ಕಲ್ಪ ಮೀಡಿಯಾ ಹೌಸ್ | ಪ್ರಯಾಗರಾಜ |
ಮಹಾಕುಂಭ ಮೇಳದಲ್ಲಿ #Mahakumbhamela ಧಾರ್ಮಿಕ ಆಚರಣೆಗಳು, ಪರಂಪರೆಗಳು, ವಿಧಿಗಳು, ಪೂಜೆಗಳು, ಗಂಗಾಜಲ, ತೀರ್ಥಕ್ಷೇತ್ರ ಮತ್ತು ಸಂಗೀತ-ನೃತ್ಯಗಳ ಹಿಂದಿರುವ ವಿಜ್ಞಾನವನ್ನು ತೋರಿಸಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ (MAV) ವತಿಯಿಂದ ವಿಶಿಷ್ಟ ಪ್ರದರ್ಶನವನ್ನು ಪ್ರಯಾಗರಾಜದಲ್ಲಿ ಆಯೋಜಿಸಲಾಗಿದೆ. ಈ ವಿಶೇಷ ಮೇಳದಲ್ಲಿ ವಿವಿಧ ಧಾರ್ಮಿಕ ವಿಧಿಗಳ ಕುರಿತು ವಿಜ್ಞಾನಾಧಾರಿತ ಸಂಶೋಧನೆಗಳನ್ನು ಕೂಡಾ MAV ಮೂಲಕ ಕೈಗೊಳ್ಳಲಾಗುತ್ತಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿ ಅಧ್ಯಾತ್ಮ ಮತ್ತು ವಿಜ್ಞಾನಗಳ ಅನುಪಮ ಸಂಗಮವನ್ನು ಭಕ್ತರು ಅನುಭವಿಸಲು ಇದು ಒಂದು ಅಪರೂಪದ ಅವಕಾಶ. ಈ ಮಾಹಿತಿಯನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ ಕೃಷ್ಣಾ ಮಂಡವ, ಕು. ಜ್ಯೋತ್ಸ್ನಾ ಗಾಂಧಿ ಮತ್ತು ಸುಜಾತಾ ಠಕ್ಕರ್ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.
ಪ್ರದರ್ಶನದ ವಿವರಗಳು :
ಕೈಲಾಸಪುರಿ ಮಾರ್ಗ, ಕಲಾ ಕುಂಭ ಎದುರು, ಸೆಕ್ಟರ್ 7, ಪ್ರಯಾಗರಾಜ ಕುಂಭಮೇಳದಲ್ಲಿ ಈ ಪ್ರದರ್ಶನವನ್ನು 12 ಜನವರಿ 2025 ರಿಂದ 15 ಫೆಬ್ರವರಿ 2025ರವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ಸಾರ್ವಜನಿಕರಿಗಾಗಿ ತೆರೆಯಲಾಗಿದೆ. ಈ ಸಂಶೋಧನೆಗಳು Aura ಮತ್ತು Energy Scanners ಸೇರಿದಂತೆ ವಿವಿಧ ವೈಜ್ಞಾನಿಕ ಸಾಧನಗಳ ಸಹಾಯದಿಂದ ನಡೆದಿವೆ. ಪ್ರಾಚೀನ ಭಾರತೀಯ ತತ್ತ್ವಶಾಸ್ತ್ರವನ್ನು ಜಾಗತಿಕ ವೇದಿಕೆಗೆ ತಲುಪಿಸುವ ಮತ್ತು ಜಾಗತಿಕ ಚೇತನದ ಉನ್ನತಿಯನ್ನು ಸಾಧಿಸುವುದು MAVನ ಮುಖ್ಯ ಉದ್ದೇಶವಾಗಿದೆ.

Also read: ಬಜೆಟ್’ಗೂ ಮುನ್ನವೇ ಬಿಯರ್ ಬೆಲೆ ಹೆಚ್ಚಿಸಿದ ರಾಜ್ಯ ಸರ್ಕಾರ
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ದೃಷ್ಟಿಕೋನ : ಸುಜಾತಾ ಠಕ್ಕರ್ ಮಾತನಾಡಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಸ್ಥಾಪಿಸಿದ್ದಾರೆ. ಇದರ ಧ್ಯೇಯವು ಋಗ್ವೇದದ ಪ್ರಸಿದ್ಧ ಶ್ಲೋಕ ‘ಕೃಣ್ವಂತೋ ವಿಶ್ವಮಾರ್ಯಮ್’ ನಿಂದ ಪ್ರೇರಿತವಾಗಿದೆ. ಸನಾತನ ವೈದಿಕ ಧರ್ಮ ಮತ್ತು ಭಾರತೀಯ ಜ್ಞಾನ ಪದ್ಧತಿಯನ್ನು ಹರಡಲು ಮತ್ತು ಜೀವನವನ್ನು ಶ್ರೇಷ್ಠಗೊಳಿಸಲು MAV ಯತ್ನಿಸುತ್ತಿದೆ ಎಂದರು.

MAVನ ಪ್ರಸ್ತುತ ಸಂಶೋಧನೆಯ ಪ್ರಮುಖ ವಿಷಯಗಳು:
- ಅಮೃತ ಸ್ನಾನದ ಪರಿಣಾಮಗಳು : ಸ್ನಾನಕ್ಕಿಂತ ಮುಂಚೆ ಮತ್ತು ನಂತರದ ಭಕ್ತರ ಆಧ್ಯಾತ್ಮಿಕ ಸ್ಥಿತಿಯ ಅಧ್ಯಯನ.
- ನೀರು, ಮಣ್ಣು ಮತ್ತು ಗಾಳಿಯ ಪರೀಕ್ಷೆ : ಪುಷ್ಯ ಪೂರ್ಣಿಮೆಯಿಂದ ಮಹಾಶಿವರಾತ್ರಿವರೆಗೆ ಮೇಳದ ಅವಧಿಯಲ್ಲಿ.
- ಕಲ್ಪವಾಸದ ಮಹತ್ವ : ಭಕ್ತರು ಮತ್ತು ಪರಿಸರದ ಮೇಲೆ ಆಗುವ ಪರಿಣಾಮಗಳ ವಿಶ್ಲೇಷಣೆ.
- ಅಕ್ಷಯವೃಕ್ಷದ ಅಧ್ಯಯನ : ಆಧ್ಯಾತ್ಮಿಕ ಶಕ್ತಿಗಳನ್ನು ವಿಶ್ಲೇಷಿಸುವ ಸಂಶೋಧನೆ.
ಅಧ್ಯಾತ್ಮ ಮತ್ತು ವಿಜ್ಞಾನದ ಸಂಗಮ : ಕು. ಜ್ಯೋತ್ಸ್ನಾ ಗಾಂಧಿ ಮಾತನಾಡಿ, MAV ಹೊಸ ವೈಜ್ಞಾನಿಕ ಸಾಧನಗಳ ಮೂಲಕ ಗಂಗಾಜಲ ಮತ್ತು ಪವಿತ್ರ ಸ್ಥಳಗಳ ಆಧ್ಯಾತ್ಮಿಕ ಪರಿಣಾಮಗಳನ್ನು ಅಧ್ಯಯನ ಮಾಡಿದೆ. ಮಣಿಕರ್ಣಿಕಾ ಘಾಟಿಯ ನೀರು ಅತ್ಯಂತ ಶುದ್ಧವಾಗಿರುವುದಾಗಿ ಕಂಡುಬಂದಿದೆ. ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ 200% ಸಕಾರಾತ್ಮಕ ಶಕ್ತಿಯ ವೃದ್ಧಿ ದಾಖಲಾಗಿದೆ.
MAVನ ಅಂತರರಾಷ್ಟ್ರೀಯ ಕೊಡುಗೆಗಳು : MAV 14 ದೇಶಗಳಲ್ಲಿ 120ಕ್ಕೂ ಹೆಚ್ಚು ಸಭೆಗಳಲ್ಲಿ ತನ್ನ ಸಂಶೋಧನೆಗಳನ್ನು ಪ್ರದರ್ಶಿಸಿದೆ ಮತ್ತು ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಭಾರತದ G20 ಅಧ್ಯಕ್ಷತೆಯ ಸಂದರ್ಭದಲ್ಲಿ, MAV ಗೋವಾದಲ್ಲಿ ನಡೆದ C20 ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿತ್ತು.
ಹೊಸ ಪಠ್ಯಕ್ರಮ : ಭಾರತೀಯ ಜ್ಞಾನ ಪದ್ಧತಿ ಮತ್ತು ರಾಷ್ಟ್ರ ಶಿಕ್ಷಣ ನೀತಿಗನುಸಾರ MAV ಹೊಸ ಪಠ್ಯಕ್ರಮವನ್ನು ಪರಿಚಯಿಸಿದೆ. ಹೆಚ್ಚಿನ ಮಾಹಿತಿಗಾಗಿ info@spiritual.university ಗೆ ಇಮೇಲ್ ಅಥವಾ www.spiritual.university ಗೆ ಭೇಟಿ ನೀಡಲು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post