ಶಿವಮೊಗ್ಗ: ರಾಜ್ಯದ ನಿಖರ ಜ್ಯೋತಿಷಿ ಎಂದೇ ಹೆಸರುವಾಸಿಯಾಗಿರುವ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು ಅ.20ರಂದು ನಗರಕ್ಕೆ ಭೇಟಿ ನೀಡಲಿದ್ದು, ‘ಜ್ಯೋತಿಷ್ಯಾಧಾರಿತ ದೇವತಾ ಸ್ವರೂಪದ ಚಿಂತನೆ’ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.
ಸಂಸ್ಕಾರ ಪ್ರತಿಷ್ಠಾನ ಹಾಗೂ ಅರ್ಚಕ ವೃಂದದ ಆಶ್ರಯದಲ್ಲಿ ರವೀಂದ್ರ ನಗರ ಪ್ರಸನ್ನ ಗಣಪತಿ ದೇವಾಲಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು ತಮ್ಮ ವಿಚಾರವನ್ನು ಮಂಡಿಸಲಿದ್ದಾರೆ.
ಅಂದು ಸಂಜೆ 5.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಸಹಕಾರವಿದೆ.
ಕಾರ್ಯಕ್ರಮದ ಕುರಿತಾಗಿನ ಹೆಚ್ಚಿನ ಮಾಹಿತಿಗಾಗಿ ಶಬರೀಶ್ ಕಣ್ಣನ್(9964072793), ಎಸ್.ಆರ್. ಅನಿರುದ್ಧ ವಸಿಷ್ಠ(9008761663)ಗೆ ಸಂಪರ್ಕಿಸಬಹುದು.
ಶ್ರೀ ಪ್ರಕಾಶ್ ಅಮ್ಮಣ್ಣಾಯ ಅವರ ಕುರಿತು:
ಪ್ರಸ್ತುತ ಉಡುಪಿ ಜಿಲ್ಲೆ ಕಾಪು ಎಂಬಲ್ಲಿ ವಾಸವಿರುವ ಶ್ರೀ ಪ್ರಕಾಶ್ ಅಮ್ಮಣ್ಣಾಯ ಅವರು ಮೂಲತಃ ಸುಳ್ಯತಾಲೂಕಿನ ಕೇನ್ಯ ಗ್ರಾಮದ ಪ್ರತಿಷ್ಠಿತ ‘ಅಮ್ಮಣ್ಣಾಯ’ ವಂಶಸ್ತರು.
ಬಾಲ್ಯದಿಂದಲೇ ಖಗೋಲ ಆಸಕ್ತಿ ಹೊಂದಿದ್ದ ಇವರು, ಮುಂಬೈನಲ್ಲಿ ನೆಹರು ಪ್ಲಾನಿಟೋರಿಯಂನ ಮುಖ್ಯಸ್ಥರ ಸಂಗಡ ಗ್ರಹ ಸ್ಫುಟಾದಿಗಳನ್ನು ಕಲಿತರು. ಇಂಜಿನೀಯರ್(ಎಎಂಐಇ) ಪದವಿ ಪಡೆದು ಮುಂಬೈನಲ್ಲಿ ಉದ್ಯೋಗ ಮಾಡಿ, ಆನಂತರ ಅನಿವಾರ್ಯ ಕಾರಣಗಳಿಂದ ಊರಲ್ಲೇ ನೆಲೆಸಿದರು. ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದ ಕೆಲವೇ ಕೆಲವು ನಿಖರ ಜ್ಯೋತಿಷಿಗಳಲ್ಲಿ ಒಬ್ಬರಾಗಿರುವ ಅಮ್ಮಣ್ಣಾಯ ಅವರು ಈವರೆಗೂ ನುಡಿದ ಹಲವು ವಿಚಾರಗಳ ಸತ್ಯವಾಗಿವೆ.
2014ರ ಲೋಕಸಭಾ ಚುನಾವಣೆಗೂ ಮುನ್ನ ಅಂದರೆ 2013 ರಲ್ಲೇ ಭಾರತದ ಪ್ರಧಾನಿಯಾಗಿ ಮೋದಿಯವರೇ ಆಯ್ಕೆಯಾಗುತ್ತಾರೆ ಎಂದಿದ್ದರು. ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನ ಗಳಿಸುವ ಬಗ್ಗೆ, ಗುಜರಾತ್ ಚುನಾವಣಾ ಭವಿಷ್ಯ, ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಗೆಲುವು ನಿಶ್ಚಿತ ಎಂಬುದನ್ನು ಅಲ್ಲಿನ ಆಯ್ಕೆಗೂ ವರ್ಷಕ್ಕೂ ಮುನ್ನವೇ ನುಡಿದಿದ್ದ ಇವರು, ಕರ್ನಾಟಕದ ಅತಂತ್ರ ಸರಕಾರದ ಭವಿಷ್ಯ ನಿಶ್ಚಿತ ಎಂಬುದನ್ನು 2016ರಲ್ಲೇ ಹೇಳುವ ಜೊತೆಯಲ್ಲಿ ಇತ್ಯಾದಿ ಹತ್ತು ಹಲವು ಭವಿಷ್ಯಗಳನ್ನು ನಿಖರವಾಗಿ ತಿಳಿಸಿದ್ದಾರೆ.
ಈವರೆಗೆ ಇವರು ನುಡಿದ ಭವಿಷ್ಯ ಸುಳ್ಳಾಗಲಿಲ್ಲ. ಮಹಾರಾಷ್ಟ್ರ ಚುನಾವಣೆಯಲ್ಲಿ ದೇವೇಂದ್ರ ಫಡ್ನವಿಸ್ ಗೆಲ್ಲುವುದು ಮಾತ್ರವಲ್ಲ, ಮುಖ್ಯಮಂತ್ರಿಯಾಗುತ್ತಾರೆ ಎಂದೂ ಟ್ವೀಟ್ ಮಾಡಿದ್ದರು.
ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳಲ್ಲಿ ಇವರ ನೂರಾರು ಲೇಖನಗಳು ಪ್ರಕಟವಾಗುತ್ತಿತ್ತು. ಪ್ರಸ್ತುತ ಟಿವಿ ಮಾಧ್ಯಮ ಸಂವಾದ, ವಿಶ್ಲೇಷಣೆಗಳಲ್ಲೂ ಧಾರ್ಮಿಕ, ಜ್ಯೋತಿಷ್ಯ ಸಂವಾದಗಳಲ್ಲಿ ಭಾಗವಹಿಸುತ್ತಾರೆ.
ಇವರ ಸಣ್ಣ ಸಂಸಾರ ಕಾಪುವಿನಲ್ಲಿ ನೆಲೆಸಿದೆ. ಇವರ ಶ್ರೀಮತಿಯವರು ಪದವಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಎರಡು ಹೆಣ್ಣು ಮಕ್ಕಳಲ್ಲಿ ಒಬ್ಬರು ಈಗಾಗಲೇ MA honour ಮಾಡಿ ಮುಗಿಸಿದ್ದಾರೆ. ಸಣ್ಣವಳು ಸೈಕಾಲಾಜಿ ಮತ್ತು ಕ್ರಿಮಿನಾಲಜಿ ಕಲಿಯುತ್ತಿದ್ದಾಳೆ.
ಈಗಲೂ ನಾನೊಬ್ಬ ಇವರು ಜ್ಯೋತಿಷ್ಯ ವಿದ್ಯಾರ್ಥಿ ಎಂದೇ ಹೇಳಿಕೊಳ್ಳುವ ಅಮ್ಮಣ್ಣಾಯ, ಜ್ಯೋತಿಷ್ಯವು ಸಾಗರ. ನಾನು ಕೇವಲ ಒಂದು ಬಿಂದು ನೀರು ಕುಡಿದು ರುಚಿಯನ್ನು ತಿಳಿಸುವಲ್ಲಿಗೇ ಸೀಮಿತವಾಗಿ, ಸಾಗರದ ಆಳವನ್ನು ತಿಳಿಯಲು ಸಾಧ್ಯವಿಲ್ಲ ಎಂಬ ಮಾತು ಇವರದ್ದಾಗಿದೆ.
Discussion about this post