ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಸ್ಮಗ್ಲಿಂಗ್ ದಂಧೆಯೇ ಹಾಗೆ! ಕಾನೂನು ಹಾಗೂ ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಹಾರ ಮಾಡುತ್ತಲೇ ಇರುತ್ತಾರೆ. ಇಂತಹ ಬಹುತೇಕ ಕಳ್ಳ ದಾರಿಗಳನ್ನು ನಮ್ಮ ಭದ್ರತಾ ಸಿಬ್ಬಂದಿ ಕಂಡು ಹಿಡಿದು, ಸ್ಮಗ್ಲರ್’ಗಳನ್ನು ಹೆಡೆಮುರಿ ಕಟ್ಟುತ್ತಲೇ ಇರುತ್ತಾರೆ. ಆದರೆ, ಈಗ ಹೊರಬಿದ್ದಿರುವುದು ಸ್ಮಗ್ಲಿಂಗ್’ಗ ಹೊಚ್ಚಹೊಸ ದಾರಿ!
ಏನದು? ಕಡ್ಲೆಕಾಯಿ ಹಾಗೂ ಬಿಸ್ಕತ್!
ಹೌದು… ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್ ಒಳಗಿದ್ದ ಎರಡು ಕವರ್’ಗಳನ್ನು ಅನುಮಾನದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಯಿತು. ಆನಂತರ ಇದನ್ನು ಕೂಲಂಕಶವಾಗಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅದರಲ್ಲಿದ್ದ ಕಡ್ಲೆಕಾಯಿ ಹಾಗೂ ಬಿಸ್ಕತ್’ಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಹೀಗಾಗಿ, ಕಡ್ಲೆಕಾಯಿಗಳನ್ನು ಪರೀಕ್ಷಿಸಿದ ವೇಳೆ ಕಂಡಿದ್ದೇನು ಗೊತ್ತಾ? ಪ್ರತಿ ಕಡ್ಲೆಕಾಯಿಯೊಳಗೂ ಕಳ್ಳಸಾಗಾಣೆಯ ಹಣವಿತ್ತು. ಅಕ್ರಮವಾಗಿ ಹಣ ಸಾಗಾಟ ಮಾಡಲು ನೋಟುಗಳನ್ನು ಸಣ್ಣದಾಗಿ ಮಡಚಿ ಕಡ್ಲೆಕಾಯಿಗೊಳಗಿಟ್ಟು ಅದನ್ನು ಅನುಮಾನ ಬಾರದಂತೆ ಮುಚ್ಚಿ ಇಡಲಾಗಿತ್ತು. ಅದೇ ರೀತಿಯಲ್ಲಿ ಬಿಸ್ಕತ್’ಗಳನ್ನು ಕೊರೆದು ಅದರ ನಡುವೆ ನೋಟುಗಳನ್ನು ಅಡಗಿಸಿ ಇಡಲಾಗಿತ್ತು.
ರಾಷ್ಟ್ರೀಯ ಪತ್ರಕರ್ತರೊಬ್ಬರು ಇದರ ವೀಡಿಯೋವನ್ನು ತಮ್ಮ ಟ್ವಿಟರ್’ನಲ್ಲಿ ಶೇರ್ ಮಾಡಿದ್ದಾರೆ.
What a unique way to smuggle currency. @CISFHQrs recovers about R 45 lakh hidden in peanuts, biscuits from a passenger at @DelhiAirport pic.twitter.com/DS5aT3Sbeu
— Faizan Haidar ET (@FaiHaider) February 12, 2020
ಈ ರೀತಿ ಒಂದೇ ಬ್ಯಾಗ್’ನಿಂದ ಸುಮಾರು 45 ಲಕ್ಷ ರೂ.ಗಳ ಅಕ್ರಮ ಹಣವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಆ ಪ್ರಯಾಣಿಕರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post