ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ ಮುಂದಿನ 2-3 ವರ್ಷಗಳಲ್ಲಿ ಕೊಲೆಯಾಗುತ್ತಾರೆ ಎಂದು ಸಿಖ್ #Sikh ರೈತನ ವೇಷ ಧರಿಸಿರುವ ಅನಾಮಧೇಯ ವ್ಯಕ್ತಿಯೊಬ್ಬ ನೀಡಿರುವ ಹೇಳಿಕೆ ಈಗ ವ್ಯಾಪಕ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಇಂತಹ ಒಂದು ವೀಡಿಯೋ ವೈರಲ್ ಆಗುತ್ತಿದ್ದು, ದೆಹಲಿ ಚಲೋ #DelhiChaloProtest ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಅನಾಮಧೇಯ ವ್ಯಕ್ತಿ ಈ ರೀತಿ ಹೇಳಿಕೆ ನೀಡಿದ್ದಾನೆ ಎಂದು ಹೇಳಲಾಗಿದೆ.

"PM Modi will be kiIIed in the upcoming 2-3 years – An alleged Farmer"
Until when will we keep tolerating such things? An open threat to kiII the PM of the country shouldn't be acceptable.. pic.twitter.com/eFQnGsumEm
— Mr Sinha (@MrSinha_) February 17, 2024
ಸ್ಥಳೀಯ ವರದಿಗಾರರೊಂದಿಗೆ ಮಾತನಾಡುವಾಗ, ಅತ್ಯಂತ ಅಚಲವಾದ ಧ್ವನಿಯಲ್ಲಿ ವ್ಯಕ್ತಿ ಪ್ರಧಾನಿ ಮೋದಿಯನ್ನು #PMNarendraModi ಕೊಲ್ಲುವ ಬೆದರಿಕೆ ಹಾಕಿದ್ದಾನೆ.

ಬೆದರಿಕೆಯ ಮಾತನ್ನಾಡಿರುವ ವ್ಯಕ್ತಿಯ ವೀಡಿಯೋ ದೆಹಲಿ ಚಲೋ ವೇಳೆಯದ್ದು ಎಂದು ಅನುಮಾನಿಸಲಾಗಿದ್ದರೂ, ಇದರ ಸತ್ಯಾಸತ್ಯತೆ ಕುರಿತಾಗಿ ಮಾಹಿತಿ ಹೊರಬರಬೇಕಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post