No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Thursday, July 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ಕನ್ನಡಿಗರ ಸಂಸ್ಕೃತಿಯನ್ನು ಬಿಂಬಿಸುವಂತಹ ಗಾದೆ ಮಾತುಗಳು

kalpa News by kalpa News
December 11, 2024
in ಆನಂದ ಕಂದ
0
ಕನ್ನಡಿಗರ ಸಂಸ್ಕೃತಿಯನ್ನು ಬಿಂಬಿಸುವಂತಹ ಗಾದೆ ಮಾತುಗಳು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-17  |
ಕನ್ನಡ ಭಾಷೆಯು ಸಂಪತ್ತು ಹಾಗೂ ಸಂಸ್ಕೃತಿ ಉಳ್ಳಂತಹ ಭಾಷೆಯಾಗಿದೆ. ಭಾರತೀಯ ಪಾರಂಪರಿಕ ಸಂಸ್ಕೃತಿಯಿಂದ ಪೋಷಿಸಲ್ಪಟ್ಟ ಈ ಭಾಷೆ ಸುಸಂಸ್ಕೃತವೂ ಹಾಗೂ ಸುಂದರವೂ ಪುರಾತನವೂ ಆಗಿದೆ.

ಈ ಭಾಷೆಯ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವೇ ಗಾದೆ ಮಾತುಗಳು. ನಮ್ಮ ಪೂರ್ವಜರ ಅನುಭವದ ಸಾರಾಂಶವನ್ನು ಸುಲಭವಾಗಿ ಜನರಿಗೆ ತಲುಪಿಸುವ ಪರಿಯೇ ಈ ಗಾದೆ ಮಾತುಗಳು. ನಮ್ಮ ಭಾಷೆ ನಮ್ಮ ಜನರ ಸಂಸ್ಕೃತಿಯನ್ನು ಬಿಂಬಿಸುವ ಈ ಗಾದೆಗಳು ದಿನನಿತ್ಯದ ವ್ಯವಹಾರಿಕ ಭಾಷೆಯ ಅಂಗವಾಗಿವೆ. ಗಾದೆಗಳಲ್ಲಿ ಕೆಲವೊಂದು ಗಾದೆಗಳು ನೀತಿಯೊಡನೆ ನಮ್ಮ ಸಂಸ್ಕೃತಿಯನ್ನು ತಿಳಿಸುತ್ತವೆ. “ವೇದ ಸುಳ್ಳಾದರು ಗಾದೆ ಸುಳ್ಳಾಗದು” ಎಂಬ ಗಾದೆಯಂತೆ ಈ ಗಾದೆಗಳು ಸತ್ಯವನ್ನೇ ನಡೆಯುತ್ತವೆ. ಅಂತಹ ಕೆಲವು ಗಾದೆ ಮಾತುಗಳನ್ನು ಉದಾಹರಣೆಯ ರೂಪದಲ್ಲಿ ನೋಡುತ್ತಾ, ಗಾದೆ ಮಾತುಗಳು ಸಂಸ್ಕೃತಿಯೊಂದಿಗೆ ಹೇಗೆ ಬೆಸೆದುಕೊಂಡಿವೆ  ಎಂಬುದನ್ನು ಗಮನಿಸೋಣ.

“ದುಡ್ಡೇ ದೊಡ್ಡಪ್ಪ ದುಡಿಮೇಯೇ ದೇವರು” ಎಂಬ ಈ ಗಾದೆ ಮಾತಿನಲ್ಲಿ ದುಡಿಮೆಯ ಮಹತ್ವವನ್ನು ಎತ್ತಿ ತೋರಲಾಗಿದೆ. ಕಾಯಕವೇ ಕೈಲಾಸ ಎಂಬಂತೆ ನಾವು ಮಾಡುವ ಕೆಲಸ ನಮಗೆ ಹಿತ ಹಾಗೂ ನಮ್ಮ ಪ್ರಾಮಾಣಿಕವಾದ ಕೆಲಸವೇ ಮೋಕ್ಷದವರೆಗೂ ನಮ್ಮನ್ನು ಕರೆದೊಯುತ್ತವೆ. ಅಂತೆಯೇ ಮೋಕ್ಷದ ದಾರಿ ತೋರುವ ದುಡಿಮೆಗೆ ನಮ್ಮ ಜೀವನದಲ್ಲಿ ಅತ್ಯಂತ ಎತ್ತರದ ಸ್ಥಾನವಾದ ಮಾತೃಸ್ಥಾನವನ್ನು ನೀಡಲಾಗೀದೆ ಎಂದು ಹೇಳುವಾಗ ದುಡಿಮೆಯೇ ದೇವರು ಎಂದು ಹೇಳಲಾಗಿದೆ. ಇದರಿಂದ ನಾವು ಅರಿಯಬಹುದಾದ ಒಂದು ಅಂಶ ತಾಯಿಯನ್ನು ನಾವು ದೇವರಂತೆ ಉತ್ತಮ ಸ್ಥಾನದಲ್ಲಿ ಕಾಣುತ್ತೇವೆ. ತಾಯಿಯನ್ನು ಗೌರವಿಸುವುದು, ಪೂಜ್ಯಳಾಗಿ ಕಾಣುವುದು ನಮ್ಮ ಸಂಸ್ಕೃತಿಯ ಒಂದು ವಿಶಿಷ್ಟ ಅಂಗವಾಗಿದೆ. ಮಾತೃದೇವೋಭವ ಎಂಬ ಸಂಸ್ಕೃತದ ಮಾತು ತಾಯಿಯನ್ನು ದೇವರು ಎಂದು ತಿಳಿಸುತ್ತದೆ. ಅಂತಹ ದೈವಸ್ಥರೂಪಿಯಾದ ಮಾತೆಗೆ ದುಡಿಮೆಯನ್ನು ಹೋಲಿಕೆ ಮಾಡಿರುವುದು ನಮ್ಮ ಸಂಸ್ಕೃತಿಯ ಒಂದು ವಿಶಿಷ್ಟವಾದ ಹಿರಿಮೆಯನ್ನು ತೋರಿಸಿ ಕೊಡುತ್ತದೆ.“ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಈ ಮಾತಿನಲ್ಲಿ ನಮ್ಮ ಜನರು ಹೊರಗಿನ ತೋರಿಕೆಯಲ್ಲದೆ ಗುಣಗಳನ್ನು ಹೆಚ್ಚಾಗಿ ಪರಿಗಣಿಸುತ್ತಾರೆ ಎಂಬುದನ್ನು ಅರಿಯಬಹುದು. ಬಾಹ್ಯ ಅಂಶಗಳಿಗೆ ಬೆಲೆಯನ್ನು ಕೊಡದೆ ಆಂತರಿಕ ಗುಣಕ್ಕೆ ಬೆಲೆ ಕೊಡುವುದರ ಮೂಲಕ ಭಾರತೀಯರು ಗುಣ ಗ್ರಾಹಿಗಳಾಗಿದ್ದರು ಎಂಬ ಬಹು ಮುಖ್ಯವಾದ ಅಂಶವನ್ನು ಈ ಗಾದೆ ಮಾತು ತಿಳಿಸಿಕೊಡುತ್ತದೆ.

“ಶಕ್ತಿಗಿಂತ ಯುಕ್ತಿ ಮೇಲು” ಎಂಬ ಗಾದೆಯಲ್ಲಿ ಕನ್ನಡಿಗರ ದೃಷ್ಟಿಕೋನ ವಿಚಾರವು ತುಂಬಾ ಉತ್ತಮವಾಗಿ ಮೂಡಿಬಂದಿದೆ. ಈ ಗಾದೆಯಲ್ಲಿ ನಮ್ಮಲ್ಲಿ ಕೇವಲ‌ ಶ್ರಮಿಕರನ್ನು ಮಾತ್ರವಲ್ಲದೇ ಯುಕ್ತಿಯಿಂದ ಕೆಲಸ ಮಾಡಬಲ್ಲ ಜ್ಞಾನಿಗಳೂ ಇದ್ದರು ಎಂಬ ವಿಷಯವನ್ನು ಮನಗಾಣಬಹುದು. ಜೊತೆಗೆ ಯುಕ್ತಿಯಿಂದ ಸಾಕಷ್ಟು ಕೆಲಸಗಳನ್ನು ಮಾಡಬಹುದೆಂಬ ವಿಚಾರವನ್ನು ತಿಳಿಯುವುದರೊಂದಿಗೆ ಯುಕ್ತಿಗೆ ಉನ್ನತ ಸ್ಥಾನವಿತ್ತು ಎಂಬುದನ್ನು ಅರಿಯಬಹುದು.ಹೀಗೆ ನಮ್ಮ ಸಂಸ್ಕೃತಿಯಲ್ಲಿ ಗಾದೆ ಮಾತುಗಳು ನೀತಿ ಹಾಗೂ ಸಂಸ್ಕೃತಿಯನ್ನು ವಿವರಿಸುತ್ತವೆ. ಗಾದೆ ಮಾತುಗಳ ಬಳಕೆಯಿಂದ ನಮಗೆ ಭಾಷೆಯ ಮೇಲಿನ ಅಭಿಮಾನ, ಸಂಸ್ಕೃತಿಯ ಮೇಲಿನ ಭರವಸೆ ಹೆಚ್ಚುತ್ತದೆ.  ಹೀಗೆ ನಾವು ಗಾದೆಗಳನ್ನು ಪ್ರತಿನಿತ್ಯದ ನಮ್ಮ ಮಾತಿನಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕವಾಗಿ ನಮ್ಮ ಭಾಷೆಯ ಅಮೂಲ್ಯ ಸಂಪತ್ತಾದ ಗಾದೆ ಮಾತುಗಳನ್ನು ಕಾಯ್ದುಕೊಳ್ಳುವ ಹಾಗೆ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಂತಹ ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡಬೇಕು. ಇದು ಕೇವಲ ಗಾದೆ ಮಾತಿನ ಸಂರಕ್ಷಣೆ ಮಾತ್ರವಾಗಿರದೆ ಒಂದು ನಾಡಿನ ಸಂಸ್ಕೃತಿಯನ್ನು ಅದರ ಶ್ರೀಮಂತಿಕೆಯನ್ನು ಉಳಿಸುವಂತಹ ಮಹತ್ಕಾರ್ಯವೇ ಆಗಿದೆ ಎಂದು ಹೇಳಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: GadeKannada News WebsiteLatest News KannadaProverbProverbsಕನ್ನಡ ಭಾಷೆಕಾಯಕವೇ ಕೈಲಾಸಭಾರತೀಯ ಪಾರಂಪರಿಕ ಸಂಸ್ಕೃತಿಭಾಷೆಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದುಶಕ್ತಿಗಿಂತ ಯುಕ್ತಿ ಮೇಲುಸಂಸ್ಕೃತಿ
Share199Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ಸಾಗರ | ಖಾಸಗಿ ಲಾಡ್ಜ್‌ನಲ್ಲಿ ಶಿರಸಿ ಮೂಲದ ವ್ಯಕ್ತಿ ನೇಣಿಗೆ ಶರಣು

Next Post

ಜಂಕ್ ಫುಡ್ ತ್ಯಜಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ

kalpa News

kalpa News

Next Post
ಜಂಕ್ ಫುಡ್ ತ್ಯಜಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ

ಜಂಕ್ ಫುಡ್ ತ್ಯಜಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL