ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಜ.22ರಂದು ಅಯೋಧ್ಯೆಯಲ್ಲಿ #Ayodhya ಐತಿಹಾಸಿಕ ಕ್ಷಣವಾಗಿ ದಾಖಲಾಗಿರುವ ಬಾಲರಾಮನ #Ramalalla ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಂದಿನಿಂದ 11 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ #PMNarendraModi ಅವರು ವಿಶೇಷ ವ್ರತವನ್ನು ಆರಂಭಿಸಿದ್ದಾರೆ.
ಈ ಕುರಿತಂತೆ ಆಡಿಯೋ ಮೂಲಕ ದೇಶದ ಜನರಿಗೆ ಭಾವನಾತ್ಮಕ ಸಂದೇಶ ನೀಡಿರುವ ಪ್ರಧಾನಿಯವರು, ಬಾಲರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದ ಮೊದಲು 11 ದಿನಗಳ ಅನುಷ್ಠಾನ (ಆಚರಣೆಗಳು) ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇಂತಹ ಒಂದು ಸಮಯದಲ್ಲಿ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ನನ್ನ ಬಳಿಯಿಲ್ಲ. ಹೀಗಾಗಿ, ನನ್ನ ಸೇವೆಯಾಗಿ ಈ ವ್ರತವನ್ನು ಕೈಗೊಳ್ಳುತ್ತಿದ್ದೇನೆ ಎಂದಿದ್ದಾರೆ.
ನಾನು 11 ದಿನ ವಿಶೇಷ ವ್ರತ ಆರಂಭಿಸುತ್ತೇನೆ. ಪ್ರಭು ಶ್ರೀರಾಮನು ಕಾಲ ಕಳೆದ ಪಂಚವಟಿಯ #Panchavati ನಾಸಿಕ್ ಧಾಮದಿಂದ ನಾನು ವ್ರತ ಆರಂಭಿಸುತ್ತೇನೆ. ಸ್ವಾಮಿ ವಿವೇಕಾನಂದರ #SwamiVivekananda ಜಯಂತಿಯಂದೇ ನಾನು ವ್ರತ ಆರಂಭಿಸುತ್ತಿರುವುದು ಪ್ರಮುಖ ಸಂಗತಿಯಾಗಿದೆ ಎಂದು ತಿಳಿಸಿದರು.
अयोध्या में रामलला की प्राण प्रतिष्ठा में केवल 11 दिन ही बचे हैं।
मेरा सौभाग्य है कि मैं भी इस पुण्य अवसर का साक्षी बनूंगा।
प्रभु ने मुझे प्राण प्रतिष्ठा के दौरान, सभी भारतवासियों का प्रतिनिधित्व करने का निमित्त बनाया है।
इसे ध्यान में रखते हुए मैं आज से 11 दिन का विशेष…
— Narendra Modi (@narendramodi) January 12, 2024
ಹಿಂದೂ ಶಾಸ್ತ್ರಗಳ ಪ್ರಕಾರ, ದೇವತೆಯ ವಿಗ್ರಹದ `ಪ್ರಾಣ ಪ್ರತಿಷ್ಠೆ’ ಒಂದು ವಿವರವಾದ ಆಚರಣೆಯಾಗಿದೆ. ಸಮಾರಂಭದ ಮೊದಲು ಅನುಸರಿಸಬೇಕಾದ ನಿರ್ದಿಷ್ಟ ನಿಯಮಗಳಿವೆ.
ಕಠಿಣ ವೇಳಾಪಟ್ಟಿ ಮತ್ತು ಜವಾಬ್ದಾರಿಗಳ ನಡುವೆಯೂ ಎಲ್ಲಾ ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಅದರ ಫಲವಾಗಿ 11 ದಿನಗಳ ಅನುಷ್ಠಾನ ಆರಂಭಿಸಿದ್ದಾರೆ.
ಹೀಗಿರಲಿದೆ ಪ್ರಧಾನಿಯವರ ವ್ರತ
ಹಿಂದೂ ಧರ್ಮಗ್ರಂಥಗಳಲ್ಲಿ, ಪವಿತ್ರೀಕರಣದ ಮುನ್ನ ಉಪವಾಸಕ್ಕಾಗಿ ನಿರ್ದಿಷ್ಟ ಸೂಚನೆ ಹಾಗೂ ನಿಯಮಗಳನ್ನು ಹೇಳಲಾಗಿದೆ. ಇದರಂತೆಯೇ ಪ್ರಧಾನಿಯವರು ಅನುಸರಿಸುತ್ತಿದ್ದಾರೆ.

ಪ್ರಧಾನಮಂತ್ರಿಯವರು ಜನವರಿ 22 ರಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ ಮತ್ತು ವಿದೇಶದಿಂದ ಹಲವಾರು ವಿವಿಐಪಿ ಅತಿಥಿಗಳು ಸಮಾರಂಭಕ್ಕೆ ಆಹ್ವಾನಗಳನ್ನು ಸ್ವೀಕರಿಸಿರುವುದರಿಂದ ಕಾರ್ಯಕ್ರಮಕ್ಕೆ ಸಿದ್ಧತೆಗಳು ಕೊನೆಯ ಹಂತದಲ್ಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post