ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ವಿರುದ್ಧದ ಹೋರಾಟದ ಭಾಗವಾಗಿ ಎಪ್ರಿಲ್ 5ರ ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಮನೆಗಳ ಲೈಟ್ ಆರಿಸಿ, ಮೊಂಬತ್ತಿ, ದೀಪ, ಟಾರ್ಚ್ ಅಥವಾ ಮೊಬೈಲ್ ಲೈಟ್ ಬೆಳಗಿಸಿ ಕೊರೋನಾ ವಿರುದ್ಧ ಹೋರಾಟಕ್ಕೆ ಸಂಕಲ್ಪ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ದೇಶವನ್ನುದ್ದೇಶೀಸಿ ವೀಡಿಯೋ ಸಂದೇಶ ನೀಡಿರುವ ಅವರು, ಅಂದು ನಿಮ್ಮ ಮನೆಗಳಿಂದ ಯಾರೂ ಹೊರ ಬರದೇ ಮನೆಯ ಕಿಟಕಿ ಅಥವಾ ಬಾಲ್ಕನಿಯಲ್ಲಿ ನಾನು ಹೇಳಿದ್ದನ್ನು ಮಾಡಿ ಎಂದು ಕರೆ ನೀಡಿದ್ದಾರೆ.
A video messsage to my fellow Indians. https://t.co/rcS97tTFrH
— Narendra Modi (@narendramodi) April 3, 2020
ಪ್ರೀತಿಯ ದೇಶವಾಸಿಗಳೇ ನಮಸ್ಕಾರ, ಮಾರ್ಚ್ 22ರಂದು ಜನತಾ ಕರ್ಫ್ಯೂಗೆ ಹಾಗೂ ಗಂಟೆ ಭಾರಿಸುವುದನ್ನು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಲಾಕ್ ಡೌನ್ ಘೋಷನೆ ಮಾಡಿ ಇಂದಿಗೆ 9 ದಿನವಾಗಿದೆ. ಈಗ ಇದನ್ನು ವಿಶ್ವವೇ ಅನುಸರಿಸುವಂತಾಗಿದೆ ಎಂದಿದ್ದಾರೆ.
ದೇಶದಲ್ಲಿರುವ ಎಲ್ಲರಿಗೂ ಒಂದೇ ಪ್ರಶ್ನೆ ಕಾಡುತ್ತಿರುವುದು. ಲಾಕ್ ಡೌನ್ ಎಷ್ಟು ದಿನ ಮುಂದುವರೆಯಬಹುದು ಎಂಬುದು ಕಾಡುತ್ತಿದ್ದು, ಮನೆಯಲ್ಲಿ ಕುಳಿತು ನಾವು ಮಾಡುವುದಾದರೂ ಏನು ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಇಂತಹ ವೇಳೆಯಲ್ಲಿ ಕೊರೋನಾ ವಿರುದ್ಧ ಇಡಿಯ ದೇಶ ಒಗ್ಗಟ್ಟಾಗಿದೆ ಎಂಬುದನ್ನು ತೋರಿಸುವ ಕ್ಷಣ ಬಂದಿದೆ. ಹೀಗಾಗಿ, ಈ ರೀತಿ ದೀಪ ಬೆಳಗಿಸುವ ಮೂಲಕ ಒಗ್ಗಟ್ಟನ್ನು ತೋರಿಸೋಣ. ಆದರೆ, ಮಾರ್ಚ್ 22ರಂದು ಚಪ್ಪಾಳೆ ಹೊಡೆಯುವ ವೇಳೆ ಮನೆಗಳಿಂದ ಹೊರಕ್ಕೆ ಬಂದಂತೆ ಈಗ ಬರಬೇಡಿ. ಅಂತಹ ತಪ್ಪು ಮಾಡಬೇಡಿ ಎಂದಿದ್ದಾರೆ.
ಅಂದು ನಿಮ್ಮ ಮನೆಗಳ ಲೈಟ್ ಆರಿಸಿ, ದೀಪ ಬೆಳಗಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದ ಒಗ್ಗಟ್ಟನ್ನು ಪ್ರದರ್ಶಿಸುವ ಜೊತೆಯಲ್ಲಿ ಅಂಧಕಾರವನ್ನು ದೂರವಾಗಿಸೋಣ ಎಂದು ಕರೆ ನೀಡಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post