No Result
View All Result
Henkel appoints Pradhyumna Ingle as Country President for India
English Articles

Henkel appoints Pradhyumna Ingle as Country President for India

by ಕಲ್ಪ ನ್ಯೂಸ್
June 26, 2026
0

Kalpa Media House  |  Bengaluru  | Henkel has appointed Pradhyumna Ingle as Country President for India, reinforcing the company's commitment...

Read moreDetails
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
  • Advertise With Us
  • Grievances
  • About Us
  • Contact Us
Friday, June 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅವಕಾಶಕ್ಕಾಗಿ ಕಾದಿರುವ ಭಾವಚಿತ್ರ ಕಲಾವಿದೆ ಪಾವನ ಬೈಲೂರು

ಯುಟ್ಯೂಬನ್ನೇ ತನ್ನ ಗುರುವೆಂದು ಪರಿಭಾವಿಸಿ ಕಲಾಸೇವೆ ಮಾಡುತ್ತಿರುವ ಯುವತಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 4, 2020
in Special Articles
0
ಅವಕಾಶಕ್ಕಾಗಿ ಕಾದಿರುವ ಭಾವಚಿತ್ರ ಕಲಾವಿದೆ ಪಾವನ ಬೈಲೂರು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಲ್ಲ ಒಂದು ಅಂತರ್ಗತವಾದ ವೈಶಿಷ್ಟ್ಯತೆ ಇದ್ದೇ ಇರುತ್ತದೆ. ಆ ವಿಶಿಷ್ಟತೆಯನ್ನು ಹಲವರು ಬಾಹ್ಯ ಜಗತ್ತಿಗೆ ತೋರ್ಪಡಿಸುವುದಿಲ್ಲ. ಸ್ವತಃ ಅವರುಗಳೇ ಅದರಲ್ಲಿ ವಿಶೇಷವನ್ನು ಕಂಡುಕೊಂಡಿರುವುದಿಲ್ಲ. ಮತ್ತೆ ಕೆಲವರು ಹೇಗಾದರೂ ಮಾಡಿ ಹೊರ ಜಗತ್ತಿಗೆ ತೆರೆದುಕೊಂಡರೂ ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡ ಪರಿಸ್ಥಿತಿ.

ಅಜ್ಞರು ಮತ್ತು ಅನಾಸಕ್ತ ಜನರಿಂದ ಪ್ರಚೋದನೆ ಮತ್ತು ಪ್ರಚಾರ ಎರಡೂ ದೊರೆಯುವುದಿಲ್ಲ. ಕಲೆಯ ಬೆಲೆಯನ್ನು ಅರಿಯದವರಿಂದಾಗಿ ಕಲೆಯ ಕೊಲೆಯಾಗುವುದನ್ನು ನಾವು ಸಮಾಜದಲ್ಲಿ ಕಾಣುತ್ತಿರುತ್ತವೆ. ಎಂದಾದರೊಂದು ದಿನ ಕಲೆಯ ನಿಜ ಬೆಲೆ ಬಲ್ಲ ತಜ್ಞರಿಂದಲೋ, ಕಲಾಪೋಷಕರಿಂದಲೋ ಪ್ರೋತ್ಸಾಹ, ಪ್ರಚೋದನೆ, ಪ್ರಚಾರ ದೊರೆತು ಮರೆಯಾಗಿರುವ ಕಲಾವಿದರು ಬೆಳಕಿಗೆ ಬರುವುದುಂಟು. ಈ ರೀತಿ ಬೆಳಕಿಗೆ ಬರಲು ಹಾತೊರೆಯುತ್ತಿರುವವರು ಭಾವಚಿತ್ರ ಕಲಾವಿದೆ ಪಾವನ ಬೈಲೂರು ಅವರು. ಕಲಿಯುವ ಕಿಂಚಿತ್ ಸೌಲಭ್ಯ ಪ್ರಾಪ್ತವಾದರೂ ಹುಡುಗರಿಗಿಂತ ಯಾವಾಗಲೂ ಹೆಣ್ಮಕ್ಕಳು ಎರಡೇ ಹೆಜ್ಜೆ ಮುಂದಿರುತ್ತಾರೆ.

ಪ್ರತಿಭೆ ಇದ್ದರೂ ಪ್ರಕಾಶಕ್ಕೆ ಬರಲಾಗದ ಪಾವನ ಉತ್ತಮ ಭಾವಚಿತ್ರ ಕಲಾವಿದೆ. ನೃತ್ಯದಲ್ಲೂ ಉತ್ತಮ ಅಭಿರುಚಿನ್ನು ಹೊಂದಿದ್ದಾರೆ. ಇವರ ಹುಟ್ಟೂರು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಬೈಲೂರು ಗ್ರಾಮ. ಬೈಲೂರು ಆಧುನಿಕ ಮೂಲ ಸೌಕರ್ಯಗಳಿಂದ ವಂಚಿತವಾದ ಒಂದು ಕುಗ್ರಾಮ. ಪಾವನ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಾದ ಬೈಲೂರಲ್ಲೇ ಮುಗಿಸಿ, ಪ್ರೌಢ ಶಿಕ್ಷಣವನ್ನು ಅಂಪಾರು ಹೈಸ್ಕೂಲಿನಿಂದ ಮುಗಿಸಿದ್ದಾರೆ. ಕುಂದಾಪುರದ ಪ್ರತಿಷ್ಠಿತ ಭಂಡಾರಕರ್ಸ್ ಕಾಲೇಜಿನಿಂದ ಸ್ನಾತಕ ಪದವಿಯನ್ನು ಪಡೆದು, ತೆಂಕನಿಡಿಯೂರು ಕಾಲೇಜಿನಿಂದ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಬಾಲ್ಯದಿಂದಲೇ ಚಿತ್ರಕಲೆಯಿಂದ ಆಕರ್ಷಿತರಾದ ಪಾವನ ಅವರಿಗೆ ಜನನಿ ತಾನೇ ಮೊದಲ ಗುರುವಾದವರು. ಚಿತ್ರಕಲೆಯ ’ಅ, ಆ, ಇ, ಈ’ ಯನ್ನು ತಾಯಿಯಿಂದ ಬರೆಯಿಸಿ, ತಿದ್ದಿಸಿಕೊಂಡ ಪಾವನ ನಂತರ ತಮ್ಮ ಆಸಕ್ತಿಯಿಂದ ಚಿತ್ರಕಲೆಯನ್ನು ವೃದ್ಧಿಸಿಕೊಂಡರು.

ಅನಂತರ ಪಾವನ ಒಂದು ವರ್ಷ ಉಡುಪಿಯ ಚಿತ್ರಕಲಾ ಸಂಸ್ಥೆಯಿಂದ ತರಬೇತಿ ಪಡೆದುಕೊಂಡರು. ಕಲಾ ಕಾಲೇಜಿನ ಹಿರಿಯ ವಿದ್ಯಾರ್ಥಿಯೊರ್ವರ ’ವ್ಯಕ್ತಿಚಿತ್ರ’ ರಚನಾ ಕೌಶಲ್ಯದಿಂದ ಪ್ರಭಾವಿತರಾದ ಪಾವನ ನಿಧಾನವಾಗಿ ವ್ಯಕ್ತಿಚಿತ್ರ ರಚನೆಯಲ್ಲಿ ತಮ್ಮ ರುಚಿಯನ್ನು ಕಂಡುಕೊಳ್ಳುವುದರೊಂದಿಗೆ ಪರಿಣತಿಯನ್ನು ಪಡೆದರು. ಸ್ತಿಮಿತ ಅವಧಿಯ ತರಬೇತಿಗಳಿಂದ ಹೆಚ್ಚಿದನ್ನು ಅಭ್ಯಾಸಿಸುವುದು ಕಷ್ಟ ಎಂದರಿತ ಇವರು ಏಕಲವ್ಯನಂತೆ ’ಯುಟ್ಯೂಬ್’ ನ್ನು ತನ್ನ ಗುರುವೆಂದು ಪರಿಭಾವಿಸಿ ಮುಂದಿನ ಹಂತದ ಕಲಿಕೆಯನ್ನು ಕಲಿತರು. ತಮ್ಮ ಊರು ಬೈಲೂರಿನಲ್ಲಿ ’ವಾಲ್ ಪೈಂಟ್’ ಬಿಡಿಸಿದ್ದಾರೆ. ಮದರ್ ತೆರೆಸಾ ಶಾಲೆ, ಶಂಕರನಾರಾಯಣ, ಟಿ.ಟಿ. ರೋಡ್ ಮುಂತಾದ ಕಡೆ ವಾಲ್ ಪೈಂಟಿನಲ್ಲಿ ಕೈ ಚಳಕ ತೋರಿಸಿದ್ದಾರೆ. ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ಇವರು ಸದವಕಾಶಗಳ ಬರವನ್ನು ಎದುರಿಸುತ್ತಿದ್ದಾರೆ. ಅವಕಾಶ ದೊರೆತರೆ ಲೈವ್ ಪೈಂಟಿಂಗ್ ಪ್ರದರ್ಶನ ನೀಡಬೇಕೆಂಬ ಮಹದಾಸೆ ಪಾವನ ಅವರದು. 75ಕ್ಕೂ ಹೆಚ್ಚು ವ್ಯಕ್ತಿ ಚಿತ್ರಗಳನ್ನು ಅವರು ಈಗಾಗಲೇ ರಚಿಸಿದ್ದಾರೆ. ಕಲಾ ಪೋಷಕರು, ಕಲಾಭಿಮಾನಿಗಳು ಪಾವನರಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ.

ಪಾವನ ಅವರ ಮೊದಲ ವ್ಯಕ್ತಿಚಿತ್ರ ಮದರ್ ತೆರೇಸಾ ನಂತರ ದೇಶದ ಪ್ರಧಾನಿ ಶ್ರೀಯುತ ನರೇಂದ್ರ ಮೋದಿಯವರದ್ದು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಓಡುವ ಯಂತ್ರವೆಂದೇ ಖ್ಯಾತಿ ಪಡೆದಿರುವ ಹುಸೇನ್ ಬೋಲ್ಟ್‌, ಮೋಹಕ ಚೆಲುವೆ ದೀಪಿಕಾ ಪಡುಕೋಣೆ, ರಚಿತಾ ರಾಮ್, ಐಂದ್ರಿತಾ ರಾಯ್, ರಾಧಿಕಾ ಪಂಡಿತ್, ದಿವಂಗತ ಇಂದಿರಾ ಗಾಂಧಿ, ಅಲ್ಲು ಅರ್ಜುನ್ ಮುಂತಾದ ಖ್ಯಾತನಾಮರ ಭಾವಚಿತ್ರಗಳನ್ನು ರಚಿಸಿದ್ದಾರೆ. ಸದ್ಯದಲ್ಲೇ ನೂರು ಭಾವಚಿತ್ರಗಳನ್ನು ಪೂರೈಸುವ ಇಚ್ಚೆ ಹೊಂದಿದ್ದಾರೆ.

ಎಂಎ ಮುಗಿಸಿರುವ ಪಾವನ ಅವರು ಸೂಕ್ತ ಉದ್ಯೋಗವನ್ನು ಅರಸುತ್ತಿದ್ದಾರೆ. ಬೈಲೂರು ಗ್ರಾಮ ನಿವಾಸಿ ಶ್ರೀಮತಿ ಗೀತಾ ಹಾಗೂ ಶ್ರೀ ಮಂಜಪ್ಪ ದಂಪತಿಗಳ ಮುದ್ದಿನ ತನುಜೆ ಪಾವನ ಅವರಿಗೆ ಆಸಕ್ತಿ ಇರುವ ಚಿತ್ರಕಲೆಯಲ್ಲಿ ವಿಪುಲವಾದ ಅವಕಾಶಗಳು ಪ್ರಾಪ್ತವಾಗಲಿ. ಅವರು ನೆಚ್ಚಿ ನಂಬಿ, ಪರಿಶ್ರಮದಿಂದ ಕಲಿತ ವ್ಯಕ್ತಿಚಿತ್ರ ಕಲೆಯಿಂದ ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ.


Get In Touch With Us info@kalpa.news Whatsapp: 9481252093

Tags: Artist_Pavana_BailurKannadaNewsWebsiteKundapuraLatestNewsKannadaPortrait ArtistUdupiಉಡುಪಿಕಲಾವಿದೆ ಪಾವನ ಬೈಲೂರುಕುಂದಾಪುರಭಾವಚಿತ್ರ ಕಲಾವಿದೆ
Share256Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ನಡೆ ಪ್ರಶ್ನಾರ್ಹ: ಡಾ. ನಾಗೇಂದ್ರ ಎಫ್. ಹೊನ್ನಳ್ಳಿ

Next Post

ಗುರುದತ್ತ ಬಡಾವಣೆಯಲ್ಲಿ ಸ್ವಯಂ ಘೋಷಿತ ಸೀಲ್ ಡೌನ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗುರುದತ್ತ ಬಡಾವಣೆಯಲ್ಲಿ ಸ್ವಯಂ ಘೋಷಿತ ಸೀಲ್ ಡೌನ್

Leave a Reply Cancel reply

Your email address will not be published. Required fields are marked *

No Result
View All Result
Henkel appoints Pradhyumna Ingle as Country President for India
English Articles

Henkel appoints Pradhyumna Ingle as Country President for India

by ಕಲ್ಪ ನ್ಯೂಸ್
June 26, 2026
0

Kalpa Media House  |  Bengaluru  | Henkel has appointed Pradhyumna Ingle as Country President for India, reinforcing the company's commitment...

Read moreDetails
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL