ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಜಿಲ್ಲೆಯಲ್ಲಿ ಅನೇಕ ವರ್ಗದ ಅನೇಕ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಜೀವನಾಡಿಯಾಗಿರುವ ಈ ಎಲ್ಲಾ ಕಾರ್ಖಾನೆಗಳು ಕಳೆದ ಎರಡು ತಿಂಗಳುಗಳಿಂದ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರದ ಆದೇಶದಂತೆ ಸ್ಥಗಿತಗೊಂಡು, ಈ ಭಾಗದ ಸಾರ್ವಜನಿಕರಿಗೆ, ಕಾರ್ಮಿಕರಿಗೆ ಯಾವುದೇ ತೊಂದರೆ ಯಾಗದಂತೆ ತಮ್ಮ ಎಲ್ಲಾ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲಾಯಿತು.
ಈ ಭಾಗದ ಎಲ್ಲಾ ಕಾರ್ಖಾನೆಗಳಿಗೆ ಹೊಸಪೇಟೆ, ಕೊಪ್ಪಳ ಮತ್ತು ಗಂಗಾವತಿ ಭಾಗದಿಂದ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರು ಪ್ರತಿದಿನ ಪ್ರತಿ ಶಿಫ್ಟ್’ಗಳಲ್ಲಿ ಕಾರ್ಯನಿರ್ವಹಿಸಲು ಕಾರ್ಖಾನೆಗಳು ಒದಗಿಸಿರುವ ವಾಹನಗಳಲ್ಲಿ ಬರುತ್ತಾರೆ. ಅಲ್ಲದೆ ತಮ್ಮ ತಮ್ಮ ಕಾರ್ಖಾನೆಗಳ ಸುತ್ತಮುತ್ತಲ ಇರುವಂತಹ ಗ್ರಾಮೀಣ ಪ್ರದೇಶದ ಕಾರ್ಮಿಕ ವರ್ಗವು ಸಹಿತ ಕಾರ್ಖಾನೆಗಳಿಗೆ ಕೆಲಸಕ್ಕೆ ಬರುತ್ತಾರೆ.
ಈಗ ಕಾರ್ಖಾನೆಗಳ ಚಟುವಟಿಕೆ ಪ್ರಾರಂಭಿಸಲು ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಸರ್ಕಾರದ ಆದೇಶದನ್ವಯ ಕೊಪ್ಪಳ ಜಿಲ್ಲಾಡಳಿತ ಅನುಮತಿಯನ್ನು ನೀಡಿರುತ್ತಾರೆ. ಅದೇಶದಲ್ಲಿ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ. ಬೆಂಗಳೂರು, ಜಿಲ್ಲಾಧಿಕಾರಿಗಳು ಕೊಪ್ಪಳ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮತ್ತು ಭಾರತ ಸರ್ಕಾರದ ಗೃಹ ಕಾರ್ಯದರ್ಶಿಗಳು ದೆಹಲಿ, ಇವರೆಲ್ಲರ ಸರ್ಕಾರದ ಆದೇಶದಂತೆ, ಕೊಪ್ಪಳ ಭಾಗದ ಗ್ರಾಮೀಣ ಪ್ರದೇಶದ ಕಾರ್ಖಾನೆಗಳನ್ನು ಈ ಕೆಳಕಂಡ ಷರತ್ತಿನ ಆಧಾರದ ಮೂಲಕ ಉತ್ಪಾದನೆಯನ್ನು ಮಾಡಲು ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರ ಕೊಪ್ಪಳ ಇವರು ಆದೇಶವನ್ನು ನೀಡಿರುತ್ತಾರೆ.
ಕೋವಿಡ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕಳೆದ 40 ದಿನಗಳಿಂದ ಕೊಪ್ಪಳ ಜಿಲ್ಲೆಯ ಕಾರ್ಖಾನೆಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿ ಸರ್ಕಾರದ ಆದೇಶವನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾಡಳಿತದ ಜೊತೆಗೆ ಕೈಜೋಡಿಸಿ ಸಾಂಕ್ರಾಮಿಕ ರೋಗ ಹರಡದಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಜಾಗೃತಿ ಮೂಡಿಸುವುದು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಖಾನೆಗಳನ್ನು ಮುಚ್ಚುವುದರ ಮೂಲಕ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು. ಇದರಿಂದಾಗಿ ಸಾರ್ವಜನಿಕರು ಮತ್ತು ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಮುಚ್ಚಲಾಗಿದೆ. ಇದರಿಂದ ಕಾರ್ಖಾನೆಗಳಿಗೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಅಪಾರವಾದ ನಷ್ಟವನ್ನು ಅನುಭವಿಸಬೇಕಾಯಿತು.
ಈ ಹಿಂದೆ ಇದ್ದಂತಹ ಲಾಕ್ ಡೌನ್ ದಿನಾಂಕ 21-4-2020 ರಂದು ಕೆಲವೂಂದು ಜಿಲ್ಲೆಯಲ್ಲಿ ಸಡಿಲಿಕೆ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿರುತ್ತಾರೆ. ಈ ಆದೇಶವನ್ನು ಮುಂದಿಟ್ಟುಕೊಂಡು ಕಳೆದ ನಾಲ್ಕು ದಿನಗಳಿಂದ ವಿವಿಧ ಗ್ರಾಮೀಣ ಪ್ರದೇಶಗಳ ಕೈಗಾರಿಕೆಗಳ ಆಡಳಿತ ಮಂಡಳಿಯ ಸದಸ್ಯರು ಕೊಪ್ಪಳ ಜಿಲ್ಲೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಕಾರ್ಖಾನೆಗಳನ್ನು ತೆರೆಯಲು ಅನುಮತಿ ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅದರಂತೆ ಪ್ರಶಾಂತ್, ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರ ಕೊಪ್ಪಳ ಇವರು ನಗರಸಭೆ ವ್ಯಾಪ್ತಿಯಿಂದ ಹೊರಗಡೆ ಕಾರ್ಯನಿರ್ವಹಿಸುತ್ತಿರುವ, ಕೈಗಾರಿಕಾ ಘಟಕಗಳಿಗೆ ಕೋವಿಡ್ -19 ನಿರ್ವಹಣೆ ಸೂಚನೆಗಳನ್ನು ನೀಡಿದರು ಮತ್ತು ಕ್ರಮಗಳನ್ನು ಉಲ್ಲಂಘನೆ ಮಾಡದಂತೆ ಕಾರ್ಖಾನೆಗಳನ್ನು ತೆರೆಯಲು ಆದೇಶಿರುತ್ತಾರೆ ಮತ್ತು ಆದೇಶದಲ್ಲಿ ಸೂಚಿಸಲಾದ ಸೂಚನೆ ಮತ್ತು ಕ್ರಮಗಳು ಉಲ್ಲಂಘನೆಯಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ವಿವರಣೆಯನ್ನು ನೀಡುತ್ತಾರೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ನೀಡಿದಂತಹ ನಿರ್ಬಂಧನೆಗಳನ್ನು ಪಾಲಿಸಬೇಕು ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದ ಇದುವರೆಗೂ ಯಾವುದೇ ಪಾಸಿಟಿವ್ ಕೇಸ್ ಇಲ್ಲದೆ ಕೊಪ್ಪಳ ಜಿಲ್ಲೆಯು ಗ್ರೀನ್ ಜೂನ್’ನಲ್ಲಿ ಇರುವುದರಿಂದ ವಿವಿಧ ಹಂತದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಕೈಗಾರಿಕೆಗಳ ಚಟುವಟಿಕೆಗಳನ್ನು ಕೈಗೊಳ್ಳಲು ವಿನಾಯಿತಿ ನೀಡಿರುತ್ತಾರೆ.
ಜಂಟಿ ನಿರ್ದೇಶಕರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೊಪ್ಪಳ ಇವರು ಆದೇಶ ನೀಡಿರುವ ಪ್ರಕಾರ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತದೆ ಎಂದು ಸೂಚಿಸಿರುತ್ತಾರೆ.
- ಕಾರ್ಮಿಕರಿಗೆ ಕೈಗಾರಿಕಾ ಘಟಕದ ಸಮೀಪದಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು, ಮತ್ತು ಅವರ ಸಾಗಾಣಿಕೆಯನ್ನು ಕಾರ್ಖಾನೆಯ ವತಿಯಿಂದ ಏರ್ಪಡಿಸುವುದು.
- ಕಾರ್ಮಿಕರಿಗೆ ಕಾರ್ಖಾನೆಯೊಳಗೆ ಮತ್ತು ಕಾರ್ಖಾನೆಯಿಂದ ಹೊರಗೆ ಬರುವಾಗ ಸರಿಯಾದ ದ್ವಾರ ಕಲ್ಪಿಸುವುದು.
- ಪ್ರತಿ ಶಿಫ್ಟ್ ಸಮಯದಲ್ಲಿ ಕಾರ್ಮಿಕರ ಸಂದನಿ ಆಗದಂತೆ ಅಂತರವನ್ನು ಕಾಪಾಡುವುದು.
- ಕಾರ್ಖಾನೆಯ ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕೈಗೊಳ್ಳುವುದು, ಆರೋಗ್ಯದಲ್ಲಿ ವ್ಯತ್ಯಾಸ ಇದ್ದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರುವುದು.
- ಕಾರ್ಮಿಕರಿಗೆ ಕಡ್ಡಾಯವಾಗಿ ಕಾನೂನಿನ ಪ್ರಕಾರ ಅನ್ವಯವಾಗುವ ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು.
- ಕಾರ್ಮಿಕರಿಗೆ ಕಡ್ಡಾಯವಾಗಿ ಮ್ಷ್‌ಕಾ ಸ್ಯಾನಿಟರಿ ಇನ್ನಿತರ ವೈಯಕ್ತಿಕ ಸುರಕ್ಷತೆ ಸಾಧನಗಳನ್ನು ಬಳಸುವಂತೆ ನೋಡಿಕೊಳ್ಳುವುದು.
- ಕಾರ್ಖಾನೆಯ ಆವರಣದಲ್ಲಿ ಎಲ್ಲಾ ಸಂದರ್ಭದಲ್ಲಿ ಅಂತರವನ್ನು ಕಾಯ್ದುಕೊಳ್ಳುವುದು ಕಾರ್ಖಾನೆಯ ಆವರಣದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ತಿಳುವಳಿಕೆ ಬ್ಯಾನರ್ ಗಳನ್ನು ಪ್ರದರ್ಶಿಸುವುದು ಮತ್ತು ತರಬೇತಿಯನ್ನು ನೀಡುವುದು.
- ಕಾರ್ಖಾನೆಯ ಸಿಬ್ಬಂದಿಗೆ ಅಥವಾ ಕಾರ್ಮಿಕರಿಗೆ ಕೆಮ್ಮು ಜ್ವರ ಕಂಡುಬಂದಲ್ಲಿ ಅವರನ್ನು ಮಾನವ ಸಂಪನ್ಮೂಲ ಮತ್ತು ಹಿತರಕ್ಷಣಾ ಸಿಬ್ಬಂದಿಯವರ ಸಲಹೆ ಮೇರೆಗೆ ಕೆಲಸದ ಸ್ಥಳದಿಂದ ಪ್ರತ್ಯೇಕಿಸಿ, ಅವರ ಆರೋಗ್ಯದ ಮೇಲೆ ನಿಗಾ ಇಡುವುದು ಮತ್ತು ರೋಗದ ಲಕ್ಷಣ ಕಂಡು ಬಂದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತರುವುದು
- ವ್ಯಾವಹಾರಿಕ ಪ್ರವಾಸಗಳನ್ನು ರದ್ದುಗೂಳಿಸುವುದು
- ವಿದೇಶ ಪ್ರವಾಸದಿಂದ ಮರಳಿದಾಗ ಎರಡು ವಾರಗಳವರೆಗೆ ಮನೆಯಲ್ಲೇ ಇರುವಂತೆ ನೋಡಿಕೊಳ್ಳುವುದು
- ಎಲ್ಲಾ ಸಭೆ, ಸಮಾರಂಭ ಮತ್ತು ತರಬೇತಿಗಳನ್ನು ರದ್ದುಪಡಿಸುವುದು
- ಬಯೋಮೆಟ್ರಿಕ್ ಬಳಕೆ ನಿಷೇಧಿಸುವುದು
- ಕನಿಷ್ಠ ಸಿಬ್ಬಂದಿಯನ್ನು ಬಳಸಿ ಕೆಲಸ ಕಾರ್ಯನಿರ್ವಹಿಸುವುದು
- ಆರೋಗ್ಯದ ಸೇತು ಆಪ್’ನ್ನು ಎಲ್ಲಾ ಸಿಬ್ಬಂದಿ ಮತ್ತು ಕಾರ್ಮಿಕರು ತಮ್ಮ ಫೋನ್’ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದು
- ಕಾರ್ಖಾನೆಗಳು ಇನ್ನೂ ಹೆಚ್ಚಿನ ಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವುದು
- ಅಂತರ ಜಿಲ್ಲೆಯಾದ ಹೊಸಪೇಟೆ ನಗರ ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಆ ಪ್ರದೇಶದಲ್ಲಿ ವಾಸಿಸುವ ಸಿಬ್ಬಂದಿ ಮತ್ತು ಕಾರ್ಮಿಕರು ಕೊಪ್ಪಳ ಜಿಲ್ಲೆಗೆ ಬರುವುದನ್ನು ನಿಷೇಧಿಸಿದೆ
ಇನ್ನೂ ಅನೇಕ ಕಟ್ಟುನಿಟ್ಟಿನ ಷರತ್ತುಗಳನ್ನು ಹಾಕುವುದರ ಮೂಲಕ ಕಾರ್ಖಾನೆಗಳಿಗೆ ಉತ್ಪಾದನಾ ಚಟುವಟಿಕೆ ನಡೆಸಲು ಆದೇಶವನ್ನು ನೀಡಿರುತ್ತಾರೆ. ಈ ಆದೇಶದಂತೆ ಈಗಾಗಲೇ ಕಾರ್ಖಾನೆಗಳು ಪ್ರಾರಂಭವಾಗಬೇಕಾಗಿದೆ. ಆದರೆ ಈ ಭಾಗದ ಎಲ್ಲಾ ಕಾರ್ಖಾನೆಗಳಾದ ಕಿರ್ಲೋಸ್ಕರ್, ಹೊಸಪೇಟೆ ಸ್ಟೀಲ್ಸ್, ಎಕ್ ಇಂಡಿಯಾ, ಎಂಎಸ್’ಪಿಎಲ್, ದೃವದೇಶ ಮೆಟಲ್ಸ್, ಹರೇಕೃಷ್ಣ ಮೆಟಲ್ಸ್, ಮುಕುಂದ್ ಸ್ಟೀಲ್, ಅಲ್ಟಾಟೆಕ್ ಸಿಮೆಂಟ್ ಹಾಗೂ ಇನ್ನಿತರ ಕಾರ್ಖಾನೆಗಳ ಕೆಲಸಕ್ಕೆ ಹೆಚ್ಚಾಗಿ ಹೊಸಪೇಟೆ ಭಾಗದಿಂದ ಕಾರ್ಮಿಕರು ಮತ್ತು ಸಿಬ್ಬಂದಿ ಬರುತ್ತಾರೆ. ಇದಕ್ಕೆ ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ಹೊಸಪೇಟೆ ಭಾಗದಿಂದ ಕಾರ್ಖಾನೆಗೆ ಸುರಕ್ಷಿತವಾಗಿ ಕಂಪನಿಯ ವಾಹನದಲ್ಲಿ ಕರೆದುಕೊಂಡು ಬರಲು ಅನುಮತಿ ನೀಡದಿರುವುದು, ಕಾರ್ಖಾನೆಗಳ ಆಡಳಿತ ಮಂಡಳಿಯ ತಲೆ ನೋವಾಗಿದೆ.
ಕಾರ್ಖಾನೆಗಳ ಆಡಳಿತ ಮಂಡಳಿಯು ಜಿಲ್ಲಾಡಳಿತ ಆದೇಶಿಸಿರುವ ಎಲ್ಲಾ ಅಂಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಅದರಂತೆ ಹತ್ತಿರದ ಹೊಸಪೇಟೆ ಭಾಗದಿಂದ ಸಿಬ್ಬಂದಿ ಮತ್ತು ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಬರಲು ಅನುಕೂಲ ಕಲ್ಪಸಬೇಕೆಂದು ಮತ್ತೊಂದು ಮನವಿ ಮಾಡಿರುತ್ತಾರೆ. ಆದರೆ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾಡಳಿತ ಇದಕ್ಕೆ ಸ್ಪಂದಿಸುತ್ತದೆಯೂ ಕಾದು ನೋಡೋಣ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟಾರೆ ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಿ ಸಹಕಾರ ನೀಡಿದ ಜಿಲ್ಲಾಡಳಿತ ಮತ್ತು ಎಲ್ಲಾ ಕಾರ್ಖಾನೆಯ ಆಡಳಿತ ಮಂಡಳಿಗೆ ಅಭಿನಂದನೆ ತಿಳಿಸಲಾಗಿದೆ. ಅದರಂತೆ ಬಳ್ಳಾರಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ಕೋವಿಡ್ ರೋಗ ಕಡಿಮೆಯಾಗುತ್ತಿದೆ. ಈಗಾಗಲೇ ಹೊಸಪೇಟೆಯ ಮತ್ತು ಇತರೆ ಆರು ಪಾಸಿಟಿವ್ ಕೇಸ್’ಗಳು ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಾಸು ಹೊಸಪೇಟೆಗೆ ಬಂದಿದ್ದು ಸಹ ರೋಗ ಲಕ್ಷಣ ಕಡಿಮೆಯಾಗುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲಾ ಕಾರ್ಖಾನೆಗಳು ಬಡವರಿಗೆ, ಕೂಲಿ ಕಾರ್ಮಿಕರಿಗೆ ಕೈಲಾದಷ್ಟು ಆಹಾರದ ಕಿಟ್’ಗಳನ್ನು ಜಿಲ್ಲಾಡಳಿತದ ಸಹಾಯದಿಂದ ಕೊಡಲಾಗುತ್ತಿದೆ.
ವರದಿ: ಮುರುಳೀಧರ್ ನಾಡಿಗೇರ್
Get in Touch With Us info@kalpa.news Whatsapp: 9481252093
Discussion about this post