ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದರ್ಪ ಮೆರೆಯುತ್ತಿರುವ ಪೊಲೀಸ್ ಇಲಾಖೆಯ ದೌರ್ಜನ್ಯಕ್ಕೆ ರಾಜ್ಯ ಸರ್ಕಾರ ಅಂಕುಶ ಹಾಕದೇ ಇದ್ದರೆ ಬಿಜೆಪಿ ಕೈಕಟ್ಟಿ ಕೂರುವುದಿಲ್ಲ ಎಂದು ಬಿಜೆಪಿ #BJP ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #BYVijayendra ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಎಕ್ಸ್(ಟ್ವೀಟ್) ಮಾಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ #Congress ಸರ್ಕಾರ ನಿರಂಕುಶ ಪ್ರಭುತ್ವ ಮೆರೆಯುತ್ತಿದೆ. ಅಮಾಯಕರು, ರೈತ ಹೋರಾಟಗಾರರು ಹಾಗೂ ರಾಷ್ಟ್ರ ಭಕ್ತ ಕಾರ್ಯಕರ್ತರ ಮೇಲೆ ನಡೆಯುತ್ತಿದ್ದ ಪೋಲಿಸ್ #Police ದರ್ಪ, ದೌರ್ಜನ್ಯ ಇದೀಗ ವಕೀಲರತ್ತವೂ ತಿರುಗಿದೆ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ #Chikkamagaluru ಯುವ ವಕೀಲ ಪ್ರೀತಂ ಅವರ ಮೇಲೆ ನಡೆದಿರುವ ಪೋಲಿಸರ ಅಮಾನುಷ ಹಲ್ಲೆ ಅತ್ಯಂತ ಖಂಡನೀಯ. ಪೋಲಿಸರ ಎಲ್ಲೆ ಮೀರಿದ ಗೂಂಡಾ ವರ್ತನೆ ಗಮನಿಸಿದರೆ ಗೃಹ ಸಚಿವರು #HomeMinister ಇಲಾಖೆಯ ಮೇಲೆ ನಿಯಂತ್ರಣ ಕಳೆದುಕೊಂಡಿರುವಂತೆ ಕಾಣುತ್ತಿದೆ ಎಂದು ಕಿಡಿ ಕಾರಿದ್ದಾರೆ.
ವಕೀಲರ ಮೇಲೆ ನಡೆದಿರುವ ಹಲ್ಲೆ ಪ್ರಕರಣವೂ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ನಡೆದಿರುವ ಪೋಲಿಸ್ ದೌರ್ಜನ್ಯಗಳ ಕುರಿತು ಸರ್ಕಾರ ಈ ಕೂಡಲೇ ಗಂಭೀರ ಕ್ರಮ ತೆಗೆದುಕೊಂಡು ಪೋಲಿಸ್ ದಬ್ಬಾಳಿಕೆಗೆ ಅಂಕುಶ ಹಾಕದಿದ್ದರೆ ರಾಜ್ಯ ಬಿಜೆಪಿ ಕೈ ಕಟ್ಟಿ ಕೂರದು ಎಂದು ಎಚ್ಚರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post