ನವದೆಹಲಿ: ಭಾರತೀಯ ಯೋಧರನ್ನು ಮುಟ್ಟುವ ಯಾವುದೇ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಗಡ್’ಚಿರೋಲಿಯಲ್ಲಿ ಐಇಡಿ ಸ್ಫೋಟಿಸಿ, 16 ಕಮಾಂಡೋಗಳನ್ನು ಬಲಿ ಪಡೆದ ದುಷ್ಕರ್ಮಿಗಳನ್ನು ಬೇಟೆಯಾಡುವ ಸೂಚನೆಯನ್ನು ನೀಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ನಮ್ಮ ಭದ್ರತಾ ಪಡೆ ಸಿಬ್ಬಂದಿ ಮೇಲೆ ನಡೆಸಿದ ದಾಳಿಯನ್ನು ಹೇಯಕೃತ್ಯವೆಂದು ಭಾವಿಸುತ್ತೇನೆ. ಹುತಾತ್ಮರ ತ್ಯಾಗವನ್ನು ಮರೆಯುವುದಿಲ್ಲ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಈ ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
Strongly condemn the despicable attack on our security personnel in Gadchiroli, Maharashtra. I salute all the brave personnel. Their sacrifices will never be forgotten. My thoughts & solidarity are with the bereaved families. The perpetrators of such violence will not be spared.
— Chowkidar Narendra Modi (@narendramodi) May 1, 2019
ಇನ್ನು, ಘಟನೆ ಕುರಿತಂತೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಇದೊಂದು ಹೇಡಿಗಳು, ಹತಾಶೆ ಹೊಂದಿರುವವರು ಮಾಡಿದ ಕೆಲಸ. ಘಟನೆಯ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಜತೆ ಮಾತುಕತೆ ನಡೆಸಿದ್ದೇನೆ. ನಮ್ಮ ಪೊಲೀಸ್ ಸಿಬ್ಬಂದಿಯ ಶೌರ್ಯದ ಬಗ್ಗೆ ಅಪಾರ ಹೆಮ್ಮೆಯಿದೆ. ದೇಶಕ್ಕಾಗಿ ಅವರು ಮಾಡಿದ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ದಾರೆ.
Spoke to Maharashtra CM Shri @Dev_Fadnavis regarding the tragic incident in Gadchiroli and expressed my grief at the loss of brave Police personnel. We are providing all assistance needed by the state government. MHA is in constant touch with the state administration. 2/2
— Chowkidar Rajnath Singh (@rajnathsingh) May 1, 2019
Discussion about this post