎಂದರು.
ಯಾವೆಲ್ಲಾ ರಾಜ್ಯಗಳಲ್ಲಿ ಯಾತ್ರೆ?
ಮಣಿಪುರ, ನಾಗಾಲ್ಯಾಂಡ್, ಅಸ್ಸೋಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್’ಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಅಂತಿಮವಾಗಿ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಪ್ರಯಾಣಿಸುತ್ತದೆ.
ರಾಹುಲ್ ಗಾಂಧಿ #Rahulgandhi ಅವರ ಭಾರತ್ ಜೋಡೋ ಯಾತ್ರೆಯಿಂದ ಉತ್ತಮ ಅನುಭವ ದೊರೆತಿದ್ದು, ಮುಂದಿನ ಯಾತ್ರೆಗೆ ಇದು ದಾರಿ ದೀಪವಾಗಿದೆ. ಭಾರತ ನ್ಯಾಯ ಯಾತ್ರೆ ವೇಳೆ, ಯುವಕರು, ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರೊಂದಿಗೆ ಸಂವಾದ ನಡೆಸಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post