ಪೂನಾ: ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು, ಆರ್ಯ ಚಾಣಕ್ಯ ಅವರ ಚಿಂತನೆಗಳಿಗೂ ಬಹುತೇಕ ಸಾಮ್ಯತೆಯಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ಲೇಷಣೆ ಮಾಡಿದ್ದಾರೆ.
ಪೂನಾದ ಕಾರ್ಯಕ್ರಮವೊಂದರಲ್ಲಿ ಆರ್ಯ ಚಾಣಕ್ಯ ಜೀವನ್ ಔರ್ ಕಾರ್ಯ್: ಆಕ್ ಕೆ ಸಂದರ್ಭ್ ಮೈನ್ ಎಂಬ ವಿಚಾರದ ಕುರಿತಾಗಿ ಅವರು ಮಾತನಾಡುವ ವೇಳೆ ಈ ರೀತಿ ಹೇಳಿದ್ದಾರೆ.
ಆರ್ಯ ಚಾಣಕ್ಯನ ಆಡಳಿತಾತ್ಮಕ ಚಿಂತನೆ ಹಾಗೂ ನೀತಿಗಳು ಸಾಮ್ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದವು. ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ ಹಾಗೂ ನೀತಿಗಳೂ ಸಹ ಇದ್ದು, ಇದು ದೇಶದ ಅಭಿವೃದ್ಧಿಗೆ ಪೂರಕ ಹಾಗೂ ಹಿತವಾಗಿವೆ ಎಂದಿದ್ದಾರೆ.

















