ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ರೈಲು ಸಂಪರ್ಕಕ್ಕೆ ಈಗಾಗಲೇ ಹಲವಾರು ಕೊಡುಗೆಗಳನ್ನು ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ನಿರಂತರ ಪ್ರಯತ್ನದ ಫಲವಾಗಿ, ಬೀರೂರು-ಶಿವಮೊಗ್ಗ ಮಾರ್ಗ ಮತ್ತಷ್ಟು ಉನ್ನತೀಕರಣಗೊಳ್ಳಲಿದೆ.
ಬೀರೂರು-ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಇದಕ್ಕಾಗಿ 25 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಮಲೆನಾಡು-ಮಧ್ಯ ಹಾಗೂ ಉತ್ತರ ಕರ್ನಾಟಕದೊಂದಿಗೆ ನೇರ ಸಂಪರ್ಕ ಕಲ್ಪಿಸುವಲ್ಲಿಯೂ ಸಹ ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿತ್ತು. ಇದಕ್ಕಾಗಿ ನಾನು ಸಂಸದನಾದ ನಂತರ ಅವಿರತವಾಗಿ ಪ್ರಯತ್ನಪಟ್ಟು ಹಲವು ರೈಲುಗಳನ್ನು ಶಿವಮೊಗ್ಗಕ್ಕೆ ತರಲಾಗಿದೆ ಎಂದರು.
ಈ ಬೆಳವಣಿಗೆಗೆ ಪೂರಕವಾಗಿ ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ಹಾಗೂ ಶಿವಮೊಗ್ಗ ಹರಿಹರದ ನಡುವೆ ನೂತನ ರೈಲು ಮಾರ್ಗಗಳು ಮಂಜೂರಾಗಿದ್ದು, ಇದು ಅನುಷ್ಠಾನಗೊಳ್ಳುತ್ತಿದೆ. ಈಗ ಬೀರೂರು-ತಾಳಗುಪ್ಪ ನಡುವೆ ವಿದ್ಯುದ್ದೀಕರಣಗೊಳ್ಳುತ್ತಿರುವುದು ಇದಕ್ಕೆ ಪೂರಕವಾಗಿಯೇ ಇದೆ ಎಂದರು.
ಈ ಮಾರ್ಗ ವಿದ್ಯುದ್ದೀಕರಣಗೊಂಡರೆ ಈ ಮಾರ್ಗದ ಎಲ್ಲ ರೈಲುಗಳು ವಿದ್ಯುತ್ ಎಂಜಿನ್’ಗಳ ಸಹಾಯದಿಂದ ಸಂಚರಿಸಲಿದ್ದು, ಇದು ರೈಲುಗಳ ವೇಗವನ್ನು ಹೆಚ್ಚಿಸುವ ಜೊತೆಯಲ್ಲಿ ಪರಿಸರ ಮಾಲಿನ್ಯ ತಡೆಗೂ ಸಹಕಾರಿಯಾಗಲಿದೆ ಎಂದರು.
Get in Touch With Us info@kalpa.news Whatsapp: 9481252093
Discussion about this post