ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ತಾಲ್ಲೂಕಿನ ಅಲೀಪುರದಲ್ಲಿನ ಜನತೆಯಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ವತಃ ಪಿಡಿಒ ಅಧಿಕಾರಿಯೇ ಮುಂದಾಗಿ ಸೋಂಕು ನಿವಾರಕ ಸಿಂಪರಣೆ ಮಾಡಿದ್ದಾರೆ.
ಬಳಿಕ ಪಿಡಿಒ ಆರ್.ಎನ್.ಸಿದ್ದರಾಮಯ್ಯ ಮಾತನಾಡಿ, ಇತ್ತೀಚಿಗೆ ಎಲ್ಲೆಡೆ ಕೋವಿಡ್ 19 ಸೋಂಕಿನ ಪರಿಣಾಮವಾಗಿ ಭಯಭೀತರಾಗಿರುವ ಜನತೆಯಲ್ಲಿ ಮನೆಯ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ. ಹಂತಹಂತವಾಗಿ ಗ್ರಾಮದ ಪ್ರತಿಯೊಂದು ಬಡಾವಣೆಯಲ್ಲಿನ ರಸ್ತೆಗಳಲ್ಲಿ, ಚರಂಡಿಗಳ ಬಳಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪರಣೆ ಮಾಡಿಸಲಾಗಿದೆ. ಇದರಿಂದ ಎಲ್ಲೆಡೆ ಉತ್ತಮ ಪರಿಸರವನ್ನು ಕಾಣಲು ಸಹಕಾರಿಯಾಗುತ್ತದೆ. ಕೋವಿಡ್ 19 ನಿಯಂತ್ರಣದ ಅಂಗವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ನಾಗರೀಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸಿಬ್ಬಂಧಿಯೊಂದಿಗೆ ಪ್ರತೀ ವಾರ್ಡಿಗೆ ಭೇಟಿ ನೀಡಿ ಸೋಂಕು ನಿವಾರಣಾ ಔಷಧಿಯನ್ನು ಸಿಂಪರಣೆ ಮಾಡಿಸಿದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093















