ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಿಆರ್’ಕೆ ಪ್ರೊಡಕ್ಷನ್ ಅಡಿಯಲ್ಲಿ ತೆರೆಗೆ ಬರಲು ಸಿದ್ದವಾಗುತ್ತಿರುವ ಕವಲುದಾರಿ ಚಿತ್ರದ ಆಡಿಯೋವನ್ನು ಮಾರ್ಚ್ 5ರಂದು ಯೂಟ್ಯೂಬ್’ನಲ್ಲಿ ರಿಲೀಸ್ ಮಾಡಲಾಗುತ್ತಿದೆ.
ಈ ವಿಚಾರವನ್ನು ಸ್ವತಃ ಪುನೀತ್ ರಾಜಕುಮಾರ್ ಟ್ವೀಟ್ ಮಾಡಿದ್ದು, ‘ಕವಲುದಾರಿ’ ಪಿಆರ್’ಕೆ ಪ್ರೊಡಕ್ಷನ್’ನ ಮೊದಲ ಚಿತ್ರವಾಗಿದ್ದು, ಮಾರ್ಚ್ 5ರಂದು ಪಿಆರ್’ಕೆ ಆಡಿಯೋ ಯೂಟ್ಯೂಬ್ ಚಾನಲ್’ನಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ide March 5th #PRKProductions 1st Film #Kavaludaari Audio Release Madtiddivi on #PRKAudio YouTube Channel 🙏 #KavaludaariAudio pic.twitter.com/OlXVC1nVUb
— Puneeth Rajkumar (@PuneethRajkumar) March 2, 2019
ಕವಲುದಾರಿ ಸಸ್ಪೆನ್ಸ್ ಥ್ರಿಲ್ಲರ್(ಪತ್ತೆದಾರಿ) ಚಿತ್ರವಾಗಿದ್ದು, ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಖ್ಯಾತಿ ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಪಿಆರ್’ಕೆ ಪ್ರೊಡಕ್ಷನ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಆಪರೇಶನ್ ಅಲಮೇಲಮ್ಮ ಚಿತ್ರ ಖ್ಯಾತಿಯ ರಿಷಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಹಿರಿಯ ನಟ ಅನಂತನಾಗ್, ಅಚ್ಯುತ ಕುಮಾರ್, ಸುಮನ್ ರಂಗನಾಥ್ ಹಾಗೂ ರೋಶ್ನಿ ಪ್ರಕಾಶ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದೆ.
Discussion about this post