ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ಪ್ರತಿಷ್ಠಿತ ಜೈನ್ ವಿಶ್ವವಿದ್ಯಾಲಯಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ 2023 #RashtriyaKhelProtsahanPuruskar ದೊರೆತಿದ್ದು, ರಾಷ್ಟ್ರಪತಿಗಳಿಂದ ಪ್ರದಾನಗೊಂಡಿದೆ.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ಉದಯೋನ್ಮುಖ ಹಾಗೂ ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ವಿಭಾಗದಲ್ಲಿ ಜೈನ್ ವಿಶ್ವವಿದ್ಯಾಲಯಕ್ಕೆ #JainUniversity ಈ ಪ್ರತಿಷ್ಠಿತ ಪುರಸ್ಕಾರವನ್ನು ನೀಡಿದೆ.
ಆರ್’ಕೆಪಿಪಿ ದೇಶದಲ್ಲಿ ಕ್ರೀಡೆಯ ಪ್ರಚಾರ ಮತ್ತು ಅಭಿವೃದ್ಧಿಗಾಗಿ ಸಂಸ್ಥೆಗಳಿಗೆ ನೀಡಲಾಗುವ ಅತ್ಯುನ್ನತ ಕ್ರೀಡಾ ಗೌರವಗಳಲ್ಲಿ ಒಂದಾಗಿದೆ.
ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಜೈನ್ ವಿಶ್ವವಿದ್ಯಾಲಯದ ಗೌರವಾನ್ವಿತ ಅಧ್ಯಕ್ಷರಾದ ಡಾ.ಚೈನ್’ರಾಜ್ ರಾಯ್’ಚಂದ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು #DroupadiMurmu ಅವರಿಂದ ಈ ಪ್ರತಿಷ್ಠಿತ ಪುರಸ್ಕಾರವನ್ನು ಸ್ವೀಕರಿಸಿದ್ದಾರೆ.
ಈ ಕುರಿತಂತೆ ರಾಷ್ಟ್ರಪತಿಗಳ ಅಧಿಕೃತ ಟ್ವಿಟರ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜೈನ್ ವಿಶ್ವವಿದ್ಯಾಲಯವು ಕಳೆದ 32 ವರ್ಷಗಳಿಂದ ವೈಯಕ್ತಿಕ ಶೈಕ್ಷಣಿಕ ತರಬೇತಿ, ಶುಲ್ಕ ವಿನಾಯ್ತಿ, ತರಬೇತಿ ಸೌಲಭ್ಯಗಳು ಕಲ್ಪಿಸುತ್ತಿದೆ. ಉಚಿತ ವಸತಿ ಪ್ರವೇಶವನ್ನೂ ಸಹ ಒದಗಿಸುವ ಮೂಲಕ 100 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಬೆಂಬಲಿಸಿದೆ. ಈವರೆಗೂ ವಿಶ್ವವಿದ್ಯಾನಿಲಯವು 10 ಒಲಿಂಪಿಯನ್’ಗಳನ್ನು ಜೈನ್ ವಿಶ್ವವಿದ್ಯಾಲಯ ಹೊಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post