ಬೋಗಿ ಬಿಲ್(ಅಸ್ಸಾಂ): ಏಷ್ಯಾದಲ್ಲೇ 2ನೆಯ ಅತಿ ಉದ್ದದ ಸೇತುವೆ ಎಂದು ಖ್ಯಾತಿಗೆ ಪಾತ್ರವಾಗಿರುವ ಅಸ್ಸಾಂನ ಬೋಗಿ ಬಿಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು.
ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಿರುವ ದೇಶದ ಅತೀ ಉದ್ದದ ಬೋಗಿಬಿಲ್ ರಸ್ತೆ ಮತ್ತು ರೈಲು ಸಂಚರಿಸಬಲ್ಲ ಇದು ಏಷ್ಯಾದಲ್ಲೇ 2 ನೇ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ವಿಶೇಷ.
#WATCH Prime Minister Narendra Modi at Bogibeel Bridge, a combined rail and road bridge over Brahmaputra river in Dibrugarh. #Assam pic.twitter.com/LiTR9jO5ks
— ANI (@ANI) December 25, 2018
ಇದಕ್ಕೂ ರಾಜ್ಯದ ಮಟ್ಟಿಗೆ ವಿಶೇಷವೆಂದರೆ, ಹಿಂದೆ ಪ್ರಧಾನಿಯಾಗಿದ್ದ ರಾಜ್ಯದ ಎಚ್.ಡಿ. ದೇವೇಗೌಡರು ಈ ಸೇತುವೆ ಶಿಲಾನ್ಯಾಸ ನೆರವೇರಿಸಿದ್ದರು. 1997ರ ಜನವರಿ 22ರಂದು ದೇವೇಗೌಡರು ಸೇತುವೆಗೆ ಶಿಲಾನ್ಯಾಸ ನೆರವೇರಿಸಿದ್ದರು. 2002 ರಲ್ಲಿ ಆಗಿನ ಪ್ರಧಾನ ಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಈಗ 16 ವರ್ಷಗಳ ನಂತರ ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.
ಸೇತುವೆ ವಿಶೇಷವೇನು:
- ಏಷ್ಯಾದ 2ನೆಯ ಅತಿ ಉದ್ದದ ಸೇತುವೆ
- 4.9 ಕಿಲೋ ಮೀಟರ್ ದೂರ
- ಅಸ್ಸಾಂನಿಂದ ಅರುಣಾಚಲಕ್ಕೆ ಸಂಪರ್ಕ
- ಲೇನ್‌ಗಳ ರೈಲ್ವೇ ಟ್ರ‍್ಯಾಕ್ ಮತ್ತು 3 ಲೇನ್‌ಗಳು ರಸ್ತೆ
- ನಿರ್ಮಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ
- ಯುದ್ದ ವಿಮಾನಗಳನ್ನು ಇಳಿಸುವ ಸಾಮರ್ಥ್ಯ
- ಯುದ್ದ ಟ್ಯಾಂಕರ್‌ಗಳೂ ಸಹ ಸಂಚರಿಸುವ ಸಾಮರ್ಥ್ಯ
PM @narendramodi dedicates the India's longest #BogibeelBridge in Assam to the nation. The bridge spans the River Brahmaputra between Dibrugarh and Dhemaji districts of Assam and is of immense economic and strategic significance for the nation. pic.twitter.com/syoauOHKY4
— PIB India (@PIB_India) December 25, 2018
Discussion about this post