ಬಳ್ಳಾರಿ: ಐದು ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕವಾಗಿ ಸರ್ಕಾರ ನಡೆಸಿದ ಪರಿಣಾಮ ದೇಶದ ಜನತೆ ಅವರಿಗೆ ಜೈಕಾರ ಹಾಕಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಮತದಾನೋತ್ತರ ಸಮೀಕ್ಷೆಯ ಹಿನ್ನೆಲೆಯಲ್ಲಿ ಇಂದು ಮಾತನಾಡಿದ ಅವರು, ಮತದಾನೋತ್ತರ ಸಮೀಕ್ಷೆ ಎನ್’ಡಿಎ ಪರವಾಗಿದೆ. ಕಾಂಗ್ರೆಸ್’ನಲ್ಲಿ ನಾಯಕತ್ವ ಇಲ್ಲ, ಸಮೀಕ್ಷೆ ನಿಜವಾಗುತ್ತದೆ. ಪ್ರಧಾನಿ ಮೋದಿಯವರೇ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಜನರಿಗೆ ಬೇಡವಾಗಿದೆ. ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕಿದೆ ಎಂದರು.

















