ಜಮ್ಮು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಾದ್ಯಂತ ತುರ್ತಾಗಿ ಭಾರೀ ಸಂಖ್ಯೆಯಲ್ಲಿ ಪ್ಯಾರಾ ಮಿಲಿಟಲಿ ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಿರುವುದು ಭಾರೀ ಕುತೂಹಲ ಕೆರಳಿಸಿದೆ.
ಇಂದು ಮುಂಜಾನೆ ಕೇಂದ್ರ ಸರ್ಕಾರ ಏಕಾಏಕಿ ಪ್ಯಾರಾಮಿಲಿಟರಿಯ ಸುಮಾರು 100 ಪಡೆಗಳನ್ನು ನಿಯೋಜನೆ ಮಾಡಿದ್ದು, ಈ ತುರ್ತು ನಿಯೋಜನೆಗೆ ಯಾವುದೇ ನಿರ್ಧಿಷ್ಠ ಕಾರಣಗಳು ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ.
ಅಲ್ಲದೇ, ಭದ್ರತಾ ಪಡೆಗಳು ಪ್ರತ್ಯೇಕತಾವಾದಿ ನಾಯಕ ಮತ್ತು ಜೆಕೆಎಲ್’ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಮತ್ತು ಇನ್ನಿತರರನ್ನು ಶುಕ್ರವಾರ ತಡವಾಗಿ ಪ್ರಮುಖ ಆರೋಪದ ಮೇಲೆ ಬಂಧಿಸಿರುವ ಕೆಲವೇ ಗಂಟೆಗಳ ನಂತರ ಈ ಕ್ರಮ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.
Discussion about this post