ನವದೆಹಲಿ: ರೈಲಿನಲ್ಲಿ ಪ್ರಯಾಣಿಕರಿಗಾಗಿ ಮಾರಾಟ ಮಾಡುವ ಕಾಫಿ ಹಾಗೂ ಟೀ ಬೆಲೆಯನ್ನು ರೂ. 7ರಿಂದ ರೂ. 10ಕ್ಕೆ ಏರಿಕೆ ಮಾಡಿ ಭಾರತೀಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ತತಕ್ಷಣದಿಂದಲೇ ಈ ಹೊಸ ಬೆಲೆ ಜಾರಿಗೆ ಬಂದಿದ್ದು, ದೇಶದ ಎಲ್ಲ ರೈಲ್ವೆ ವಲಯಗಳಿಗೂ ಸಹ ಇದು ಅನ್ವಯವಾಗಲಿದೆ.
ಟೀ ಬ್ಯಾಗ್‌ನೊಂದಿಗೆ 150 ಎಂಎಲ್ ಕಪ್‌ನಲ್ಲಿ ಟೀಗೆ ರೂ.10 ಹಾಗೂ 150 ಎಂಎಲ್‌ಗೂ 10 ರೂ. ನಿಗದಿ ಮಾಡಲಾಗಿದ್ದು, ಸಿದ್ದಪಡಿಸಿದ ಸಾಮಾನ್ಯ ಟೀಗೆ ರೂ.5ನ್ನೇ ಮುಂದುವರೆಸಲಾಗುವುದು ಎಂದು ವರದಿ ಹೇಳಿದೆ.

















