ನವದೆಹಲಿ: ದೇಶದಾದ್ಯಂತ ಶರನ್ನವರಾತ್ರಿ ಸಂಭ್ರಮ ಸಂಪನ್ನದ ಹಂತಕ್ಕೆ ಬಂದಿದ್ದು, ನವದೆಹಲಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮಗದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ಬಾಣ ಬಿಡುವ ಮೂಲಕ ರಾವಣನನ್ನು ದಹಿಸಿದರು.
Joined the Vijayadashami programme in Delhi, which was attended by Rashtrapati Ji and several others. pic.twitter.com/2cCvYGiaFu
— Narendra Modi (@narendramodi) October 19, 2018
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶದ ಜನತೆಗೆ ವಿಜಯದಶಮಿ ಶುಭಾಶಯ ಕೋರಿದರು.
More glimpses from the Vijayadashami programme in Delhi. pic.twitter.com/CK2FUOYjwU
— Narendra Modi (@narendramodi) October 19, 2018
ಈ ವೇಳೆ ಮಾತನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್, ನಾವು ರಾಮನ ಜೀವನದಿಂದ ಸ್ಫೂರ್ತಿ ಪಡೆದುಕೊಂಡು ಹೋಗಬೇಕು. ಭಗವಾನ್ ರಾಮ ಜನಸಾಮಾನ್ಯರ ಹಾಗೂ ಪರಿಸರದ ಸಹಾಯದಿಂದ ರಾವಣನ ವಿರುದ್ಧ ಜಯಸಾಧಿಸಿದರು. ನಾವು ನಮ್ಮ ಒಳಗೆ ಹಾಗೋ ಸುತ್ತಲೂ ರಾವಣನ ರೂಪದಲ್ಲಿರುವ ಎಲ್ಲಾ ದುಷ್ಟ ಶಕ್ತಿಯನ್ನು ನಾಶಪಡಿಸಬೇಕು. ನಾವು ಯಾರನ್ನೂ ನೋಯಿಸದೆ ನಮ್ಮ ಹಬ್ಬವನ್ನು ಆಚರಿಸೋಣ ಎಂದರು.
ಪಶ್ಚಿಮ ಭಾರತದಲ್ಲಿ ದುರ್ಗಾ ಪೂಜೆ ಅಂತಿಮ ದಿನವಾಗಿ ವಿಜಯದಶಮಿ ಆಚರಿಸಿದರೆ, ಉತ್ತರ ಭಾರತದಾದ್ಯಂತ ದಸರಾ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ವೇಳೆ ದುಷ್ಟ ಸಂಹಾರದ ಸಂಕೇತವಾಗಿ ರಾವಣ, ಕುಂಭಕರ್ಣ, ಪ್ರತಿಕೃತಿಗಳನ್ನು ನಿರ್ಮಿಸಿ ಅವುಗಳನ್ನು ದಹಿಸಲಾಗುತ್ತದೆ.
Watch Live: Prime Minister @narendramodi attends #Dussehra festivities at Delhi’s Ramleela grounds https://t.co/mh0bkETjSx pic.twitter.com/GeRCSTR9P7
— Doordarshan News (@DDNewsLive) October 19, 2018
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರುಗಳು, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.
Discussion about this post