ಕಲ್ಪ ಮೀಡಿಯಾ ಹೌಸ್
ಸಾಗರ: ಕೊರೋನಾ ವಾರಿಯರ್ಸ್‌ಗಳಾಗಿ ಹಗಲಿರುಳು ಶ್ರಮಿಸುತ್ತಿರುವ ನೌಕರರಿಗೆ ತಡ ಮಾಡದೇ ವೇತನ ಪಾವತಿ ಮಾಡಿ ಎಂದು ಶಾಸಕ ಎಚ್. ಹಾಲಪ್ಪ ಸೂಚನೆ ನೀಡಿದ್ದಾರೆ.
ಹಾಸನದ ಭವಾನಿ ಸೆಕ್ಯುರಿಟಿ ಸರ್ವಿಸ್ ಅಡಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ಗ್ರೂಪ್ ಸಿಬ್ಬಂದಿಗಳಿಗೆ ಟೆಂಡರ್ ದಾರರಾದ ರಾಮಣ್ಣ ಎನ್ನುವವರು 2 ತಿಂಗಳ ವೇತನ ನೀಡಿರುವುದಿಲ್ಲ. ಕೋವಿಡ್ ಪರಿಸ್ಥಿತಿಯಲ್ಲಿ ಜೀವನ ನೆಡೆಸುವುದು ಕಷ್ಟವಾಗಿದೆ. ಕರೆ ಮಾಡಿದರು ಸ್ಪಂದಿಸುತ್ತಿಲ್ಲ ಸದರಿ ಟೆಂಡರ್’ದಾರರಿಂದ ವೇತನ ಪಾವತಿಸಿ ಕೊಡುವಂತೆ, ನೌಕರರು ಮನವಿ ನೀಡಿದರು.
ನೌಕರರ ಮನವಿಗೆ ಸ್ಪಂದಿಸಿದ ಶಾಸಕರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ, ಕೋವಿಡ್19 ಪರಿಸ್ಥಿತಿಯಲ್ಲಿ ವಾರಿಯರ್ಸ್ ಆಗಿ ಹಗಲು ರಾತ್ರಿ ದುಡಿಯುವ ನೌಕರರಿಗೆ ಟೆಂಡರ್ ದಾರರು ಸಂಬಳ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಟೆಂಡರ್‌ದಾರರ ಮೇಲೆ ಸೂಕ್ತ ಕ್ರಮ ಕೈಗೊಂಡು, ವೇತನ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post