ಕಲ್ಪ ಮೀಡಿಯಾ ಹೌಸ್ | ಬಂಡೀಪುರ |
ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ #PMNarendraModi ಅವರು ಇಂದು ಬಂಡೀಪುರ #Bandipura ಅಭಯಾರಣ್ಯಕ್ಕೆ ಭೇಟಿ ನೀಡಿ ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ಸೌಂದರ್ಯ ಸವಿದರು.
ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿರುವ ಬಂಡೀಪುರ ಹುಲಿ ಯೋಜನೆ #BandipurTigerReserve ಘೋಷಣೆಯಾಗಿ ಇಂದಿಗೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಹೆಲಿಕಾಪ್ಟರ್ ಮೂಲಕ ಬಂಡೀಪುರಕ್ಕೆ ಆಗಮಿಸಿದ್ದಾರೆ.

ಬಂಡೀಪುರ ಕ್ಯಾಂಪ್’ನಿಂದ ಬೋಳಗುಡ್ಡ ಆ್ಯಂಟಿ ಪೋಚಿಂಗ್ ಕ್ಯಾಂಪ್’ಗೂ ಭೇಟಿ ನೀಡಿರುವ ಅವರು ಬೋಳಗುಡ್ಡದಿಂದ ಅರಣ್ಯ ವೀಕ್ಷಿಸಿ, ನಂತರ ಮಧುಮಲೈ ಆನೆ ಶಿಬಿರಕ್ಕೆ ಭೇಟಿ ನೀಡಿದರು.
ಇದಕ್ಕೂ ಮುನ್ನ ಇಂದು ಬೆಳಗ್ಗೆ ಪ್ರಧಾನಿ ಮೋದಿಯವರು ಬಂಡೀಪುರದಲ್ಲಿ ಹುಲಿ ಸಂರಕ್ಷಣೆ #ProjectTiger ಯೋಜನೆಯ ಸುವರ್ಣ ವರ್ಷಾಚರಣೆ ಅಂಗವಾಗಿ ಅಂಚೆಚೀಟಿ ಬಿಡುಗಡೆ ಮಾಡಿದರು.

ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿಗೆ ಬಂಡೀಪುರಕ್ಕೆ #Bandipura ಭೇಟಿ ನೀಡಿದ್ದಾರೆ. ಹೀಗಾಗಿ, ಸಫಾರಿಗೆ ಸೂಕ್ತವಾಗುವ ವಿಶೇಷ ಉಡುಪಿನಲ್ಲಿ ಪ್ರಧಾನಿ ಮೋದಿ ಪಯಣ ಮಾಡಿದ್ದು ಅದರ ಫೋಟೋ, ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮೈಸೂರಿನಿಂದ #Mysore ಬೆಳಗ್ಗೆ ಮೇಲುಕಾಮನಹಳ್ಳಿ ಹೆಲಿಪ್ಯಾಡ್’ಗೆ ಬಂದಿಳಿದ ಮೋದಿ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳಾದ ಮುರುಳಿ, ಸುಬ್ರಮಣ್ಯ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರುಗಳು ಸ್ವಾಗಸಿದರು. ಬೆಳಗ್ಗೆ 7:35ರ ವೇಳೆಗೆ ಬಂಡೀಪುರ ಕ್ಯಾಂಪಸ್’ಗೆ ತಲುಪಿದ ಮೋದಿ ಅವರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ತೆರೆದ ಜೀಪ್’ನಲ್ಲಿ ಸಫಾರಿ
ಮಹೀಂದ್ರಾ ಬೊಲೆರೋ ಜೀಪ್’ನಲ್ಲಿ ಸುಮಾರು 22 ಕಿಮೀ ದೂರ 2 ಗಂಟೆಗಳ ಕಾಲ ಸಫಾರಿ ನಡೆಸಿದ ಮೋದಿಯವರು ಪ್ರಕೃತಿ ಸೌಂದರ್ಯ ಹಾಗೂ ವನ್ಯಜೀವಿಗಳ ಸೌಂದರ್ಯ ಸವಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post