ಛತ್ತೀಸ್‌ಘಡ: ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ನಿಮಗೆ ತಾಕತ್ತಿದ್ದರೆ ಗಾಂಧಿ ಕುಟುಂಬದ ಹೊರಗಿನವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಎಂದು ಬಹಿರಂಗ ಸವಾಲೆಸೆದಿದ್ದಾರೆ.
ಛತ್ತೀಸ್‌ಘಡದ ಅಂಬಿಕಾಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಗಾಂಧಿ ಕುಟುಂಬದ ಹೊರತಾಗಿ ಹೊರಗಿನ ನಾಯಕರು ಕಾಂಗ್ರೆಸ್ ಅಧ್ಯಕ್ಷರಾಗಿದ್ದು ನೀವು ನೋಡಿದ್ದೀರಾ? ನಾನು ಅವರಿಗೆ(ಕಾಂಗ್ರೆಸ್‌ಗೆ) ಬಹಿರಂಗ ಸವಾಲು ಹಾಕಲು ಬಯಸುತ್ತೇನೆ: ನಿಮಗೆ ತಾಕತ್ತಿದ್ದರೆ ಗಾಂಧಿ ಕುಟುಂಬದ ಹೊರತಾಗಿನ ವ್ಯಕ್ತಿಗಳನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ. ಹಾಗೆ ಮಾಡಿದ್ದಲ್ಲಿ ನೆಹರೂ ಜಿ ಅವರು ನಿಜವಾದ ಪ್ರಜಾಪ್ರಭುತ್ವವವನ್ನು ಸೃಷ್ಠಿಸಿದ್ದಾರೆ ಎಂದು ನಾನು ಹೇಳುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
I thank the people of Chhattisgarh for the affection. Addressing a rally in Ambikapur. Watch. https://t.co/0o4wlHYAIT
— Narendra Modi (@narendramodi) November 16, 2018
ಕಳೆದ ಲೋಕಸಭಾ ಚುನಾವಣೆಯ ಸೋಲನ್ನು ಕಾಂಗ್ರೆಸ್ ಇಂದಿಗೂ ಸಹ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ನಾಲ್ಕೂವರೆ ವರ್ಷ ಕಳೆದಿದೆ. ಆದರೆ, ಅವರು ನನ್ನನ್ನು ಪ್ರಧಾನಿ ಎಂದು ಒಪ್ಪಿಕೊಳ್ಳಲು ಸಿದ್ದರಿಲ್ಲ. ಇಂದಿಗೂ ಅವರೆಲ್ಲಾ ಕಣ್ಣೀರು ಹಾಕುತ್ತಾ ಕುಳಿಸಿದ್ದಾರೆ. ಚಾಯ್ ವಾಲಾ ಹೇಗೆ ಪ್ರಧಾನಿಯಾದ ಎಂದು ಚಿಂತಿಸುತ್ತಿದ್ದಾರೆ ಎಂದು ಕಟಕಿಯಾಡಿದರು.
Discussion about this post