ನವದೆಹಲಿ: ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶದಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಸ್ವಚ್ಛತಾ ಹಿ ಸೇವಾ ಮೂವ್‌ಮೆಂಟ್ ಎಂಬ ಚಳುವಳಿಯನ್ನು ಘೋಷಣೆ ಮಾಡಿದ್ದು, ಸೆ.15ರಿಂದ ಇದು ಜಾರಿಗೆ ಬರಲಿದೆ.
ಈ ಕುರಿತಂತೆ ಇಂದು ಚಳುವಳಿ ಘೋಷಣೆ ಮಾಡಿರುವ ಪ್ರಧಾನಿ, ಮಹಾತ್ಮ ಗಾಂಧಿಯವರ 150ನೆಯ ಜನ್ಮ ದಿನವಾದ ಅ.2ರಂದು ಇದನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದು, ದೇಶದ ಪ್ರತಿ ಪ್ರಜೆಯೂ ಸಹ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
The ‘Swachhata Hi Seva Movement’ commences on 15th September. This is a great way to pay tributes to Bapu.
Come, be a part of this movement and strengthen the efforts to create a Swachh Bharat! pic.twitter.com/c7wCxPBbUL
— Narendra Modi (@narendramodi) September 12, 2018
ಈ ವಿಚಾರವನ್ನು ಟ್ವಿಟರ್ ಮೂಲಕ ಪ್ರಕಟಿಸಿರುವ ಮೋದಿ, ಅ.2ಕ್ಕೆ ಸ್ವಚ್ಛ ಭಾರತ ಅಭಿಯಾನಕ್ಕೆ ನಾಲ್ಕು ವರ್ಷ ತುಂಬುತ್ತದೆ. ಗಾಂಧೀಜಿಯವರ ಕನಸನ್ನು ನನಸು ಮಾಡುವ ಪ್ರಯತ್ನದ ಭಾಗದಲ್ಲಿ ಯಾರೆಲ್ಲಾ ಕೈ ಜೋಡಿಸಿದ್ದಾರೆಯೋ ಅವರಿಗೆಲ್ಲಾ ನಾನು ಸೆಲ್ಯೂಟ್ ಮಾಡುತ್ತೇನೆ ಎಂದಿದ್ದಾರೆ.
On 2nd October we mark the start of Gandhi Ji’s 150th birth anniversary. It is also the day Swachh Bharat Mission completes 4 years of being a historic mass movement aimed at fulfilling Bapu’s dream of a Clean India.
I salute all those working towards a Swachh Bharat! pic.twitter.com/1bqsuPz8bM
— Narendra Modi (@narendramodi) September 12, 2018
ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡ ಜನರ ಜೊತೆಯಲ್ಲಿ ಸೆ.15ರಂದು ಬೆಳಗ್ಗೆ 9.30ಕ್ಕೆ ಸಂವಾದ ನಡೆಸಲಿರುವ ಮೋದಿ, ಅಂದೇ ಸ್ವಚ್ಛತಾ ಹಿ ಸೇವಾ ಮೂವ್‌ಮೆಂಟ್ ಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
At 9:30 AM on 15th, we shall come together and mark the commencement of the ‘Swachhata Hi Seva Movement.’ I look forward to interacting with those who have worked assiduously on the ground to strengthen the Swachh Bharat Mission after which Swachhata activities will begin.
— Narendra Modi (@narendramodi) September 12, 2018
Discussion about this post