ನವದೆಹಲಿ: ಏಷ್ಯನ್ ಗೇಮ್‌ಸ್ 2018ರಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತಂತೆ ಇಂದು ಟ್ವೀಟ್ ಮಾಡಿರುವ ಮೋದಿ, ಸೈನಾ ನೆಹ್ವಾಲ್ ಏಷ್ಯನ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಪದಕ ತಂದುಕೊಡುವ ಮೂಲಕ ಇತಿಹಾಸ ಬರೆಯುವುದರೊಂದಿಗೆ ನಮ್ಮೆಲ್ಲರಿಗೂ ಹೆಮ್ಮೆಯುಂಟುಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
Trust @NSaina to make us proud and script history!
Her Bronze in the #AsianGames2018 is the first ever medal for India in the women's singles Badminton category.
India congratulates our star badminton player for yet another success. pic.twitter.com/zifupmwsr0
— Narendra Modi (@narendramodi) August 27, 2018
18 ನೆಯ ಆವೃತ್ತಿಯ ಪಂದ್ಯದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಚೀನಾದ ತೈ ಝು ಯಿಂಗ್ ವಿರುದ್ಧ 17-21, 14-21 ನೇರ ಗೇಮ್ ಗಳಿಂದ ಪರಾಭವಗೊಂಡಿದ್ದರು.
ಇನ್ನು ಸೈನಾ ಸಾಧನೆಗೆ ಕೇಂದ್ರ ಕ್ರೀಡಾ ಹಾಗೂ ಯುವಜನ ವ್ಯವಹಾರಗಳ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಸಹ ಅಭಿನಂದಿಸಿದ್ದಾರೆ.
FOR THE FIRST TIME IN #ASIANGAMES, we have won a medal in women's singles Badminton!@NSaina clinches a bronze, and ends our dry spell! Proud of you and your achievement!#KheloIndia #AsianGames2018 #IndiaAtAsianGames pic.twitter.com/B1pwKNqWB4
— Rajyavardhan Rathore (@Ra_THORe) August 27, 2018
Discussion about this post