ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿ, ಸಂಪೂರ್ಣ ಬಹುಮತ ಪಡೆದಿರುವ ಬಿಜೆಪಿ ನೇತೃತ್ವದ ಎನ್’ಡಿಎ ಮೈತ್ರಿಕೂಟದ ಸಂಸದೀಯ ನಾಯಕರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರನ್ನು 15ನೆಯ ಪ್ರಧಾನಿಯನ್ನಾಗಿ ರಾಷ್ಟ್ರಪತಿಗಳು ನಿಯೋಜಿಸಿದ್ದಾರೆ.
Staked claim to form the Government. https://t.co/CKvgqxROrn
— Narendra Modi (@narendramodi) May 25, 2019
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಇಂದು ಸಂಜೆ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ತಮಗಿರುವ ಬಹುಮತದ ಪತ್ರವನ್ನು ನೀಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಿದರು.
Exercising powers vested in him under Article 75 (1) of the Constitution of India, President Kovind, today appointed @narendramodi to the office of Prime Minister of India pic.twitter.com/xrs5jgCGkF
— President of India (@rashtrapatibhvn) May 25, 2019
ಇದನ್ನು ಅಂಗೀಕರಿಸಿದ ರಾಷ್ಟ್ರಪತಿಗಳು ಮೋದಿಯವರನ್ನು ಭಾರತದ 15ನೆಯ ಪ್ರಧಾನಿಯನ್ನಾಗಿ ನಿಯೋಜಿಸಿದ್ದು, ಅವರಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕ ಹಾಗೂ ಕೇಂದ್ರ ಸಂಪುಟಕ್ಕೆ ಆಯ್ಕೆಯಾಗುವ ಸದಸ್ಯರ ಪಟ್ಟಿ ನೀಡುವಂತೆ ರಾಷ್ಟ್ರಪತಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಚಿಸಿದ್ದಾರೆ.
The President requested @narendramodi to:
i) advise him about the names of others to be appointed members of the Union Council of Ministers; and
ii) indicate the date and time of the swearing-in-ceremony to be held at Rashtrapati Bhavan
— President of India (@rashtrapatibhvn) May 25, 2019
Discussion about this post