ಒಂದು ಮಧ್ಯಾಹ್ನ ಒಬ್ಬ ಕೊರಿಯನ್ ಯುವತಿ ಕೊರಿಯಾದ ನಗರವೊಂದರಲ್ಲಿ ನಡೆದು ತನ್ನ ಮನೆಯೆಡೆಗೆ ಹೆಜ್ಜೆ ಹಾಕುತ್ತಿರುತ್ತಾಳೆ. ತನ್ನ ಮನೆಯಿಂದ ಕೆಲವೇ ಅಡಿಗಳಷ್ಟು ದೂರವಿದ್ದಾಗ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ನೋಡಿ ಗಾಬರಿಯಾಗುತ್ತಾಳೆ. ಏಕೆಂದರೆ ತಾನಾವುದೋ ಕಾನೂನನ್ನು ಮುರಿದಿರುವುದು ಗೊತ್ತಾಗುತ್ತದೆ. ಕೂಡಲೇ ಆಕೆ ಓಡಲು ಶುರುಮಾಡುತ್ತಾಳೆ ಹಾಗೂ ಈ ವೇಳೆ ಬಿದ್ದು ತನ್ನ ಕಾಲು ಮೂಳೆ ಮುರಿದುಕೊಳ್ಳುತ್ತಾಳೆ. ಆದರೂ ಛಲ ಬಿಡದೆ ಕಷ್ಟಪಟ್ಟು ಓಡಿ ಹೇಗೋ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾಳೆ. ಈಗ ಆಕೆ ದಕ್ಷಿಣ ಕೊರಿಯಾದಲ್ಲಿ ಬದುಕು ಕಟ್ಟಿಕೊಂಡಿದ್ದಾಳೆ. ಆಕೆ ಪೊಲೀಸರನ್ನು ಕಂಡು ಓಡಿದ್ಯಾಕೆ, ಏನು ತಪ್ಪು ಮಾಡಿದ್ದಾಳೆ ಅಂತ ನೋಡಿದರೆ, ಆಕೆ ಮಾಡಿದ ತಪ್ಪು ಪ್ಯಾಂಟ್ ಧರಿಸಿ ನಗರದ ರಸ್ತೆಗಳಲ್ಲಿ ಓಡಾಡಿದ್ದು. ಹೌದು ಉ.ಕೊರಿಯಾ ಹೆಂಗಸರು ಪ್ಯಾಂಟ್ ಧರಿಸುವುದನ್ನು ನಿಷೇಧಿಸಿದೆ.
ಇನ್ನು ಜೀನ್‌ಸ್ ಪ್ಯಾಂಟ್ ಧರಿಸು ವುದು ಟೈಂ ಬಾಂಬ್ ಕಟ್ಟಿಕೊಂಡತೆಯೇ ಸೈ. ಜೀನ್‌ಸ್ ಪ್ಯಾಂಟ್ ಅಮೆರಿಕಾದ ಸಾಮ್ಯಾಜ್ಯಶಾಹಿಯ ಸಂಕೇತ ಎಂದು ಪರಿಗಣಿಸಿ ಜೀನ್‌ಸ್ ಪ್ಯಾಂಟನ್ನು ನಿಷೇಧಿಸಿದೆ. ಏಕೆಂದರೆ, ಕೊರಿಯಾ ಯುದ್ಧ ನಡೆದಲ್ಲಿಂದ ಇಲ್ಲಿಯವರೆಗೂ ದಕ್ಷಿಣ ಕೊರಿಯಾವನ್ನು ವಶಪಡಿಸಿ ಕೊಳ್ಳಬೇಕೆಂಬ ಉತ್ತರ ಕೊರಿಯಾದ ಮಹಂತ್ವಾಕಾಂಕ್ಷೆಗೆ ಅಡ್ಡವಾಗಿ ನಿಂತಿರುವುದು ಇದೇ ಅಮೆರಿಕಾ.
ಈ ಹಿಂದಿನ ಸರ್ವಾಧಿಕಾರಿಯ ಕಾಲದಲ್ಲಿ ಕೇಶವಿನ್ಯಾಸಕ್ಕೂ ಒಂದು ಕಾನೂನಿತ್ತು. ಪುರುಷರಿಗೆ 10 ಮತ್ತು ಮಹಿಳೆಯರಿಗೆ 18 ಕೇಶವಿನ್ಯಾಸಗಳ ಆಯ್ಕೆ ನೀಡಲಾಗಿತ್ತು. ವಿವಾಹಿತ ಮಹಿಳೆಯರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸುವಂತೆ ಆದೇಶ ಮಾಡಲಾಗಿತ್ತು. ಪುರುಷರು ತಲೆಗೂದಲನ್ನು 5 ಸೆಮೀಗಿಂತ ಹೆಚ್ಚು ಉದ್ದ ಬಿಡುವಂತಿಲ್ಲ ಮತ್ತು ಹಿರಿಯ ನಾಗರಿಕರು 7 ಸೆಮೀವರೆಗೂ ತಲೆಗೂದಲನ್ನು ಬಿಡಲು ಅವಕಾಶವಿತ್ತು. 2012ರಲ್ಲಿ ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬಂದ ನಂತರ ತನ್ನ ವಿಚಿತ್ರ ಕೇಶವಿನ್ಯಾಸ ಸಮಾಜವಾದದ ಸಂಕೇತ. ಹಾಗಾಗಿ, ಎಲ್ಲರೂ ತನ್ನ ರೀತಿಯೇ ಕೇಶವಿನ್ಯಾಸ ಮಾಡಿಸಿಕೊಳ್ಳಬೇಕು. ಹಾಗೂ ಕೂದಲಿನ ಅಳತೆ 2 ಸೆಮೀ ಗಿಂತ ಹೆಚ್ಚಿರುವಂತಿಲ್ಲ ಹಾಗೂ ಮಹಿಳೆಯರು ಕಿಮ್ ಜಾಂಗ್ ಉನ್‌ನ ಪತ್ನಿ ‘ರೀ-ಸೋಲ್-ಜೂ’ಳ ಕೇಶವಿನ್ಯಾಸವನ್ನು ಅನುಸರಿಸಬೇಕೆಂದು ಆದೇಶ ಮಾಡಿದ್ದಾನೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ ಎಂಬುದೇ ಸಮಾಧಾನದ ಸಂಗತಿ.
Discussion about this post