ಕಲ್ಪ ಮೀಡಿಯಾ ಹೌಸ್ | ಪಾಟ್ನಾ |
ಇನ್ನು ಮುಂದೆ ಯಾದವರು ಹಾಗೂ ಮುಸ್ಲೀಮರು ಯಾವುದೇ ರೀತಿಯ ಸಹಾಯವನ್ನು ನಿರೀಕ್ಷಿಸಬೇಡಿ ಎಂದು ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ #MP Deveshchandra Takur ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಮುಸ್ಲಿಮರು ಹಾಗೂ ಯಾದವರು ಮತ ಹಾಕಿಲ್ಲ ಆದ್ದರಿಂದ ತಮ್ಮಿಂದ ಈ ಎರಡೂ ಸಮುದಾಯದವರು ಯಾವುದೇ ಸಹಾಯ ನಿರೀಕ್ಷಿಸಬಾರದು ಎಂದಿದ್ದಾರೆ.
Also read: ದರ್ಶನ್’ಗೆ ಮತ್ತೊಂದು ಸಂಕಷ್ಟ | ತೂಗುದೀಪ ನಿವಾಸಕ್ಕೂ ಸಂಚಕಾರ? ಏನಿದು ಪ್ರಕರಣ

ಯಾದವರು ಮತ್ತು ಮುಸ್ಲಿಮರು ನನ್ನಿಂದ ಯಾವುದೇ ಸಹಾಯವನ್ನು ನಿರೀಕ್ಷಿಸಬಾರದು ಎಂದು ನಾನು ಸ್ಪಷ್ಟಪಡಿಸಿದ್ದೇನೆ. ಅವರು ನನ್ನನ್ನು ಭೇಟಿಯಾದಾಗ ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು. ಚಹಾ ಮತ್ತು ತಿಂಡಿಗಳನ್ನು ಸಹ ನೀಡಲಾಗುವುದು. ಆದರೆ ನಾನು ಅವರ ಯಾವುದೇ ಸಮಸ್ಯೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post