ಕಲ್ಪ ಮೀಡಿಯಾ ಹೌಸ್ | ಪ್ರಯಾಗರಾಜ್ |
ಇಡೀ ವಿಶ್ವದ ಗಮನ ಸೆಳೆದಿರುವ 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ #Mahakumbhamela ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರು ಇಂದು ಪುಣ್ಯ ಸ್ನಾನ ಮಾಡಿದ್ದಾರೆ.
ಇಂದು ಉತ್ತರ ಪ್ರದೇಶದ ಪ್ರಯಾಗರಾಜ್’ಗೆ #Prayagraj ಭೇಟಿ ನೀಡಿದ ಪ್ರಧಾನಿಯವರು ಬೆಳಗ್ಗೆ 11.30ರ ವೇಳೆಗೆ ಬೋಟ್ ಮೂಲಕ ಸಂಚರಿಸಿದರು.
ಬೋಟ್ ಮೂಲಕ ತ್ರಿವೇಣಿ ಸಂಗಮ ಘಾಟ್’ಗೆ #Triveni Sangam Ghat ತೆರಳಿದ ಪ್ರಧಾನಿಯವರು ಪುಣ್ಯಸ್ನಾನ ಮಾಡಿದರು. ಈ ವೇಳೆ ಕಡುನೀಲಿ ಹಾಗೂ ಕೇಸರಿ ವಸ್ತ್ರದೊಂದಿಗೆ ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದರು.
Also read: ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ ಸಾಧ್ಯತೆ | ಸಿಎಂ ಸಿದ್ದರಾಮಯ್ಯ ಸಿದ್ಧತೆ
ರುದ್ರಾಕ್ಷಿ ಮಾಲೆಯನ್ನು #Rudrakshi Mala ಹಿಡಿದು ಸೂರ್ಯದೇವ ಹಾಗೂ ಗಂಗಾ ಮಾತೆಗೆ ನಮಿಸಿದರು. ಬಳಿಕ ತಟದಲ್ಲಿ ನಿಂತು ಗಂಗಾ ಮಾತೆಗೆ #Ganga Matha ವಿಶೇಷ ಪೂಜೆ ಸಲ್ಲಿಸಿ, ದೇಶದ ಒಳಿತಾಗಿ ಪ್ರಾರ್ಥಿಸಿದ್ದಾರೆ.
ಪುಣ್ಯ ಸ್ನಾನಕ್ಕೆ ಇಂದೇ ಆಯ್ಕೆ ಯಾಕೆ?
ಇಂದು ಹಿಂದೂಗಳ ಪವಿತ್ರ ಆಚರಣೆ ರಥಸಪ್ತಮಿಯಾಗಿದೆ. #Ratha Sapthami ದಿನವನ್ನು ದಾನ – ಧರ್ಮ ಮಾಡುವುದಕ್ಕೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಇಂದಿನ ದಿನ ಮಾಡುವ ದಾನ ಧರ್ಮ ಮಾಡಿದರೆ ಪಾಪ ನಾಶದ ಜೊತೆಯಲ್ಲಿ ಪುಣ್ಯ ಸಂಪಾದನೆ ಅಧಿಕವಾಗುತ್ತದೆ ಎಂಬ ನಂಬಿಕೆಯಿದೆ.
ಈ ದಿನ ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವ ಸಂಪ್ರದಾಯವಿದೆ. ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ದೇಹದ ಎಲ್ಲಾ ರೋಗಗಳು, ವಿಶೇಷವಾಗಿ ಚರ್ಮಕ್ಕೆ ಸಂಬಂಧಿಸಿದಂತಹ ರೋಗಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ ಎಂದು ನಂಬಲಾಗಿದೆ.
ಇಂತಹ ಪುಣ್ಯದ ದಿನವಾದ ಇಂದು ದೇಶದ ಜನರ ಒಳಿತಿಗಾಗಿ ಮೋದಿ ಪುಣ್ಯ ಸ್ನಾನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post