ಕಲ್ಪ ಮೀಡಿಯಾ ಹೌಸ್ | ತನಕ್ಪುರ |
ಉತ್ತರಾಖಂಡ್‌ನಲ್ಲಿ #Uttarakhand ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಡೌನ್ ರಿವರ್ ರಾಫ್ಟಿಂಗ್‌ನಲ್ಲಿ #RiverRafting ಕರ್ನಾಟಕದ ಐವರು ರಾಫ್ಟರ್‌ಗಳನ್ನೊಳಗೊಂಡ ವನಿತೆಯರ ತಂಡ ಚಾಂಪಿಯನ್ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ.
ಶಿವಮೊಗ್ಗ ಸೊರಬ #Soraba ತಾಲ್ಲೂಕಿನ ಐಶ್ವರ್ಯ, ಬೆಂಗಳೂರಿನ ಪ್ರಾಂಜಲ, ಮಡಿಕೇರಿಯ #Madikeri ಪುಷ್ಪ, ಮೈಸೂರಿನ ಬಿಂದು, ಹಾಗೂ ಶಿವಮೊಗ್ಗದ ಧನಲಕ್ಷ್ಮೀ ಅವರು ಕರ್ನಾಟಕ ರಾಜ್ಯದ ತಂಡದ ಸದಸ್ಯೆಯರಾಗಿರುತ್ತಾರೆ.
Also Read>> ಕುಂಭಮೇಳ | ತ್ರಿವೇಣಿ ಸಂಗಮದಲ್ಲಿ ಡಿಸಿಎಂ ಡಿಕೆಶಿ ಪವಿತ್ರ ಸ್ನಾನ | ಅನುಭವ ಹಂಚಿಕೊಂಡಿದ್ದೇನು?
ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕೋಚ್ ಶಬ್ಬೀರ್ ಅವರು ಈ ಸಾಧಕರಿಗೆ ತರಬೇತಿ ನೀಡಿರುತ್ತಾರೆ. ಸಾಲೋಂ ವೈಯಕ್ತಿಕ ವಿಭಾಗದಲ್ಲಿ ಧಲಕ್ಷ್ಮೀ ಹಾಗೂ ಪ್ರಾಂಜಲ ಪದಕ ಗೆಲ್ಲುವಲ್ಲಿ ವಿಫಲರಾದರೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.
ಉತ್ತರಾಖಂಡ್‌ನಿಂದ ಕಲ್ಪ ನ್ಯೂಸ್ ಜೊತೆ ಮಾತನಾಡಿದ ಐಶ್ವರ್ಯ, “ನಮಗೆ ಉತ್ತಮ ರೀತಿಯಲ್ಲಿ ತರಬೇತಿ ಸಿಕ್ಕಿದೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಕೋಚ್ ಶಬ್ಬೀರ್ ಸರ್ ಅವರು ಉತ್ತಮ ರೀತಿಯಲ್ಲಿ ತರಬೇತಿ ನೀಡಿದ ಪರಿಣಾಮ ಈ ಯಶಸ್ಸು ಸಾಧಿಸಲು ಸಾಧ್ಯವಾಯಿತು. ವೈಯಕ್ತಿಕ ವಿಭಾಗದಲ್ಲಿಯು ಬಂಗಾರದ ಪದಕ ಗೆದ್ದಿರುವುದು ಹೆಮ್ಮೆ ಎನಿಸಿದೆ. ಮುಂದಿನ ಸ್ಪರ್ಧೆಗಳಲ್ಲಿ ಯಶಸ್ಸು ಕಾಣುವತ್ತ ಪ್ರಯತ್ನ ಮುಂದುವರಿಸುತ್ತೇವೆ. ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಇನ್ನೂ ಉತ್ತಮ ಪ್ರದರ್ಶನ ತೋರಿ ಪದಕ ಗೆಲ್ಲುವ ಗುರಿ ಇದೆ” ಎಂದು ಹೇಳಿದರು.
ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ವಾಣಿವಿಲಾಸ ಸಾಗರದಲ್ಲಿ ಕೋಚ್ ಹಾಗೂ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಬ್ಬೀರ್, ಕಲ್ಪಾ ನ್ಯೂಸ್ ಜೊತೆ ಮಾತನಾಡಿ, “ನಮ್ಮ ತಂಡದಲ್ಲಿ ಹಳ್ಳಿಯ ಹಾಗೂ ಬಡವರ ಮನೆ ಮಕ್ಕಳೇ ಹೆಚ್ಚು. ಇವರಿಗೆ ಕಳೆದ ಆರು ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ. ಇವರೆಲ್ಲರೂ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದ್ದಾರೆ ಎಂದರು.
ರಾಜ್ಯದ ವಾಣಿ ವಿಲಾಸ, ದಾಂಡೇಲಿ ಹಾಗೂ ಬರಪೊಳೆಯಲ್ಲಿ ತರಬೇತಿ ನೀಡಲಾಗಿದೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯು ಎಲ್ಲ ರೀತಿಯ ಪ್ರೋತ್ಸಾಃವನ್ನು ನೀಡಿದೆ, ಇನ್ನುಳಿದ ಸ್ಪರ್ಧೆಗಳಲ್ಲೂ ಪದಕ ಗೆಲ್ಲುತ್ತಾರೆಂಬ ಆತ್ಮವಿಶ್ವಾಸವಿದೆ ರಿವರ್ ರಾಫ್ಟಿಂಗ್‌ನಲ್ಲಿ ಉತ್ತರಾಖಂಡ, ಮಧ್ಯಪ್ರದೇಶ, ಮಿಜೋರಾಂ ಹಾಗೂ ಸರ್ವಿಸಸ್ ತಂಡಗಳು ಬಲಿಷ್ಠವಾಗಿರುತ್ತವೆ. ಏಕೆಂದರೆ ಅಲ್ಲಿಯ ನದಿಗಳ ಅರಿವು ಸ್ಪರ್ಧಿಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೂ ನಮ್ಮ ರಾಜ್ಯದ ಯುವತಿಯರು ದಿಟ್ಟ ಹೋರಾಟ ನೀಡಿ ಚಿನ್ನ ಗೆದ್ದಿರುವುದು ಹೆಮ್ಮೆಯ ಸಂಗತಿ ಎಂದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post