ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳಲ್ಲಿ ವರದಿಯಿಂದ ಪಕ್ಷದ ಕಾರ್ಯಕರ್ತರು ಭರವಸೆ ಕಳೆದುಕೊಳ್ಳುವುದು ಬೇಡ ಎಂದು ಪ್ರಿಯಾಂಕಾ ವಾದ್ರಾ ಕರೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಚುನಾವಣೋತ್ತರ ಸಮೀಕ್ಷೆಗಳ ಯಾವುದೇ ವರದಿಗಳನ್ನು ನಂಬಬೇಡಿ. ಸಮೀಕ್ಷೆಗಳ ಮೂಲಕ ಬಿಜೆಪಿ ವಿಜಯ ದಾಖಲಿಸಲಿದೆ ಎಂದು ಕೇವಲ ಬಿಂಬಿಸಲಾಗುತ್ತಿದೆ. ಹೀಗಾಗಿ, ಯಾವ ಕಾರ್ಯಕರ್ತರು ಹತಾಷರಾಗುವ ಅಗತ್ಯವಿಲ್ಲ. ಸಮೀಕ್ಷಾ ವರದಿಗಳನ್ನು ಮೀರಿ ಕಾಂಗ್ರೆಸ್ ಜಯ ದಾಖಲಿಸಲಿದೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿಗರು ಇವಿಎಂ ಮಷೀನ್’ಗಳನ್ನು ಬದಲಾವಣೆ ಮಾಡುವ ಸಾಧ್ಯತೆಯಿದೆ. ಹೀಗಾಗಿ, ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚು ಸಕ್ರಿಯರಾಗಿ, ಇವಿಎಂ ಮಷೀನ್’ಗಳನ್ನು ಬದಲಾವಣೆ ಮಾಡಲು ಸಾಧ್ಯವಾಗದಂತೆ ಎಚ್ಚರವಹಿಸಿ ಎಂದಿದ್ದಾರೆ.
Discussion about this post