ಕಲ್ಪ ಮೀಡಿಯಾ ಹೌಸ್ | ಲಕ್ನೋ |
ತಾನು ಸಾಕಿದ ಮುದ್ದಿನ ಬೆಕ್ಕಿನ ಸಾವಿನಿಂದ ಮನನೊಂದ ಮಹಿಳೆಯೊಬ್ಬರು, ಎರಡು ದಿನ ಅದರ ಮೃತದೇಹದೊಂದಿಗೆ ಕಳೆದು, ಮೂರನೇ ದಿನ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಅಮ್ರೋಹಾದ ನಿವಾಸಿ ಪೂಜಾ(32) ಎಂದು ಗುರುತಿಸಲಾಗಿದೆ.
Also Read>> ಕನ್ನಡ ಚಿತ್ರರಂಗದ ಮೇಲೆ ನನಗೆ ಸಿಟ್ಟಿದೆ | ಡಿಸಿಎಂ ಶಿವಕುಮಾರ್ ಹೀಗೆ ಹೇಳಿದ್ದೇಕೆ?
ಮಹಿಳೆ ಎಂಟು ವರ್ಷಗಳ ಹಿಂದೆ ದೆಹಲಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಎರಡು ವರ್ಷ ಸಂಸಾರ ನಡೆಸಿ ವಿಚ್ಛೇದನ ಪಡೆದಿದ್ದರು.ಕೆಲವು ಕಾಲದ ಬಳಿಕ ತನ್ನ ತಾಯಿ ಗಜ್ರಾ ದೇವಿಯೊಂದಿಗೆ ವಾಸವಾಗಿದ್ದರು. ಒಂಟಿತನವನ್ನು ನಿಭಾಯಿಸಲು ಪೂಜಾ ಬೆಕ್ಕೊಂದನ್ನು ಸಾಕಿಕೊಂಡಿದ್ದರು.
ಆದರೆ, ಆಕೆ ಸಾಕಿದ್ದ ಬೆಕ್ಕು ಸಾವಿಗೀಡಾಯಿತು. ಇದರಿಂದ ತೀವ್ರ ದುಃಖಿತರಾದ ಮಹಿಳೆ ಅದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರು. ಸತ್ತ ಬೆಕ್ಕನ್ನು ಹೂಳುವಂತೆ ಆಕೆಯ ತಾಯಿ ಸೂಚಿಸಿದರೂ ಮಹಿಳೆ ಅದನ್ನು ನಿರಾಕರಿಸಿದ್ದರು.
ಈ ಕುರಿತು ತನ್ನ ತಾಯಿಯೊಂದಿಗೆ ವಾದಿಸಿದ್ದ ಆಕೆ ಅದು ಮತ್ತೆ ಬದುಕಿ ಬರುತ್ತದೆ ಎಂದು ತಾಯಿ ಜೊತೆ ವಾದಿಸಿದ್ದಳು. ಪೂಜಾ ಎರಡು ದಿನ ಬೆಕ್ಕಿನ ಮೃತದೇಹದ ಜೊತೆ ಕಾಲ ಕಳೆದಿದ್ದಳು. ಕೊನೆಗೆ ಅದು ಬದುಕಿ ಬರಲಿಲ್ಲ ಎಂದು ದುಃಖಿಸಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತನ್ನ ಕೋಣೆಯಲ್ಲಿ ಪೂಜೆ ನೇಣಿಗೆ ಶರಣಾಗಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಬೆಕ್ಕಿನ ಮೃತದೇಹವು ಇತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post