ಕಲ್ಪ ಮೀಡಿಯಾ ಹೌಸ್ | ನಾಸಿಕ್ |
ಮಹಾರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ #NarendraModi ಅವರು ಅಲ್ಲಿನ ಕಲಾರಾಮ ದೇವಾಲಯದ #KalaramaMandir ಆವರಣವನ್ನು ಸ್ವತಃ ಅವರೇ ಸ್ವಚ್ಛಗೊಳಿಸಿದ್ದು, ಇದರ ದೃಶ್ಯಗಳು ವ್ಯಾಪಕ ವೈರಲ್ ಆಗಿದೆ.
ಈ ಕುರಿತಂತೆ ಸಂಸದ ಪ್ರತಾಪ್ ಸಿಂಹ #PratapSimha ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಹಾರಾಷ್ಟ್ರದ ನಾಸಿಕ್’ನಲ್ಲಿರುವ #Nasik ಕಲಾರಾಮ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ.

Prime Minister Modiji undertakes Swachhata drive at Kalaram Temple in Nashik, leads by example and inspires countrymen. He has given a clarion call to take up a campaign to clean our Temples and places of worship between 14-22nd Jan. pic.twitter.com/IUiKuqSZSZ
— Pratap Simha (@mepratap) January 12, 2024
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ದೇಶದಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಪ್ರಧಾನಿ ಜನರಿಗೆ ಮನವಿ ಮಾಡಿದ್ದಾರೆ.

ಇನ್ನು, ಹಲವಾರು ಪುರೋಹಿತರು ರಾಮ ಭಜನೆ ಹಾಡುತ್ತಿರುವಾಗ ಪ್ರಧಾನಿಯವರು ಸಂಗೀತ ವಾದ್ಯವನ್ನು ನುಡಿಸುತ್ತಾ ದೇವಾಲಯದಲ್ಲಿ ನೆಲದ ಮೇಲೆ ಕುಳಿತಿರುವ ದೃಶ್ಯಗಳು ವೈರಲ್ ಆಗಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post