ಬೆಂಗಳೂರು: ಇಂದು ಮುಂಜಾನೆ ಇಹಲೋಕ ತ್ಯಜಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಪಡೆದುಕೊಂಡರು.
In Bengaluru, I paid tributes to Shri Ananth Kumar Ji. We’ve lost an outstanding public servant, who had a positive impact on the lives of many. Also spent time with his family members. pic.twitter.com/SRXPqyY9x5
— Narendra Modi (@narendramodi) November 12, 2018
ವಿಶೇಷ ವಿಮಾನದ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಿಷ್ಟಾಚಾರದಂತೆ ಬರಮಾಡಿಕೊಂಡರು.
ವಿಮಾನ ನಿಲ್ದಾಣದಿಂದ ನೇರವಾಗಿ ಅನಂತಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಮೋದಿ, ಅಗಲಿದ ತಮ್ಮ ಸಹೋದ್ಯೋಗಿಗೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಪ್ರಧಾನಿಯವರು ಭಾವುಕರಾಗಿ ಕಂಡುಬಂದರು.
Prime Minister @narendramodi arrived in Bengaluru this evening to pay his tributes to Union Minister H.N. #AnanthaKumar, who breathed his last early morning today. Vajubhai Vala, Governor of Karnataka , Chief Minister @hd_kumaraswamy and others welcomed him at HAL airport. pic.twitter.com/6znmVQyh79
— CM of Karnataka (@CMofKarnataka) November 12, 2018
ನಂತರ, ಅನಂತಕುಮಾರ್ ಅವರ ಕುಟುಂಬಸ್ತರೊಂದಿಗೆ ಮಾತನಾಡಿದ ಮೋದಿ, ಸಾಂತ್ವನ ಹೇಳಿದರು.
ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ವಿ.ಆರ್. ವಾಲಾ, ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
PM @narendramodi reached Bengaluru, where he will pay his last respects to Shri Ananth Kumar Ji. pic.twitter.com/fyAa7jPBhg
— PMO India (@PMOIndia) November 12, 2018
ಅಗಲಿದ ಮಿತ್ರನ ಅಂತಿಮ ದರ್ಶನ ಪಡೆದ ಪ್ರಧಾನಿಯವರು ನವದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
Discussion about this post