ಕಿಮ್ ಮನೆತನದ ಸರ್ವಾಧಿಕಾರಿಗಳು ಕೇವಲ ಕಠಿಣ-ವಿಚಿತ್ರ ಕಾನೂನುಗಳನ್ನು ಹೇರುವುದು ಮಾತ್ರವಲ್ಲದೆ, ಕಾನೂನು ಮೀರುವುದನ್ನು ಶಿಕ್ಷಿಸುವ ಪರಿಯೂ ವಿಚಿತ್ರ, ಕ್ರೂರ, ಅಮಾನವೀಯ, ಪೈಶಾಚಿಕ ಎನ್ನಲು ಪದಗಳೇ ಸಾಲದು. 2012ರಲ್ಲಿ ಅಧಿಕಾರಕ್ಕೇರಿದ ಕಿಮ್ ಜಾಂಗ್ ಉನ್ ಪೈಶಾಚಿಕತೆಯಲ್ಲಿ ತಂದೆ ತಾತನನ್ನು ಮೀರಿಸುತ್ತಾನೆ. ಅಧಿಕಾರಕ್ಕೇರಿದಂದಿನಿಂದಲೂ ಅಭದ್ರತೆಯ ಭಾವದಿಂದಲೋ, ಅಧಿಕಾರದ ಅಹಮ್ಮಿನಿಂದಲೂ ಅಥವಾ ತನ್ನ ವಿರುದ್ಧ ಮಾತಾಡುವವರು, ತನಗೆ ಅವಮಾನ ಮಾಡುವವರಿಗೆ ಏನಾಗುತ್ತದೆ ಎಂದು ತೋರಿಸುವ ಹಠದಿಂದಲೋ ಮಾಡುತ್ತಿರುವ ಪೈಶಾಚಿಕ ರೀತಿಯ ಕೊಲೆಗಳಿಗೆ ಲೆಕ್ಕವಿಲ್ಲದಂತಾಗಿದೆ.
ಈತ ಜನರನ್ನು ಶಿಕ್ಷಿಸುವ ವಿಧಾನ ಕೇಳಿದರೆ ಎಂತಹವರಿಗೂ ಮೈ ಜುಮ್ಮೆನ್ನುತ್ತದೆ. ಬದುಕಿದ್ದು ಜೈಲು (Lobour camp) ಪಾಲಾಗುವವರದು ಒಂಥರಾ ನರಕದ ಜೀವ ನವಾದರೆ, ಮರಣ ದಂಡನೆಗೊಳಗಾಗು ವರದ್ದೆ ಪುಣ್ಯ, ಸಾವನ್ನು ದಾಟಿ, ಜೈಲಿನ ನರಕದಿಂದ ಪಾರಾಗ ಬಹುದು. 2012ರಲ್ಲಿ ಕಿಮ್ ಜಾಂಗ್ -ಇಲ್ ಮರಣಾನಂತರ ಅಧಿಕಾರಕ್ಕೆ ಬಂದ ಕಿಮ್ ಜಾಂಗ್-ಉನ್ ತನ್ನ ಮಿಲಿಟರಿಯ ಪ್ರಮುಖರನ್ನು ಅನುಮಾನಿಸುತ್ತ ಅವರನ್ನೇ ಗುರಿಯಾಗಿಸಿಕೊಂಡು ಒಬ್ಬೊಬ್ಬರನ್ನು ಚಿತ್ರ ವಿಚಿತ್ರವಾಗಿ ಹತ್ಯೆ ಮಾಡುತ್ತ ಮೃಗವನ್ನೇ ನಾಚಿಸಿದ್ದಾನೆ. ಕಾಡುಮೃಗಗಳು ತಮ್ಮ ಹಸಿವು ನೀಗಿಸಿಕೊಳ್ಳುವುದಕ್ಕಾಗಿ ತಮ್ಮ ಆತ್ಮರಕ್ಷಣೆಗಾಗಿ ದಾಳಿ ಮಾಡಿ ಮತ್ತೊಂದು ಪ್ರಾಣಿಯನ್ನು ಕೊಲ್ಲುತ್ತದೆ. ನಮ್ಮ ದೇಶದಲ್ಲಿ ಕಾಣಸಿಗುವ ಸಾಮಾನ್ಯ ದರೋಡೆಕೋರರು, ಕೊಲೆಗಡುಕರು ಹಣದಾಸೆಗಾಗಿ, ಹೆಸರಿನ ಆಸೆಗಾಗಿ ಕೊಲೆ ಮಾಡುತ್ತಾರೆ. ಭಯೋತ್ಪಾದಕರು ತಮ್ಮ ಧರ್ಮದ ಮೇಲಿನ ಅಂಧಾಭಿಮಾನದಿಂದ, ಧರ್ಮಗ್ರಂಥಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅಮಾಯಕರ ಮೇಲೆ ದಾಳಿ ಮಾಡುತ್ತಾರೆ. ಅಂದರೆ ಈ ಎಲ್ಲದಕ್ಕೂ ಕಾರಣಗಳಿವೆ.
Discussion about this post