ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಎಂಬ ಮಾತಿನಂತೆ ಕಾಯಿಲೆ ಬಂದಾದ ಮೇಲೆ ಪರದಾಡುವುದಕ್ಕಿಂತ ಕಾಯಿಲೆ, ರೋಗಗಳು ಬರದಂತೆ ಎಚ್ಚರಿಕೆಯ ನಡೆ, ಜಾಗೃತಿ ವಹಿಸುವುದು ಮುಖ್ಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸಂದೇಶ ಸಾರಿದ್ದಾರೆ.
ರಾಜ್ಯದಲ್ಲಿ ಕೊರೋನಾ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಜನರಿಗೆ ಭಯಪಡುವುದು ಬೇಡ. ಭಯದಿಂದ ಏನೂ ಸಾಧ್ಯವಿಲ್ಲ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಮುಖ್ಯ. ಒಬ್ಬರ ಬೆವರು ಇನ್ನೊಬ್ಬರಿಗೆ ಸ್ಪರ್ಶಿಸುವಂತಾಗಲೀ ಹಸ್ತಲಾಘವ ಮಾಡುವುದಾಗಲೀ ಮಾಡದೇ ಸ್ವಚ್ಛತೆಯೆಡೆಗೆ ಹೆಚ್ಚು ಗಮನ ಕೊಡಬೇಕು. ತಣ್ಣೀರು ಸೇವನೆಗಿಂತ ಸಾಧ್ಯವಾದಷ್ಟು ಬಿಸಿ ನೀರು ಸೇವಿಸುವುದು ಉತ್ತಮ ಎಂದು ಸಚಿವರು ಸಲಹೆ ನೀಡಿದ್ದಾರೆ.
ಕರ್ನಾಟಕ ಸರ್ಕಾರ ರೋಗ ಹರಡದಂತೆ ಸಾಕಷ್ಟು ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಕೊರೋನಾ ಕಾರಿಡಾರ್ ಸ್ಥಾಪಿಸಲಾಗಿದೆ. ಸೋಂಕು ಅಥವಾ ಅನುಮಾನ ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಬಹುದಾಗಿದೆ. ಜನರು ಗುಂಪು ಸೇರುವುದಾಗಲೀ, ಸಭೆ ಸಮಾರಂಭಗಳನ್ನು ನಡೆಸುವುದಾಗಲೀ ಮಾಡದಂತೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
(ವರದಿ: ಶ್ರೀಮತಿ ಸಂಧ್ಯಾ, ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093







Discussion about this post