ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಮುಂದೆ ದೇಶದ 543 ಸ್ಥಾನಗಳನ್ನೂ ತಾವೇ ಗೆಲ್ಲುತ್ತೇವೆ ಎಂದು ಬಿಜೆಪಿಯವರು #BJP ಹೇಳುತ್ತಿರುವುದು ದೇಶಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ #MallijarjunaKharge ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಈ ಬಾರಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಹೀಗಾದರೆ ಬೇರೆಯವರಿಗೆ ಏನು ಸಿಗುತ್ತದೆ. ದೇಶದ 543 ಸ್ಥಾನಗಳನ್ನು ತಾವೇ ಗೆಲ್ಲುವುದಾಗಿ ಹೇಳುತ್ತಿದ್ದು, ಒಂದು ವೇಳೆ ಹೀಗಾದರೆ ದೇಶಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಚುನಾವಣೆಗೆ ನಮ್ಮ ಪಕ್ಷ ಎಲ್ಲ ಸಿದ್ದತೆಗಳನ್ನು ನಡೆಸಿದ್ದು, ಪ್ರತಿ ರಾಜ್ಯದ ಪ್ರಮುಖರ ಸಭೆ ನಡೆಸಿದ್ದೇವೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post