ಕಲ್ಪ ಮೀಡಿಯಾ ಹೌಸ್ | ಶಬರಿಮಲೆ |
ಕೇರಳದ ಶಬರಿಮಲೆ ಬಳಿಯಲ್ಲಿ ಕರ್ನಾಟಕದ ಮಾಲಾಧಾರಿಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿ, ಮಾಲಾಧಾರಿಗಳಿಂದ ಪ್ರತಿಭಟನೆ ನಡೆದಿದೆ.
ಎರುಮಲೈನಿಂದ ಮುಂದಕ್ಕೆ ಕರ್ನಾಟಕದ ಮಾಲಾಧಾರಿಗಳಿಗೆ ಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ಮಾಲಾಧಾರಿಗಳು ರಸ್ತೆಯಲ್ಲಿ ಧರಣಿ ಕುಳಿತು ಭಜನ ಮಾಡುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಪ್ರಮುಖವಾಗಿ, ಕರ್ನಾಟಕದ ನೊಂದಣಿ ಇರುವ ವಾಹನಗಳಿಗೆ ನಿರ್ಬಂಧ ಹೇರಿ, ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಆದರೆ, ಕೇರಳ ಹಾಗೂ ಇತರೆ ವಾಹನಗಳಿಗೆ ಮಾತ್ರ ಒಳಗೆ ಬಿಡಲಾಗುತ್ತಿದೆ ಎಂದು ಮಾಲಾದಾರಿಗಳು ಆರೋಪಿಸುತ್ತಿದ್ದಾರೆ.
ಎರಿಮಲೈಯಿಂದ ಪಂಪಗೆ ಹೋಗಲು ಕೇರಳ ಬಸ್’ಗಳಲ್ಲಿ ಹೋಗುವಂತೆ ಹಾಗೂ ಕರ್ನಾಟಕದಿಂದ ವಾಹನ ಮಾಡಿಕೊಂಡು ಬರುವ ಯಾತ್ರಾತ್ರಿಗಳಿಗೆ ಪಾರ್ಕಿಂಗ್ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















